್ಡ ಅನಿಲ್ ಎಚ್.ಟಿ.

ಅಯೋಧ್ಯೆಯಿಂದ ಪ್ರತ್ಯಕ್ಷ ವರದಿ

ಅಯೋಧ್ಯೆ - ಶ್ರೀರಾಮ ಚಂದ್ರನಿಗೆ ತನ್ನೂರಿನಲ್ಲಿಯೇ ನಡೆಯಲಿರುವ ವಿಜೃಂಭಣೆಯ ಪಟ್ಟಾಭಿಷೇಕ ಸಮಾರಂಭಕ್ಕೆ ಇನ್ನು ಕೇವಲ ಒಂದು ವಾರವಿರುವಂತೆಯೇ ದೇಶ ಮಾತ್ರವಲ್ಲ ವಿದೇಶಗಳಿಂದಲೂ ಸಾಕಷ್ಟು ಕೊಡುಗೆಗಳು ಅಯೋಧ್ಯೆಗೆ ಬರುತ್ತಲೇ ಇವೆ. ಇಲ್ಲಿನ ಕರಸೇವಕಪುರಂನಲ್ಲಿ ಇಂಥ ಸಾವಿರಾರು ಕೊಡುಗೆಗಳನ್ನು ಸಂಗ್ರಹಿಸಿಡಲಾಗಿದ್ದು, ಜನವರಿ ೨೨ ರಂದು ಮಂದಿರ ಲೋಕಾರ್ಪಣೆಯ ಸಂದರ್ಭ ಬಳಸಿಕೊಳ್ಳಲಾಗುತ್ತದೆ.

ಶ್ರೀರಾಮನ ಮೇಲೆ ಜನರಿಗಿರುವ ಪ್ರೀತಿ, ಅಭಿಮಾನದ ದ್ಯೋತಕವಾಗಿ ಇಲ್ಲಿಗೆ ಬಂದು ಸಂಗ್ರಹ ವಾಗುತ್ತಿರುವ ಕೊಡುಗೆಗಳೇ ಸಾಕ್ಷಿ ಎಂಬAತಿದೆ. ಭಾರತದ ಮೂಲೆ ಮೂಲೆ ಗಳಿಂದಲೂ ಶ್ರೀರಾಮ ಪಟ್ಟಾಭಿಷೇಕಕ್ಕೆ ನಾನಾ ರೂಪದಲ್ಲಿ ಉಡುಗೊರೆಗಳು ಹರಿದುಬರುತ್ತಿವೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಯಾವುದೇ ಕೊಡುಗೆಗಳನ್ನು ನೀಡಿ ಎಂದು ಜನತೆಗೆ ಮನವಿ ಮಾಡದೇ ಹೋದರೂ ಸ್ವಯಂಪ್ರೇರಣೆಯಿAದ ಜನರು ವೈವಿಧ್ಯಮಯ ವಸ್ತುಗಳನ್ನು ನೀಡುತ್ತಲೇ ಇದ್ದಾರೆ. ರಾಮಮಂದಿರ ಭಕ್ತಾರ್ಪಣೆಯ ದಿನ ಸಮೀಪಿಸುತ್ತಿರುವಂತೆಯೇ ಇಂಥ ಕೊಡುಗೆಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ.

ಅಯೋಧ್ಯೆಯಲ್ಲಿರುವ ಕರಸೇವಕಪುರಂನಲ್ಲಿ ಪ್ರತ್ಯೇಕವಾಗಿ ಕೊಡುಗೆಗಳ ದಾಸ್ತಾನು ಮಳಿಗೆ ತೆರೆಯಲಾಗಿದೆ. ಇಲ್ಲಿ ವೀಕ್ಷಿಸಿದರೆ ರಾಮನ ಪಟ್ಟಾಭಿಷೇಕ ಎಷ್ಟೊಂದು ವೈಭವದಿಂದ ನಡೆಯಲಿದೆ ಎಂಬುದು ಮನದಟ್ಟಾಗುತ್ತದೆ. ಬಡವ ಬಲ್ಲಿದ ಎಂಬ ತಾರತಮ್ಯ ಇಲ್ಲದೇ ಕೈಲಾದಷ್ಟು ಕಾಣಿಕೆಯನ್ನು ವಿವಿಧ ವಸ್ತುಗಳ ರೂಪದಲ್ಲಿ ಜನ ನೀಡುತ್ತಲೇ ಇದ್ದಾರೆ.

ಜ.೨೨ ರಂದು ಲಕ್ಷಾಂತರ ಭಕ್ತರಿಗೆ ಅನ್ನಸಂತರ್ಪಣೆಗೆ ಬೇಕಾಗುವ ಅಕ್ಕಿಯನ್ನು ರಾಜಾಸ್ತಾನದ ವ್ಯಾಪಾರಿಯೋರ್ವರು ನೀಡಿದ್ದರೆ ಮಹಾರಾಷ್ಟçದಿಂದ ಮತ್ತೋರ್ವ ವ್ಯಾಪಾರಿ ಅಡುಗೆಗೆ ಬೇಕಾದ ಎಣ್ಣೆಯನ್ನು ೧೦ ಲಾರಿ ಲೋಡ್‌ಗಳಲ್ಲಿ ಅಯೋಧ್ಯೆಗೆ ರವಾನಿಸಿದ್ದಾರೆ. ಸಿಹಿ ಖಾದ್ಯವಂತೂ ಲೆಕ್ಕವೇ ಇಲ್ಲದಷ್ಟು ಬರುತ್ತಿದ್ದು ಕೆಲವೇ ದಿನಗಳಲ್ಲಿ ಹಾಳಾಗುವ ಸಾಧ್ಯತೆಯಿರುವ ಸಿಹಿ ಖಾದ್ಯವನ್ನು ಲಾಡು, ಬರ್ಫಿ, ಪೇಡಾ ಇತ್ಯಾದಿ ಸಿಹಿ ಖಾದ್ಯವನ್ನು ಈಗಾಗಲೇ ದಿನನಿತ್ಯ ಇಲ್ಲಿಗೆ ಆಗಮಿಸುವ ಭಕ್ತರಿಗೆ ವಿತರಿಸಲಾಗುತ್ತಿದೆ.

ಕೆಲವೊಂದು ತಿಂಡಿ ತಿನಿಸುಗಳು ಕೆಲವೇ ದಿನಗಳು ಮಾತ್ರ ಬಳಕೆಗೆ ಯೋಗ್ಯ ವಾಗಿರುತ್ತದೆ. ಆದರೆ ದೇಶವ್ಯಾಪೀ ಜನರು ಸಾವಿರಾರು ಸಂಖ್ಯೆಯಲ್ಲಿ ಸಿಹಿ ಪದಾರ್ಥಗಳನ್ನು ಶ್ರೀರಾಮನ ಮೇಲಿನ ಪ್ರೀತಿಯಿಂದ ಇಲ್ಲಿಗೆ ಕಳುಹಿಸುತ್ತಿದ್ದಾರೆ. ಇಂಥವನ್ನೆಲ್ಲಾ ಕಳುಹಿಸಬೇಡಿ ಎಂದು ರಾಮಪ್ರಭುವಿನ ಪ್ರೀತಿಪಾತ್ರ ಭಕ್ತರಿಗೆ ಹೇಳಲು ಮನಸ್ಸು ಒಪ್ಪುತ್ತಿಲ್ಲ. ಇಂಥ ಅಭಿಮಾನಕ್ಕೆ ಸದಾ ಚಿರಋಣಿ ಎಂದು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪಕ್ ರಾಯ್ ‘ಶಕ್ತಿ'ಗೆ ಹೇಳಿದರು.

ಭಾರತದಿಂದ ಮಾತ್ರ ಉಡುಗೊರೆಗಳು ಅಯೋಧ್ಯೆಗೆ ಬರುತ್ತಿದೆಯೇ ಎಂದರೇ ಖಂಡಿತಾ ಇಲ್ಲ. ಅಮೇರಿಕಾ, ಜಪಾನ್, ಶ್ರೀಲಂಕಾದಿAದಲೂ ಅನೇಕ ಕೊಡುಗೆಗಳು ಲಭಿಸಿವೆ. ವಿಶೇಷವಾಗಿ ಸೀತಾಮಾತೆಯ ತವರಾದ ನೇಪಾಳದಿಂದ ಅಲ್ಲಿನ ಜನತೆ ರಾಜಮರ್ಯಾ ದೆಯಿಂದ ವೈವಿಧ್ಯಮಯ ಕೊಡುಗೆ ನೀಡಿದ್ದಾರೆ. ಇದನ್ನು ಶ್ರೀರಾಮ ಮಂದಿರ ಲೋಕಾರ್ಪಣೆ ಸಂದರ್ಭ ಬಳಸಿಕೊಳ್ಳಲಾಗುತ್ತದೆ.

ನೇಪಾಳದಿಂದ ಶ್ರೀರಾಮ ಪಟ್ಟಾಭಿಷೇಕಕ್ಕೆ ಬಳಕೆ ಮಾಡಲು ೨೫೧ ಲೀಟರ್ ಪವಿತ್ರವಾದ ಜಲ ಬೃಹತ್ ಕಳಸದಲ್ಲಿ ನೀಡಲಾಗಿದ್ದು, ನೇಪಾಳದಲ್ಲಿನ ಶ್ರೀರಾಮಭಕ್ತರು ಅಲ್ಲಿನ ಪವಿತ್ರ ನದಿಗಳಾದ ಬಾಗ್ಮತಿ, ಗಂಗಾ ಸಾಗರ್, ನಾರಾಯಣಿ, ಧೂದ್ ಮತಿ, ಮಹಾಕಾಳಿ, ಗಂಡಕಿ, ಕೋಶಿ, ಕಮಲ ನದಿಗಳಿಂದ ಜಲವನ್ನು ಸಂಗ್ರಹಿಸಿ ರವಾನಿಸಿದ್ದಾರೆ. ಭಾರತದ ತಲಕಾವೇರಿಯಲ್ಲಿನ ಕಾವೇರಿ ಸೇರಿದಂತೆ ಪವಿತ್ರ ನದಿಗಳಾದ ಗಂಗೆ, ತುಂಗ, ಸರಸ್ವತಿ, ಯಮುನಾ, ಗೋದಾವರಿ ಮತ್ತಿತರ ನದಿಗಳ ತೀರ್ಥದೊಂದಿಗೆ ನೇಪಾಳದಿಂದ ತರಲಾದ ತೀರ್ಥವನ್ನು ಕೂಡ ಜ.೨೨ ರಂದು ರಾಮ ಪಟ್ಟಾಭಿಷೇಕ ಸಂದರ್ಭ ರಾಮ, ಸೀತೆ, ಲಕ್ಷಿö್ಮಣ, ಹನುಮಂತನ ಮೂರ್ತಿಗಳ ಅಭಿಷೇಕಕ್ಕೆ ಬಳಸಲಾಗುತ್ತದೆ. ನೇಪಾಳದಿಂದ ಚಿನ್ನದ ಆಭರಣ, ವಸ್ತçಗಳು, ಬೆಳ್ಳಿಯ ಪಾದುಕೆ, ಬೆಳ್ಳಿಯ ಪಾತ್ರೆಗಳು, ಒಣಹಣ್ಣುಗಳು ಅಲಂಕಾರಿಕ ವಸ್ತುಗಳು, ಸಿಹಿ ತಿನಿಸುಗಳೂ ಸೇರಿದಂತೆ ೩೦ ಲಾರಿಗಳಲ್ಲಿ ಅಯೋಧ್ಯೆ ತಲುಪಿದೆ. ಇಂಥ ಕೊಡುಗೆಗಳು ಸೀತೆಯ ತಂದೆಯಾದ ಜನಕ ಮಹಾರಾಜ್‌ನ ಊರು ನೇಪಾಳದ ಜನಕಪುರ ದಿಂದಲೇ ಬಂದಿರುವುದು ವಿಶೇಷ. ಒಂದು ರೀತಿಯಲ್ಲಿ ಇದನ್ನು ಅಳಿಯ ರಾಮ ಮತ್ತು ತಮ್ಮೂರಿನ ಮಗಳಾದ ಸೀತಾಮಾತೆಯರ ವೈಭವದ ಪಟ್ಟಾಭಿಷೇಕ ಸಮಾರಂಭಕ್ಕೆ ತವರು ದೇಶದ ಉಡುಗೊರೆ ಎಂದೇ ವರ್ಣಿಸಬಹುದಾಗಿದೆ.

ಹಾಗೆಯೇ ನೇಪಾಳದಿಂದ ಅಯೋಧ್ಯೆಗೆ ಸಾಲಿಗ್ರಾಮವನ್ನು ಕೂಡ ಕಳುಹಿಸಲಾಗಿದೆ. ರಾಜಾಸ್ತಾನದಿಂದ ಬಣ್ಣ ಬಣ್ಣದ ಪರಿಮಳಯುಕ್ತ ಜಲವನ್ನೂ ವ್ಯಾಪಾರಿಯೋರ್ವರು ರಾಮಮಂದಿರಕ್ಕೆ ಬರುವ ಭಕ್ತರಿಗೆ ಸಿಂಚನ ಮಾಡಲು ರವಾನಿಸಿದ್ದಾರೆ. ಬಾಲರಾಮನಿಗೆ ನೈವೇದ್ಯ ಮಾಡಲೆಂದು ಛತ್ತೀಸ್‌ಘಡ್‌ನಿಂದ ೩ ಸಾವಿರ ಕ್ವಿಂಟಾಲ್ ಅಕ್ಕಿ ಬಂದಿದೆ.

ಭಕ್ತಿ ಪರಾಕಾಷ್ಠೆ

ಕರಸೇವಕಪುರಂನಲ್ಲಿ ‘ಶಕ್ತಿ' ವಿಶೇಷ ಪ್ರತಿನಿಧಿ ಇರುವಂತೇ ಸೈಕಲ್‌ನಲ್ಲಿ ನೇಪಾಳದಿಂದ ಬಂದ ಪಿಯುಶ್ ಚತುರ್ವೇದಿ ಎಂಬ ಯುವಕ ತನ್ನೊಂದಿಗೆ ಹತ್ತಾರು ಕಡ್ಡಿಗಳನ್ನು ತಂದರು. ಇದೇನಿದು ಎಂದು ಕೇಳಿದಾಗ ಶ್ರೀರಾಮ ಪಟ್ಟಾಭಿಷೇಕ ಸಂದರ್ಭ ಹವನದಲ್ಲಿ ಬಳಸಲು ಧೂಪದ ಕಟ್ಟಿಗೆಗಳನ್ನು ತಂದಿರುವುದಾಗಿ ಹೆಮ್ಮೆಯಿಂದ ಹೇಳಿದ. ಎಷ್ಟು ದಿನ ಸೈಕಲ್‌ನಲ್ಲಿ ಪ್ರಯಾಣಿಸಿ ಇಲ್ಲಿಗೆ ತಲುಪಿದ್ದೀರಿ ಎಂಬ ಪ್ರಶ್ನೆಗೆ ೧,೮೦೦ ಕಿ.ಮೀ. ದೂರವನ್ನು ೨೬ ದಿನಗಳಲ್ಲಿ ಕ್ರಮಿಸಿ ಬಂದಿರುವುದಾಗಿ ಹೇಳಿದರು. ಆಯಾಸದಿಂದ ಸಾಕಷ್ಟು ಬಳಲಿದ್ದ ಈ ಯುವಕ ತನ್ನ ಕಿರುಕಾಣಿಕೆಯನ್ನು ಅಯೋಧ್ಯೆಯ ಸಂಗ್ರಹಾಲಯಕ್ಕೆ ಒಪ್ಪಿಸಿದಾಗ ಆತನ ಕಣ್ಣಿನಲ್ಲಿ ಕಂಡುಬAದ ತೃಪ್ತಿಯ ಮಿಂಚು ಶ್ರೀರಾಮನಿಗೆ ಎಂಥ ಭಕ್ತರಿದ್ದಾರೆ ಎಂಬುದನ್ನು ಸೂಚಿಸುವಂತಿತ್ತು. ಜೈಶ್ರೀರಾಮ್ ಎಂದು ಘೋಷಣೆ ಕೂಗಿದ ಪಿಯುಷ್ ಮತ್ತೆ ಸೈಕಲ್‌ನಲ್ಲಿ ತನ್ನೂರಿಗೆ ವಾಪಾಸ್ ತೆರಳುವರು.

ಥೈಲ್ಯಾಂಡ್‌ನಿAದ ಕೂಡ ರಾಮಮಂದಿರ ಲೋಕಾರ್ಪಣೆ ಸಂದರ್ಭ ಬಳಸಲು ಪವಿತ್ರ ಮೈತ್ತಿಕೆ ಬಂದಿದೆ. ರಾವಣ ಸೀತೆಯನ್ನು ಕೂಡಿಹಾಕಿದ್ದ ಅಶೋಕವನದಲ್ಲಿದ್ದ ಕಿರುಕಲ್ಲನ್ನು ಕಾಣಿಕೆಯಾಗಿ ನೀಡಿದ್ದರೆ, ದರಿಯಾಪುರದ ಭಾರತೀಯ ದಬಾಗಾರ್ ಸಂಘವು ತಯಾರಿಸಿರುವ ೫೬ ಇಂಚುಗಳ ನಗಾರಿ ಈಗಾಗಲೇ ಪ್ರಸಾದ ಕೇಂದ್ರದಲ್ಲಿ ಕಣ್ಮನ ಸೆಳೆಯುತ್ತಿದ್ದು ಇದಕ್ಕೆ ಚಿನ್ನದ ಹಾಳೆಯಿಂದ ಸುತ್ತಲಾಗುತ್ತದೆ.

ಆಲಿಘಡ್‌ನಿಂದ ೧೦ ಅಡಿ ಎತ್ತರ, ೪ ಅಡಿ ಅಗಲವಿರುವ, ೯ ಇಂಚು ದಪ್ಪವಿರುವ ೪೦೦ ಕೆ.ಜಿ. ತೂಕವಿರುವ ಬೀಗ ಕೂಡ ಇಲ್ಲಿದೆ.

೮ ಖನಿಜಗಳಿಂದ ತಯಾರಿಸಿರುವ ೨ ಸಾವಿರ ಕೆ.ಜಿ. ತೂಕವಿರುವ, ೬ ಅಡಿ ಎತ್ತರ ಮತ್ತು ೫ ಅಡಿ ಅಗಲದ ಗಂಟೆಯನ್ನು ಉತ್ತರ ಪ್ರದೇಶದ ಇಟಾಹ್‌ನ ಉದ್ಯಮಿ ಆದಿತ್ಯ ಮಿಥ್ತಲ್ ಎಂಬ ಉದ್ಯಮಿ ಪ್ರಾಯೋಜಿಸಿದ್ದು, ಅಯೋಧ್ಯೆಗೆ ತಲುಪಿದೆ. ೨೫ ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿತವಾದ ಈ ಅಪೂರ್ವ ಗಂಟೆಯನ್ನು ಸಂಗ್ರಹಾಲಯದಲ್ಲಿ ವೀಕ್ಷಿಸಬಹುದು. ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ, ಪಾದರಸಗಳಿಂದ ಈ ಗಂಟೆಯು ರೂಪುಗೊಂಡಿದೆ.

ಲಕ್ನೋ ಮೂಲದ ತರಕಾರಿ ಮಾರಾಟಗಾರ ಅನಿಲ್ ಕುಮಾರ್ ಸಾಹೋ ಎಂಬಾತ ಭಾರತ, ಟೋಕಿಯೋ, ಮಾಸ್ಕೋ ದುಬೈ, ಬೀಜಿಂಗ್, ಸಿಂಗಾಪುರ್ ಸೇರಿದಂತೆ ವಿವಿಧ ದೇಶಗಳ ಸಮಯ ತೋರಿಸುವ ಗಡಿಯಾರವನ್ನು ವಿನ್ಯಾಸಗೊಳಿಸಿದ್ದಾರೆ. ಇದನ್ನು ದೇವಾಲಯದ ಪ್ರವೇಶ ದ್ವಾರದಲ್ಲಿ ಇರಿಸಲಾಗುತ್ತದೆ.

ತಾಮ್ರದ ಗಂಟೆಗಳAತೂ ರಾಶಿ ರಾಶಿ ಬಂದು ಸೇರುತ್ತಿದೆ. ಶ್ರೀರಾಮನ ದೇವಾಲಯ ಸಂಕೀರ್ಣದಲ್ಲಿ ಇರುವ ಅನೇಕ ದೇವಾಲಯಗಳಿಗೆ ಇಂಥ ಗಂಟೆಗಳನ್ನು ಬಳಸಿಕೊಳ್ಳುವ ಚಿಂತನೆ ಟ್ರಸ್ಟ್ ಗಿದೆ. ಬೃಹತ್ ಗಾತ್ರದ ತ್ರಿಶೂಲ, ವಾಲ್ಮೀಕಿಯ ಮೂರ್ತಿ, ಶ್ರೀರಾಮ, ಸೀತೆ, ಲಕ್ಷö್ಮಣ, ಹನುಮಂತನ ಮೂರ್ತಿಗಳು ಕೂಡ ಸಂಗ್ರಹಕ್ಕೆ ಕೊಡುಗೆಯಾಗಿ ಲಭಿಸಿವೆ.

ಯಾವುದನ್ನು ಎಲ್ಲಿ ಮತ್ತು ಹೇಗೆ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬುದನ್ನು ಟ್ರಸ್ಟ್ ಮುಂದಿನ ದಿನಗಳಲ್ಲಿ ನಿರ್ಧರಿಸಲಿದೆ. ಎಲ್ಲವನ್ನೂ ಸಿಸಿ ಕ್ಯಾಮರಾ ಮೂಲಕ ದಾಖಲಿಸಲಾಗಿದ್ದು, ಯಾವುದೇ ಅಮೂಲ್ಯ ಕೊಡುಗೆಗಳು ವ್ಯರ್ಥ ಎನಿಸುವುದಿಲ್ಲ. ಪ್ರತೀಯೋರ್ವ ಭಕ್ತನೂ ಶ್ರೀರಾಮನ ಮೇಲಿನ ಪ್ರೀತಿಯಿಂದ ನೀಡಿದ ಉಡುಗೊರೆಗಳಿಗೆ ಟ್ರಸ್ಟ್ ಬಾಧ್ಯಸ್ಥವಾಗಿ ಸಂಗ್ರಹಿಸಿಡುತ್ತದೆ. ಸೂಕ್ತ ರೀತಿಯಲ್ಲಿ ಇಂಥ ಕೊಡುಗೆ ಬಳಸಿಕೊಳ್ಳುವ ಹೊಣೆ ಟ್ರಸ್ಟ್ನದ್ದಾಗಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪಕ್‌ರಾಯ್ ‘ಶಕ್ತಿ'ಗೆ ತಿಳಿಸಿದರು.

ಲಕ್ನೋದಿಂದ ಅಯೋಧ್ಯೆಗೆ ತೆರಳುವ ರಾಷ್ಟಿçÃಯ ಹೆದ್ದಾರಿ ಸಂಖ್ಯೆ ೨೭ರಲ್ಲಿ ಗಮನಿಸಿದಂತೆ ಸಾಲು ಸಾಲಾಗಿ ಸೈಕಲ್, ಲಾರಿಗಳಲ್ಲಿ ಅಯೋಧ್ಯೆಗೆ ಜನರು ಕೊಡುಗೆಗಳನ್ನು ಕೊಂಡೊಯ್ಯುತ್ತಲೇ ಇದ್ದಾರೆ. ಅಯೋಧ್ಯಾ ನಗರದಲ್ಲಿ ಗ್ರಾಮಸ್ಥರು ತಂಡೋಪತAಡವಾಗಿ ಮೆರವಣಿಗೆಯಲ್ಲಿ ಆಗಮಿಸುತ್ತಾ, ಶ್ರೀರಾಮನಿಗೆ ಜೈಕಾರ ಮೊಳಗಿಸುತ್ತಾ ತಾವು ತಂದ ಉಡುಗೊರೆಗಳನ್ನು ಸಮರ್ಪಿಸುತ್ತಿದ್ದಾರೆ.

ಕೆಲವೊಂದು ಕಾಣಿಕೆಗಳು ಬಹಳ ಕಡಿಮೆಯದ್ದು ಎಂದು ಕಂಡುಬAದರೂ ಶ್ರೀರಾಮನಿಗೆ ನೀಡುವ ಭಕ್ತನ ಅರ್ಪಣಾ ಮನೋಭಾವಕ್ಕೆ ಬೆಲೆ ಕಟ್ಟಲಾಗದ್ದು. ಶ್ರೀರಾಮ ಮಂದಿರ ಲೋಕಾರ್ಪಣೆಯಾದ ಬಳಿಕವೂ ಇಂಥ ಕೊಡುಗೆ ಸಂಖ್ಯೆ ಹತ್ತು ಪಟ್ಟು ಹೆಚ್ಚಾದೀತು ಎಂಬ ನಿರೀಕ್ಷೆ ಇದೆ.

ಚಿತ್ರಗಳು - ರೀನಾ ಅನಿಲ್ ಎಚ್.

‘ಪ್ರಧಾನಿ ಕುಡಿದ ಚಹಾ ಲೋಟಕ್ಕೆ ನಿತ್ಯ ಪೂಜೆ ಸಲ್ಲಿಸುತ್ತಿರುವ ಅಯೋಧ್ಯೆಯ ಮಹಿಳೆ...’ (ನಾಳಿನ ಸಂಚಿಕೆಯಲ್ಲಿ ನಿರೀಕ್ಷಿಸಿ!)