ಮಡಿಕೇರಿ, ಜ. ೧೬: ಜಿಲ್ಲೆಯ ವಿವಿಧೆಡೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸುAಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಗರಹಳ್ಳಿ ಗ್ರಾಮದ ತಿಮ್ಮಯ್ಯ ಬಿ.ಸಿ. ಎಂಬ ಕೂರ್ಗ್ ಹಳ್ಳಿ ಎಸ್ಟೇಟ್‌ನಲ್ಲಿನ ಮನೆಗೆ ತಾ.೭ ರಂದು ಬೀಗ ಮುರಿದು ನುಗ್ಗಿ ಗಾಡ್ರೇಜ್‌ನಲ್ಲಿದ್ದ ಬೆಳ್ಳಿ ಚೆಂಬು, ಒಂದು ಮೊಬೈಲ್ ಮತ್ತು ಒಂದು ವಾಚ್‌ಅನ್ನು ಕಳವು ಮಾಡಲಾಗಿತ್ತು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸುಂಟಿಕೊಪ್ಪ ಠಾಣಾ ಸಿಬ್ಬಂದಿ ಭೇಟಿ ನೀಡಿದ್ದರು.

ಬಳಿಕ ಎಸ್ಪಿ ರಾಮರಾಜನ್ ಅವರ ನಿರ್ದೇಶನದಂತೆ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೆ, ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್ ಎಂ.ಸಿ ಹಾಗೂ ಸಿಬ್ಬಂದಿ ಮತ್ತು ಅಪರಾಧ ಪತ್ತೆ ಸಿಬ್ಬಂದಿ ಒಳಗೊಂಡAತೆ ವಿಶೇಷ ತಂಡ ತನಿಖೆ ಕೈಗೊಂಡು ತಾ.೧೪ರಂದು ವೀರಾಜಪೇಟೆ ಮಾಗೋಳ್ಳಿ ಗ್ರಾಮ ನಿವಾಸಿ ವೀರೇಶ್ ಕುಮಾರ್ (೩೨) ಎಂಬಾತನನ್ನು ಬಂಧಿಸಿ ಒಂದು ಮೊಬೈಲ್, ಒಂದು ಬೆಳ್ಳಿ ಚೆಂಬು ಮತ್ತು ಒಂದು ವಾಚ್ ಅನ್ನು ವಶಪಡಿಸಿಕೊಂಡಿದೆ. ಬಂಧಿತ ಆರೋಪಿಯ ಮೇಲೆ ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ೧, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ೧, ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ೨, ಕುಟ್ಟ ಪೊಲೀಸ್ ಠಾಣೆಯಲ್ಲಿ ೨, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ೩ ಸೇರಿದಂತೆ ಒಟ್ಟು ೯ ಕಳವು ಪ್ರಕರಣಗಳು ದಾಖಲಾಗಿವೆ.