ಶನಿವಾರಸಂತೆ, ಜ. ೧೪: ಸಮೀಪದ ಬೆಂಬಳೂರಿನ ಬಾಣಂತಮ್ಮ ದೇವಿ ಮತ್ತು ಕುಮಾರಲಿಂಗೇಶ್ವರಸ್ವಾಮಿ ಜಾತ್ರೆ ತಾ.೧೬ ರಂದು ನಡೆಯಲಿದೆ.

ತಾ. ೧೫ ರಂದು ಜಾತ್ರೆಯ ಪೂಜಾ ಕಾರ್ಯಕ್ರಮಗಳು ಆರಂಭಗೊಳ್ಳುತ್ತವೆ. ಬೆಳಿಗ್ಗೆಯಿಂದ ಸಂಜೆಯ ತನಕ ಮಡೆÀ ಪೂಜೆಗಾಗಿ ಭಕ್ತಾದಿಗಳಿಂದ ಹರಕೆಯ ರೂಪದಲ್ಲಿ ಅಕ್ಕಿ, ಬೆಲ್ಲ, ತರಕಾರಿಗಳನ್ನು ಊರ ಪಟೇಲರ ಮನೆಯಲ್ಲಿ ಸ್ವೀಕರಿಲಾಗುತ್ತದೆ. ಸಂಜೆ ೫.೩೦ ಗಂಟೆಗೆ ಬಾಣಂತಮ್ಮ ಮತ್ತು ಕುಮಾರಲಿಂಗೇಶ್ವರ ದೇವರಿಗೆ ಗಂಗಾ ಸ್ನಾನ ಮಾಡಿಸಲಾಗುತ್ತದೆ. ರಾತ್ರಿ ೯.೩೦ಕ್ಕೆ ಮಡೆ ಪೂಜೆ ಮಾಡಿ, ಉಪವಾಸ ಇರುವ ಗ್ರಾಮಸ್ಥರು ಪಟೇಲರ ಮನೆಯಿಂದ ಮಡೆಯನ್ನು ವಾದ್ಯಗೋಷ್ಠಿಯೊಂದಿಗೆ ಬಾಣಂತಮ್ಮನ ಕೆರೆಯ ಬಳಿ ಕೊಂಡೊಯ್ಯು ತ್ತಾರೆ. ಉಪವಾಸ ಇದ್ದವರು ರಾತ್ರಿ ಅಲ್ಲಿಯೇ ಉಳಿದುಕೊಂಡು ಅಡುಗೆ ಮಾಡಿ, ದೇವರಿಗೆ ಎಡೆ ಇಟ್ಟು, ಜಾತ್ರೆಗೆ ಬಂದ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.

ತಾ. ೧೬ ರಂದು ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧೨ ಗಂಟೆಯ ವರೆಗೆ ಬಾಣಂತಮ್ಮ ದೇವಿಯ ವಿಶೇಷ ಪೂಜಾ ಕೈಂಕರ್ಯ ಹಾಗೂ ಪಲ್ಲಕ್ಕಿ ಮೆರವಣಿಗೆ ನೆರವೇರುತ್ತದೆ. ಮಧ್ಯಾಹ್ನ ೧೨ ರಿಂದ ಸಂಜೆ ೫ರವರೆಗೆ ಕುಮಾರಲಿಂಗೇಶ್ವರನ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವ ನಡೆಯುತ್ತದೆ.