ಸೋಮವಾರಪೇಟೆ, ಜ. ೧೪: ಕ್ರಿಮಿನಲ್ ಪ್ರಕರಣಕ್ಕೆ ಸಂಬAಧಿಸಿದAತೆ ರಾಜ್ಯ ಉಚ್ಚನ್ಯಾಯಾಲಯದಿಂದ ಅಪರಾಧಿ ಯಾಗಿರುವ ತಾಲೂಕಿನ ವ್ಯಕ್ತಿಯೋರ್ವನ ಪತ್ತೆಗೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ರಾಜ್ಯ ಉಚ್ಚನ್ಯಾಯಾಲಯದ ಕ್ರಿಮಿನಲ್ ಪಿಟಿಷನ್ಗೆ ಸಂಬAಧಿಸಿದAತೆ ತಾಲೂಕಿನ ಮಾದಾಪುರ ಸಮೀಪದ ಇಗ್ಗೋಡ್ಲು ನಿವಾಸಿ, ಸುಬ್ಬಯ್ಯ ಎಂಬವರ ಪುತ್ರ ಶಂಭು ಕುಶಾಲಪ್ಪ ಎಂಬಾತ ಅಪರಾಧಿಯಾಗಿದ್ದು, ಕಳೆದ ಹಲವು ಸಮಯದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದಾನೆ.
ಈತನ ಬಗ್ಗೆ ಸುಳಿವು ಇದ್ದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆ ದೂ: ೦೮೨೭೬ ೨೮೨೦೪೦ ಸಂಖ್ಯೆಗೆ ಮಾಹಿತಿ ನೀಡುವಂತೆ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಮನವಿ ಮಾಡಿದ್ದಾರೆ.