ಗೋಣಿಕೊಪ್ಪ ವರದಿ, ಜ. ೧೬: ಎನ್.ಜಿ.ಒ. ಹೆಸರಿನಲ್ಲಿ ಜಿಲ್ಲೆಗೆ ಆಗಮಿಸುವವರು ಬಡ ವರ್ಗದವರ ನೈಜ ಸಮಸ್ಯೆ ಪರಿಹರಿಸದೆ ಒಡಕು ಮೂಡಿಸುವ ಕೃತ್ಯದಲ್ಲಿ ತೊಡಗಿ ಕೊಂಡಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮುಕ್ಕಾಟೀರ ಶಿವು ಮಾದಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಕಾರ್ಮಿಕರನ್ನು ಜೀತದಾಳು ರೀತಿ ಬಿಂಬಿಸಿಕೊAಡು ರೈತಾಪಿ ವರ್ಗ ವನ್ನು ಕೀಳಾಗಿ ಕಾಣುವ ಹಂತಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಎನ್.ಜಿ.ಓ.ಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಉದ್ದೇಶವಿದ್ದರೆ ಅವರಿಗೆ ಸರ್ಕಾರದ ಮೂಲಕ ಸಂಪೂರ್ಣ ಸವಲತ್ತು ನೀಡಲು ಯೋಜನೆ ರೂಪಿಸಬೇಕು ಎಂದು ಒತ್ತಾಯಿ ಸಿದರು. ಪೈಸಾರಿ ಜಾಗದಲ್ಲಿ ಕಾರ್ಮಿಕ ವರ್ಗದವರನ್ನು ಶೆಡ್ ನಿರ್ಮಿಸಿ ಹೋರಾಟಕ್ಕೆ ಬಿಡುವುದರಿಂದ ಸಮಸ್ಯೆ ಪರಿಹಾರ ಕಾಣುವುದಿಲ್ಲ. ಅವರಿಗೆ ಸೂಕ್ತವಾದ ಮನೆ, ನೀರು, ರಸ್ತೆ, ಆಹಾರ ವ್ಯವಸ್ಥೆ, ಆರೋಗ್ಯಕ್ಕೆ ಪೂರಕ ಮೂಲ ಸೌಕರ್ಯ ಒದಗಿಸುವ ಜವಾಬ್ದಾರಿ ಕೂಡ ಇದೆ. ಇದನ್ನು ರೈತಾಪಿ ವರ್ಗ ನಿಭಾಯಿ ಸುತ್ತಿದೆ. ಆದರೆ, ಎನ್‌ಜಿಒಗಳು ಅನವಶ್ಯಕವಾಗಿ ಕಾರ್ಮಿಕರ ಮನವೊಲಿಕೆ ಮಾಡಿ ಅನ್ಯಾಯ ಮಾಡುತ್ತಿದೆ. ರೈತಾಪಿ ವರ್ಗದ ಮೇಲೆ ಮೊಕದ್ದಮೆ ಹೂಡಲು ಕುಮ್ಮಕ್ಕು ನೀಡುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿ.ಪಂ., ಶಾಸಕರು, ಸಂಸದರು ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ. ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡುವ ಕಾರ್ಯ ಆಗಬೇಕಿದೆ ಎಂದರು. ಹೈಸೊಡ್ಲೂರು, ಬಿಟ್ಟಂಗಾಲ, ಕೆದಮುಳ್ಳೂರು ವ್ಯಾಪ್ತಿ ಯಲ್ಲಿ ದಿಕ್ಕುತಪ್ಪಿಸಿ ಶೆಡ್ ನಿರ್ಮಿಸಿ ಹೋರಾಟಕ್ಕೆ ಬಿಟ್ಟಿರುವುದರಿಂದ ನ್ಯಾಯ ದೊರಕುತ್ತಿಲ್ಲ. ಇವರಿಗೆ ಎನ್.ಜಿ.ಓ.ಗಳು ಸೂಕ್ತ ಮೂಲ ಭೂತ ವ್ಯವಸ್ಥೆ ಕಲ್ಪಿಸ ಬೇಕು. ಇಂತಹವರ ವಿರುದ್ಧ ಸಂಘ-ಸAಸ್ಥೆಗಳು, ಸಾರ್ವ ಜನಿಕರು ಕಠಿಣ ಕ್ರಮಕ್ಕೆ ಆಗ್ರಹಿಸ ಬೇಕಿದೆ ಎಂದರು. ಹೋರಾಟ ನಿರತರು, ದೂರದಲ್ಲಿ ಸರ್ಕಾರದ ಆಶ್ರಯ ಪಡೆದವರಿಗೆ ಮೂಲಭೂತ ಸೌಕರ್ಯ ದೊರೆಯುತ್ತಿಲ್ಲ. ಕೆಲಸಕ್ಕೆ ನಿತ್ಯ ದೂರದ ಕಾಫಿ ತೋಟ ಅವಲಂಬಿಸ ಬೇಕಿದೆ. ರೈತರ ವಿರುದ್ಧ ಪಿತೂರಿ ನಡೆಸಲು ಮುಂದಾಗಿರುವ ಎನ್.ಜಿ.ಒ.ಗಳು ಅರಣ್ಯ ಪ್ರದೇಶದಲ್ಲಿ ರುವ ಹಾಡಿ ನಿವಾಸಿಗಳ ನೋವು ಆಲಿಸುತ್ತಿಲ್ಲ. ಕೃಷಿ ಕಾರ್ಮಿಕರನ್ನು ರೈತರ ವಿರುದ್ಧ ಹೋರಾಡಲು ಪ್ರಯತ್ನ ನಡೆಸುತ್ತಿದೆ ಎಂದರು.

ಗೋಷ್ಠಿಯಲ್ಲಿ ಶ್ರೀಮಂಗಲ ಗ್ರಾ.ಪಂ. ಸದಸ್ಯ ಸುದಿ ಪೊನ್ನಪ್ಪ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸತೀಶ್‌ಕುಮಾರ್ ಇದ್ದರು.