ಮಡಿಕೇರಿ, ಜ. ೧೪: ಪೊನ್ನಂಪೇಟೆ ತಾಲೂಕಿನ ಕೆ. ಬಾಡಗ ಗ್ರಾಮದ ಹೇರ್ಮಾಡು ಶ್ರೀ ಈಶ್ವರ ದೇವಸ್ಥಾನದಲ್ಲಿ ತಾ. ೨೨ ರಂದು ಮಹಾರುದ್ರಯಾಗ ನೆರವೇರಲಿದೆ.
ಅಂದು ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರತಿಷ್ಠಾಪನೆಯ ಅಂಗವಾಗಿ ಶ್ರೀ ರಾಮ ಹಾಗೂ ಶ್ರೀ ಹನುಮಾನ್ ದೇವರಿಂದ ಪ್ರತಿಷ್ಠಾಪನೆ ಪಟ್ಟ ಶಿವಲಿಂಗ ಇರುವ ಹೇರ್ಮಾಡು ಶ್ರೀ ಈಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಮಹಾರುದ್ರಯಾಗ ನಡೆಯಲಿದೆ.
ತಾ. ೨೨ ರಂದು ಬೆಳಿಗ್ಗೆ ೮ ಗಂಟೆಗೆ ಪೂಜಾ ಕೈಂಕರ್ಯ ಆರಂಭಗೊಳ್ಳಲಿದ್ದು, ಮಧ್ಯಾಹ್ನ ೧೨ ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ಭಕ್ತರಿಗೆ ವಿತರಿಸಲಾಗುವುದು. ಪೂಜಾ ಪ್ರಯುಕ್ತ ಬಾಡಗ ಗ್ರಾಮದ ಕಳ್ಳಂಗಡ ಸೌರಭ ಮತ್ತು ಅಪ್ಪಣ್ಣ ಅವರಿಂದ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಅಂದು ಸಂಜೆ ದೇವಸ್ಥಾನದಲ್ಲಿ ಶ್ರೀ ರಾಮ ಭಕ್ತಮಂಡಳಿಯಿAದ ದೀಪೋತ್ಸವ ನೆರವೇರಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.