(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಜ. ೧೩: ಕೊಡಗು ಪ್ರವಾಸಿಗರ ಸ್ವರ್ಗ ಬೀಡು. ಕರ್ನಾಟಕದ ಕಾಶ್ಮೀರ, ಭಾರತದ ಸ್ಕಾಟ್ಲಾö್ಯಂಡ್ ಎಂಬಿತ್ಯಾದಿ ಹೆಸರುಗಳಿಂದ ಕೊಡಗನ್ನು ಪ್ರವಾಸಿಗರು ಕರೆಯುತ್ತಾರೆ.
(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಜ. ೧೩: ಕೊಡಗು ಪ್ರವಾಸಿಗರ ಸ್ವರ್ಗ ಬೀಡು. ಕರ್ನಾಟಕದ ಕಾಶ್ಮೀರ, ಭಾರತದ ಸ್ಕಾಟ್ಲಾö್ಯಂಡ್ ಎಂಬಿತ್ಯಾದಿ ಹೆಸರುಗಳಿಂದ ಕೊಡಗನ್ನು ಪ್ರವಾಸಿಗರು ಕರೆಯುತ್ತಾರೆ.
ವರ್ಷಗಳ ಕಾಲ ಕೋವಿಡ್ ಹೊಡೆತಕ್ಕೆ ಬಲಿಯಾಗಿ ಕೊಡಗಿನ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿತ್ತು.
ಪ್ರವಾಸೋದ್ಯಮಿಗಳು ನಷ್ಟದ ಹಾದಿಯಲ್ಲಿ ಸಾಗುತ್ತಿದ್ದರು. ಆದರೆ ಕೊಡಗಿನ ಪ್ರವಾಸೋದ್ಯಮಕ್ಕೆ ೨೦೨೩ ಜೀವ ತುಂಬಿದ ವರ್ಷ ಎಂದರೆ ತಪ್ಪಾಗಲಾರದು. ೨೦೨೩ರಲ್ಲಿ ಕೊಡಗು ಜಿಲ್ಲೆಯ ವಿವಿಧ ಪ್ರವಾಸಿತಾಣಗಳಿಗೆ, ೪೩,೬೯,೫೦೭ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಪ್ರವಾಸೋದ್ಯಮ ಇಲಾಖೆ ನೀಡಿದೆ.
೨೦೨೨ಕ್ಕೆ ಹೋಲಿಸಿದರೆ ೨೦೨೩ ರಲ್ಲಿ ಕೊಡಗಿನಲ್ಲಿ ೧೬ ಲಕ್ಷ ಪ್ರವಾಸಿಗರ ಹೆಚ್ಚಳವಾಗಿದೆ.
ಕೊಡಗು ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ೨೦೨೩ರಲ್ಲಿ ದಾಖಲೆಯ ಪ್ರಮಾಣದಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರು ಆಗಮಿಸಿದ್ದಾರೆ.
ಪ್ರಕೃತಿ ವಿಕೋಪ, |
ಕೋವಿಡ್ ಬಳಿಕ ಕೊಡಗಿನ ಪ್ರವಾಸೋದ್ಯಮ ಚೇತರಿಕೆ ಕಂಡುಕೊAಡಿದ್ದು, ತನ್ನ ಹಳೆಯ ಗತವೈಭವಕ್ಕೆ ಮರಳುತ್ತಿವೆ.
ವರ್ಷಾರಂಭ ಹಾಗೂ ಅಂತ್ಯದಲ್ಲಿ ೧೧ ಲಕ್ಷ ಪ್ರವಾಸಿಗರು!
ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ೨೦೨೩ ಡಿಸೆಂಬರ್ನಲ್ಲಿ ಜಿಲ್ಲೆಯ ಪ್ರವಾಸಿತಾಣಗಳಿಗೆ ೫,೮೨,೯೦೬ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಹಾಗೂ ೨೦೨೩ ಜನವರಿ ತಿಂಗಳ ಆರಂಭದಲ್ಲಿ ೬,೨೦,೮೦೮ ಪ್ರವಾಸಿಗರು ಕೊಡಗಿನ ಪ್ರವಾಸಿತಾಣಗಳಿಗೆ ಭೇಟಿ ದಾಖಲೆ ಸೃಷ್ಟಿಸಿದ್ದಾರೆ.
ಇತ್ತೀಚೆಗೆ ನಡೆದ ಗೂಗಲ್ ಸರ್ವೆಯಲ್ಲಿ, ಕೊಡಗು ಅತೀ
ಹೆಚ್ಚು ಹುಡುಕಲಾದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿವೆ. ೨೦೨೩ರಲ್ಲಿ ಜುಲೈ, ಆಗಸ್ಟ್
(ಮೊದಲ ಪುಟದಿಂದ) ತಿಂಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಿದ್ದ ಕಾರಣ ಮೊದಲ ಬಾರಿಗೆ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ರಾಜಾಸೀಟ್ ಪ್ರವಾಸಿಗರ ಫೇವರೇಟ್ ಸ್ಪಾಟ್!
ಜಿಲ್ಲೆಯಲ್ಲಿ ಮಡಿಕೇರಿ ನಗರದ ಹೃದಯಭಾಗದಲ್ಲಿರುವ ರಾಜಾಸೀಟ್ ಪ್ರವಾಸಿಗರ ಫೇವರೇಟ್ ಟೂರಿಸ್ಟ್ ಹಾಟ್ ಸ್ಪಾಟ್ ಆಗಿದೆ.
ಕಳೆದ ವರ್ಷ ಫಲಪುಷ್ಟ ಪ್ರದರ್ಶನ ಹಾಗೂ ಡಿಸೆಂಬರ್ ತಿಂಗಳಲ್ಲಿ ಅತೀ ಹೆಚ್ಚು ಪ್ರವಾಸಿಗರು ರಾಜಾಸೀಟ್ಗೆ ಭೇಟಿ ನೀಡಿ ಕೊಡ ಗಿನ ಸೊಬಗನ್ನು ಆನಂದಿಸಿದ್ದಾರೆ. ಭಾಗಮಂಡಲ ಹಾಗೂ ತಲಕಾವೇರಿ ಪ್ರವಾಸಿಗರು ಭೇಟಿ ನೀಡಿದ ಸ್ಥಳಗಳಲ್ಲಿ ಎರಡನೇ ಸ್ಥಾನ ಪಡೆದರೆ ಮೂರನೇ ಸ್ಥಾನದಲ್ಲಿ ಕುಶಾಲನಗರದ ನಿಸರ್ಗಧಾಮ ಸ್ಥಾನ ಪಡೆದಿದೆ. ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರ, ಮಡಿಕೇರಿ ನಗರದ ಹೊರವಲಯದಲ್ಲಿರುವ ಅಬ್ಬಿಫಾಲ್ಸ್ಗೆ ಕಳೆದ ವರ್ಷ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ.
ಜೀಪ್ ಗೊಂದಲ, ಪ್ರವಾಸಿಗರಿಗೆ ದೂರವಾದ ಮಾಂದಲ್ಪಟ್ಟಿ
ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪ್ರಕೃತಿ ಸೊಬಗಿನಿಂದ ಪ್ರವಾಸಿಗರನ್ನು ಸೆಳೆಯುವ ಮಾಂದಲ್ಪಟ್ಟಿ ಜೀಪ್ ಗೊಂದಲದಿAದ ೨೦೨೩ರಲ್ಲಿ ಪ್ರವಾಸಿಗರಿಂದ ದೂರವಾಗಿದೆ. ಜನವರಿ ೨೦೨೩ರಲ್ಲಿ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದ ಮಾಂದಲ್ಪಟ್ಟಿಗೆ, ೨೦೨೩ ವರ್ಷಾಂತ್ಯ ಡಿಸೆಂಬರ್ ತಿಂಗಳಲ್ಲಿ ಕೇವಲ ೫,೫೦೦ ಮಂದಿ ಮಾತ್ರ ಭೇಟಿ ನೀಡಿದ್ದಾರೆ.
ಪ್ರತೀ ವರ್ಷ ಮೂರು ಲಕ್ಷಕ್ಕೂ ಅಧಿಕ ಪ್ರವಾಸಿಗರನ್ನು ಸೆಳೆಯುತ್ತಿದ್ದ ಮಾಂದಲ್ ಪಟ್ಟಿಗೆ, ಜೀಪ್ ನಿಷೇಧದಿಂದ ಉಂಟಾಗಿರುವ ಸಮಸ್ಯೆಯಿಂದ ಇದೀಗ ಹತ್ತು ಸಾವಿರ ಮಂದಿ ಕೂಡ ಭೇಟಿ ನೀಡದಂತಾಗಿದೆ. ಒಟ್ಟಿನಲ್ಲಿ ಕೊಡಗಿನ ಪ್ರವಾಸೋದ್ಯಮಕ್ಕೆ ೨೦೨೩ ಜೀವ ತುಂಬಿದೆ.