ಮಡಿಕೇರಿ, ಜ. ೧೩: “ದ್ವೇಷ ಬಿಟ್ಟು ದೇಶ ಕಟ್ಟು” ಪರಕಲ್ಪನೆಯೊಂದಿಗೆ ಮಡಿಕೇರಿ ಮುಸ್ಲಿಂ ಒಕ್ಕೂಟ ರಚನೆ ಗೊಂಡಿದೆ. ಒಕ್ಕೂಟದ ಸಂಚಾಲಕ ರಾಗಿ ಲಿಯಾಖತ್ ಆಲಿ ಆಯ್ಕೆಯಾಗಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಲಿಯಾಖತ್ ಆಲಿ, ಭಾವೈಕ್ಯತೆಯ ಬೀಡು ಕೊಡಗು ಜಿಲ್ಲೆಯಲ್ಲಿ ಎಲ್ಲರೂ ಸೌಹಾರ್ದತೆಯಿಂದ ಜೀವನ ಸಾಗಿಸಬೇಕು ಎನ್ನುವುದು ಒಕ್ಕೂಟದ ಉದ್ದೇಶ ಎಂದರು.

ಒಕ್ಕೂಟದ ಪ್ರಮುಖ ಎಸ್.ಐ. ಮುನೀರ್ ಅಹಮ್ಮದ್ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯ ಶೈಕ್ಷಣಿಕ ವಾಗಿ ಹಿಂದುಳಿದಿದೆ, ಆದ್ದರಿಂದ ಒಕ್ಕೂಟ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಿದೆ. ರಾಜಕೀಯ ರಹಿತವಾದ ಈ ಸಂಘಟನೆ ವಿಚಾರವಂತಿಕೆಯಿAದ ಕಾರ್ಯನಿರ್ವಹಿಸಲಿದೆ. ರಾಜಕೀಯ ರಹಿತವಾದ ಈ ಸಂಘಟನೆ ಅಲ್ಪಸಂಖ್ಯಾತರು ಮಾತ್ರವಲ್ಲದೆ ಎಲ್ಲಾ ಅಸಹಾಯಕರಿಗೂ ಸಹಾಯ ಮಾಡಲಿದೆ. ಶಿಕ್ಷಣ ಮತ್ತು ಸರ್ಕಾರದ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿ ಸಲಿದೆ ಎಂದರು.

ಅಲ್ಪಸಂಖ್ಯಾತರು ಮಾತ್ರವಲ್ಲದೆ ಎಲ್ಲಾ ಜನಾಂಗದ ಬಡವರಿಗೂ ಸೌಲಭ್ಯ ದೊರೆಯುವಂತೆ ಒಕ್ಕೂಟ ನೋಡಿಕೊಳ್ಳಲಿದೆ. ಮಾಹಿತಿಯ ಕೊರತೆಯಿಂದ ಸರ್ಕಾರಿ ಸೌಲಭ್ಯ ದಿಂದ ವಂಚಿತರಾಗುವವರನ್ನು ಗುರುತಿಸಿ ಸೌಲಭ್ಯ ತಲುಪಿಸುವ ಕೆಲಸ ಮಾಡಲಾಗುವುದು. ಸಮಾಜದ ಸ್ವಾಸ್ಥö್ಯ ಕೆಡದಂತೆ ಒಕ್ಕೂಟ ಎಚ್ಚರಿಕೆಯನ್ನು ವಹಿಸಲಿದೆ, ಚುನಾವಣೆ ಸಂದರ್ಭ ಕೆಲವು ವ್ಯಕ್ತಿಗಳು ನೀಡುವ ಹೇಳಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲೂ ಚಿಂತಿಸಲಾಗುವುದು. ಮುಸ್ಲಿಂ ಮಹಿಳೆಯರು ಮಾತ್ರವಲ್ಲ, ಯಾವುದೇ ಜನಾಂಗದ ಮಹಿಳೆಯರನ್ನು ಕೂಡ ಯಾರೂ ಅವಹೇಳನ ಮಾಡಬಾರದು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾಕರ್ ಭಟ್ ಅವರು ಮುಸ್ಲಿಂ ಮಹಿಳೆಯರ ಬಗ್ಗೆ ನೀಡಿರುವ ಹೇಳಿಕೆ ನಮಗೆ ನೋವುಂಟು ಮಾಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖರಾದ ಸಹ ಸಂಚಾಲಕ ಖಲೀಲ್ ಬಾಷಾ, ಜಹೀರ್ ಅಹಮ್ಮದ್, ಮಹಮ್ಮದ್ ಯಾಕುಬ್ ಹಾಗೂ ರೌವೂಫ್ ಎಂ.ಎನ್ ಉಪಸ್ಥಿತರಿದ್ದರು.