್ಡ ಅನಿಲ್ ಎಚ್.ಟಿ.
ಅಯೋಧ್ಯೆಯಿಂದ ಪ್ರತ್ಯಕ್ಷ ವರದಿ
ಅಯೋಧ್ಯೆ - ಶ್ರೀರಾಮನಿಗೆ ೫೦೦ ವರ್ಷಗಳ ಬಳಿಕ ಅವನ ಹುಟ್ಟೂರಿಗೆ ಮರಳಿ ಬರುವ ಸಂಭ್ರಮ..ಬಹುಕೋಟಿ ಹಿಂದೂಗಳ ಶತಮಾನಗಳ ಕನಸು ನನಸಾಗುವ ಹೊತ್ತು.. ದೇಶದ ಇತಿಹಾಸದಲ್ಲಿಯೇ ಅತ್ಯಂತ ವೈಭವದ ದೈವಿಕ ಕಾರ್ಯಕ್ರಮ... ಭಾರತದಲ್ಲಿಯೇ ಈವರೆಗೆ ನಡೆದಿರದಂಥ ಅತೀ ದೊಡ್ಡ ಧಾರ್ಮಿಕ ಉತ್ಸವಕ್ಕೆ ಉತ್ತರ ಪ್ರದೇಶದ ಅಯೋಧ್ಯೆ ನಗರ ಸಮರೋಪಾದಿಯಲ್ಲಿ ಸಜ್ಜಾಗುತ್ತಿದೆ.
ಶ್ರೀರಾಮನ ಜನ್ಮಸ್ಥಾನದಲ್ಲಿ ಕೊನೆಗೂ ಜ.೨೨ ರಂದು ಶ್ರೀರಾಮಮಂದಿರ ಲೋಕಾರ್ಪಣೆಯಾಗಲಿದೆ. ಭಕ್ತರ ಬಹುದಿನಗಳ ಬೇಡಿಕೆಯ ದೇವಮಂದಿರದ ಉದ್ಘಾಟನೆಯ ದೈವಿಕ ಕೈಂಕರ್ಯಕ್ಕೆ ಕೇವಲ ೭ ದಿನಗಳು ಇರುವಂತೆಯೇ ಶ್ರೀರಾಮನ ನಗರ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಅಯೋಧ್ಯೆಯಲ್ಲಿ ಈಗ ಮೈ ಕೊರೆಯುವ ಛಳಿ. ೯ ಡಿಗ್ರಿ ಸೆ. ನಷ್ಟು ತಾಪಮಾನ ಕಂಡುಬAದಿದೆ. ಮಧ್ಯಾಹ್ನವಾದರೂ ಸೂರ್ಯನ ದರ್ಶನವಿಲ್ಲದೇ ಮಂಜು ಮುಸುಕಿದ ವಾತಾವರಣದಲ್ಲಿರುವ ಅಯೋಧ್ಯೆ ನಗರಿಯಲ್ಲಿ ಶ್ರೀರಾಮ ದೇವಾಲಯದ ಮೊದಲ ಹಂತದ ಕಾಮಗಾರಿ ಅಂತಿಮ ಹಂತದಲ್ಲಿದೆ.
ದಶರಥನ ಅರಮನೆಯಾಗಿದ್ದ ಕನಕ ಭವನದ ಹಿಂಬದಿಯಲ್ಲಿಯೇ ಶ್ರೀರಾಮಮಂದಿರ ಭವ್ಯರೂಪದಲ್ಲಿ ತಲೆ ಎತ್ತುತ್ತಿದೆ. ಮೇಲ್ನೋಟಕ್ಕೆ ಗಮನಿಸಿದರೆ, ಇಂದಿಗೂ ದೇವಾಲಯದ ಕಾರ್ಯ ನಡೆಯುತ್ತಲೇ ಇದೆ. ಇನ್ನೂ ದೇವಾಲಯದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿಲ್ಲ. ಈ ನಡುವೆ ಜ. ೨೨ ರಂದು ಪ್ರಧಾನಿ ಸೇರಿದಂತೆ ವಿವಿಧ ಗಣ್ಯರ ಸಮ್ಮುಖದಲ್ಲಿ ಮಂದಿರ ಲೋಕಾರ್ಪಣೆ ಮಾಡಲು ತರಾತುರಿಯಿಂದ ಕೆಲ¸ Àಕಾರ್ಯಗಳು ಭರದಿಂದ ಸಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.
ಶ್ರೀರಾಮ ದೇವಾಲಯ ಸಂಕೀರ್ಣಕ್ಕೆ ಪೊಲೀಸ್ ಮತ್ತು ಸೇನಾಪಡೆಯ ಕಮಾಂಡೋಗಳ ಸರ್ಪಗಾವಲು ವಿಧಿಸಲಾಗಿದೆ. ಅತೀ ಸೂಕ್ಷö್ಮ ರೀತಿಯಲ್ಲಿ ತಪಾಸಣೆಗೊಳಪಟ್ಟ ಬಳಿಕವೇ ಸಂಕೀರ್ಣದಲ್ಲಿನ ಕಾಮಗಾರಿಯನ್ನು ದೂರದಿಂದ ವೀಕ್ಷಿಸಲು ಬ್ಯಾರಿಕೇಡ್ ಒಳಗೆ ವೀಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ. ತಪಾಸಣೆ ಹೇಗಿದೆ ಎಂದರೆ, ಮೊಬೈಲ್, ಕ್ಯಾಮರ ಹೋಗಲಿ ಬಾಚಣಿಗೆ, ಪೆನ್ನು, ಪರ್ಸ್ನ್ನು ಕೂಡ ತಪಾಸಣೆ ಸಂದರ್ಭ ಪಕ್ಕಕ್ಕಿಡಲು ಸೂಚಿಸಿ, ಇದೆಲ್ಲವನ್ನೂ ಹೊರಗಿಟ್ಟ ಬಳಿಕವೇ ಸಂಕೀರ್ಣ ಕಾಮಗಾರಿ ವೀಕ್ಷಣೆಗೆ ಜನರನ್ನು ಒಳ ಬಿಡಲಾಗುತ್ತಿದೆ.. ಮೂರು ಹಂತದಲ್ಲಿನ ಬಿಗಿಯಾದ ತಪಾಸಣೆ ಬಳಿಕವೇ ಪ್ರಧಾನ ಮಂದಿರ ಮತ್ತು ಮಂದಿರ ಸಂಕೀರ್ಣದ ಕಾಮಗಾರಿ ವೀಕ್ಷಣಾ ಪ್ರದೇಶಕ್ಕೆ ತೆರಳಬಹುದು. ಇಲ್ಲಿಯೂ ಹೆಜ್ಜೆ ಹೆಜ್ಜೆಗೂ ಸುಸಜ್ಜಿತ ಬಂದೂಕುಧಾರಿ ಕಮಾಂಡೋಗಳು ಹದ್ದಿನಗಣ್ಣಲ್ಲಿ ಗಮನಿಸುತ್ತಿರುತ್ತಾರೆ. ಹಲವು ಮಾರು ದೂರದಲ್ಲಿ ಕಾಮಗಾರಿ ನಡೆಯುತ್ತಿರುವ ಮಂದಿರವನ್ನು ವೀಕ್ಷಿಸಲು ಪ್ರತಿನಿತ್ಯ ೧೫-೨೦ ಸಾವಿರ ಸಂದರ್ಶಕರು ಅಯೋಧ್ಯೆಗೆ ಬರುತ್ತಿದ್ದಾರೆ. ಜ.೨೨ ರ ನಂತರ ಈ ಸಂಖ್ಯೆ ದಿನಕ್ಕೆ ೧ ಲಕ್ಷ ಮೀರಬಹುದು ಎಂದು ಅಂದಾಜಿಸಲಾಗಿದೆ.
ಶ್ರೀರಾಮ ಮಂದಿರ ಸಂಕೀರ್ಣದೊಳಗಡೆಯೇ ಕಳೆದ ೩೦ ವರ್ಷಗಳಿಂದ ಪೂಜೆ ಸಲ್ಲಿಸುತ್ತಾ ಬರಲಾಗುತ್ತಿರುವ ಪ್ರಾಚೀನ ಕಾಲದ ಶ್ರೀರಾಮ, ಸೀತೆ, ಲಕ್ಷö್ಮಣರ ಮೂರ್ತಿಗಳಿಗೆ ಪ್ರತ್ಯೇಕ ಮಂದಿರ ನಿರ್ಮಿಸಲಾಗಿದೆ. ಮೂರು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಪ್ರಧಾನಿ ಮೋದಿಯವರು ನೂತನ ಮಂದಿರಕ್ಕೆ ಭೂಮಿಪೂಜೆ ನೆರವೇರಿಸಿದ ಸ್ಥಳದಲ್ಲಿಯೇ ಈ ಮೂರ್ತಿಗಳಿಗೆ ಪುಟ್ಟದಾದ ಮಂದಿರ ನಿರ್ಮಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಹಲವು ವರ್ಷಗಳ ಕಾಲ ಟೆಂಟ್ನಲ್ಲಿ ಪೂಜಿಸಲ್ಪಡುತ್ತಿದ್ದ ಈ ರಾಮನಿಗೆ ಮೂರು ವರ್ಷಗಳಿಂದ ಮಂದಿರದಲ್ಲಿ ಪೂಜೆ ಸ್ವೀಕರಿಸುವ ಯೋಗ ಲಭಿಸಿದೆ. ಈ ಮಂದಿರ ವೀಕ್ಷಣೆಯ ಬಳಿಕ ಪೊಲೀಸ್ ಭದ್ರವ್ಯೂಹದೊಳಗೆ ಸಾಗಿದರೆ ಮಂದಿರ ಮತ್ತು ಸಂಕೀರ್ಣದ ಯೋಜನಾ ಕಾಮಗಾರಿಗಳ ವಿವಿಧ ಹಂತಗಳನ್ನು ವೀಕ್ಷಿಸಬಹುದು. ಬಹುತೇಕ ಕಾಮಗಾರಿಗಳು ಶೇ. ೬೦ ರಷ್ಟು ಮಾತ್ರ ಮುಕ್ತಾಯವಾಗಿದ್ದು ಸಂಪೂರ್ಣವಾಗಲು ಇನ್ನೂ ೬-೭ ತಿಂಗಳಾದರೂ ಅಗತ್ಯವಿದೆ.
ಕಳೆದ ಕೆಲವು ವಾರಗಳಿಂದ ಉತ್ತರ ಪ್ರದೇಶದ ಪೊಲೀಸರೇ ಶ್ರೀರಾಮ ಮಂದಿರದ ಬಂದೋಬಸ್ತ್ ಹೊಣೆ ವಹಿಸಿಕೊಂಡಿದ್ದಾರೆ. ಈ ಮೊದಲು ವಿವಾದಿತ ಮಂದಿರದ ಜಾಗವನ್ನು ಸಿಆರ್ಪಿಎಫ್ ಗಮನಿಸುತ್ತಿತ್ತು. ಇದೀಗ ಉತ್ತರ ಪ್ರದೇಶದ ಪೊಲೀಸರ ಉಸ್ತುವಾರಿಯಲ್ಲಿನ ಶ್ರೀರಾಮ ಮಂದಿರಕ್ಕಾಗಿಯೇ ವಿಶೇಷ ಪೊಲೀಸ್ ಕಾರ್ಯಪಡೆ ರಚಿಸಲಾಗಿದೆ. ಅತ್ಯಾಧುನಿಕ ಶಸ್ತಾçಸ್ತçಗಳನ್ನು ಈ ಕಾರ್ಯಪಡೆಗೆ ನೀಡಲಾಗಿದೆ. ೨ ದೇವಾಲಯದ ಪ್ರವೇಶದಲ್ಲಿಯೇ ಅತ್ಯಾಧುನಿಕ ತಪಾಸಣಾ ವ್ಯವಸ್ಥೆಯಿದ್ದು, ಸೂಕ್ಷö್ಮ ಕ್ಯಾಮರ ಕಣ್ಗಾವಲಿರಿಸಲಾಗಿದೆ. ಬಾಂಬ್ ನಿಷ್ಕಿçÃಯ ದಳ, ಶ್ವಾನ ಪಡೆಗಳು ಕೂಡ ಇಲ್ಲಿಯೇ ಬೀಡು ಬಿಟ್ಟಿವೆ.
ಶ್ರೀರಾಮ ಮಂದಿರದ ಲೋಕಾರ್ಪಣೆಗೆ ಗಣ್ಯಾತಿಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಿಆರ್ಪಿಎಫ್ ಮತ್ತು ಸೇನಾ ಕಮಾಂಡೋಗಳನ್ನೂ ರಾಮಮಂದಿರ ಸಂಕೀರ್ಣದ ಭದ್ರತೆಗೆ ಕಳೆದ ವಾರದಿಂದ ನಿಯೋಜಿಸಲಾಗಿದೆ. ಸಿಆರ್ಪಿಎಫ್ನ ಮಹಿಳಾ ಬೆಟಾಲಿಯನ್ ಕೂಡ ಸ್ಥಳದಲ್ಲಿ ಬಂದೋಬಸ್ತ್ ಹೊಣೆ ವಹಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ೪೦೦ ಕ್ಕೂ ಅಧಿಕ ಪೊಲೀಸರು ಹೆಜ್ಜೆ ಹೆಜ್ಜೆಗೂ ಸಂಕೀರ್ಣ ಜಾಗದಲ್ಲಿ ಕಾವಲಿದ್ದಾರೆ.
ಇಂಥ ಸರ್ಪಗಾವಲನ್ನು ಭೇದಿಸಿ ಸಲೀಸಾಗಿ ಮಂದಿರ ಪ್ರದೇಶಕ್ಕೆ ತೆರಳುವುದು ಖಂಡಿತಾ ಅಸಾಧ್ಯ. ಇದೇ ೨೨ ರಂದು ಶ್ರೀರಾಮ ಮಂದಿರ ಭಕ್ತಾರ್ಪಣೆಯಾದ ಬಳಿಕವೂ ಇದೇ ಸೂಕ್ಷö್ಮ ತಪಾಸಣೆ ಮುಂದುವರೆಯುವುದರಿAದಾಗಿ ಭಕ್ತರಿಗೆ ಶ್ರೀರಾಮ ಮಂದಿರ ಮತ್ತು ಸಂಕೀರ್ಣಕ್ಕೆ ತೆರಳಿ ವಾಪಸಾಗಲು ಏನಿಲ್ಲವೆಂದರೂ ೩ ಗಂಟೆಗಳಾದರೂ ಬೇಕೇ ಬೇಕು ಎಂಬAಥ ಸ್ಥಿತಿಯಿದೆ. ಭಾರತದ ಬೇರೆ ದೇವಾಲಯಗಳಿಗೆ ಹೋಲಿಸಿದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ೨.೭೭ ಎಕ್ರೆ ವಿಶಾಲವಾದ ಜಾಗದಲ್ಲಿರುವುದು ಮತ್ತು ಮಂದಿರ ಸಂಕೀರ್ಣವು ಕೂಡ ಅತ್ಯಂತ ವಿಶಾಲವಾದ ೭೭ ಎಕ್ರೆ ಪ್ರದೇಶದಲ್ಲಿರುವುದರಿಂದ ಎಷ್ಟೇ ಸಂಖ್ಯೆಯಲ್ಲಿ ಭಕ್ತರು ಬಂದರೂ ನೂಕು ನುಗ್ಗಲಿನ ಪರಿಸ್ಥಿತಿ ಉದ್ಬವಿಸಲಾರದು.
ಅಯೋಧ್ಯೆಯ ಮುಖ್ಯ ರಸ್ತೆ ಸೇರಿದಂತೆ ರಾಷ್ಟಿçÃಯ ಹೆದ್ದಾರಿ ೨೭ನ್ನು ಸಂಪರ್ಕಿಸುವ ಇಲ್ಲಿನ ಎಲ್ಲಾ ರಸ್ತೆಗಳನ್ನು ನೂತನವಾಗಿ ಡಾಮರೀಕರಣಗೊಳಿಸುವ ಕಾಮಗಾರಿ ಭರದಿಂದ ಸಾಗಿದೆ. ರಸ್ತೆಯ ಅಲ್ಲಲ್ಲಿ ಯಂತ್ರೋಪಕರಣಗಳು ರಸ್ತೆ ಅಭಿವೃದ್ಧಿ ಕಾರ್ಯದಲ್ಲಿ ನಿರತವಾಗಿದೆ.
ಮಂದಿರ ಲೋಕಾರ್ಪಣೆಗೆ ಇನ್ನೊಂದೇ ವಾರ ಇರುವಂತೆಯೇ ಅಯೋಧ್ಯಾ ನಗರವನ್ನು ವಿದ್ಯುದ್ದೀಪಾಲಂಕಾರಗಳಿAದ ಶೃಂಗರಿಸಲಾಗಿದೆ. ಸಾಲು ದೀಪಗಳು ರಾತ್ರಿಯಲ್ಲಿ ಪ್ರಜ್ವಲಿಸಿ ಅಯೋಧ್ಯೆಗೆ ಹೊಸ ಮೆರುಗು ನೀಡಿವೆ.
ಅಯೋಧ್ಯೆಯಲ್ಲಿನ ೧೨ ಸಾವಿರದಷ್ಟು ಕೊಠಡಿಗಳು ಜ.೨೦ ರಿಂದಲೇ ಭರ್ತಿಯಾಗಿದೆ. ಧರ್ಮಛತ್ರದಲ್ಲಿ ೬ ಸಾವಿರದಷ್ಟು ಕೋಣೆಗಳನ್ನು ಭಕ್ತರಿಗೆ ಮೀಸಲಿಡಲಾಗಿದೆ. ಈಗಾಗಲೇ ತಂಡೋಪತAಡವಾಗಿ ದೇಶದ ವಿವಿಧೆಡೆಗಳಿಂದ ಭಕ್ತ ಸಾಗರ ಅಯೋಧ್ಯೆ ನಗರಕ್ಕೆ ಬರುತ್ತಿದೆ. ವಿಶೇಷವಾಗಿ ಸಾಧುಸಂತರು ತಮ್ಮ ಭಕ್ತರೊಂದಿಗೆ ಶ್ರೀರಾಮನೂರಿಗೆ ಬರುತ್ತಿದ್ದು ಶ್ರೀರಾಮ ಪಟ್ಟಾಭಿಷೇಕದಲ್ಲಿ ಪಾಲ್ಗೊಳ್ಳಲು ಸಾಧುಸಂತರು ಕಾತುರರಾಗಿದ್ದಾರೆ. ಜೈ ಶ್ರೀರಾಮ್ ಎಂಬ ಘೋಷಣೆಯೊಂದಿಗೆ ನೂರಾರು ಭಕ್ತರ ಪಡೆಯೊಂದಿಗೆ ಈ ರೀತಿ ಸಾಧುಗಳು ಶ್ರೀರಾಮನಗರವನ್ನು ಪ್ರವೇಶಿಸುತ್ತಿರುವುದರಿಂದಾಗಿ ಈಗಾಗಲೇ ಅಯೋಧ್ಯೆಯಲ್ಲಿ ಕಾವಿಧಾರಿಗಳೇ ಹೆಚ್ಚಾಗಿ ಕಂಡು ಬರುತ್ತಿದ್ದಾರೆ.
ಅಯೋಧ್ಯೆಯಲ್ಲಿ ಈಗ ಮೈಕೊರೆಯುವ ಛಳಿ, ಶೀತಗಾಳಿ ಬೀಸುತ್ತಿದೆ. ಸಂಜೆಯಾಗುತ್ತಿರುವAತೆಯೇ ಶೀತವಾತಾವರಣ ಹೆಚ್ಚುತ್ತಿರುವುದರಿಂದಾಗಿ ನಗರದ ಅಲ್ಲಲ್ಲಿ ಜನರು ಬೆಂಕಿ ಉರಿಸಿಕೊಂಡು ಮೈ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ರಾತ್ರಿ ೯ ಗಂಟೆಯಾಗುತ್ತಿರುವAತೆಯೇ ಅಯೋಧ್ಯೆಯಲ್ಲಿ ಜನ ಸಂಚಾರ ವಿರಳವಾಗಿ ಎಲ್ಲೆಲ್ಲೂ ಖಾಕಿಧಾರಿ ಪೊಲೀಸರೇ ಭದ್ರತೆಯ ಉಸ್ತುವಾರಿಗಳಾಗಿ ಸಂಚರಿಸುತ್ತಿದ್ದಾರೆ. ಚಳಿ ತಡೆಯಲಾಗದೇ ಪೊಲೀಸರು ಕೂಡ ತಮ್ಮ ಟೆಂಟ್ ಮುಂಬದಿ ಬೆಂಕಿ ಉರಿಸಿಕೊಂಡು ಮೈ ಬಿಸಿ ಮಾಡಿಕೊಳ್ಳುತ್ತಿದ್ದಾರೆ.
ಶ್ರೀರಾಮ ಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಯೋಧ್ಯೆ ನಗರದೊಳಕ್ಕೆ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಯೋಧ್ಯೆ ನಗರದಿಂದ ೨ ಕಿ.ಮೀ. ಹೊರಭಾಗದಲ್ಲಿ ಮಾಂಸ ಮತ್ತು ಮದ್ಯದ ಮಾರಾಟಕ್ಕೆ ಅವಕಾಶ ನೀಡಲಾಗಿದೆಯಾದರೂ ಶ್ರೀರಾಮೋತ್ಸವ ಹಿನ್ನೆಲೆಯಲ್ಲಿ ಹೆಚ್ಚಿನ ಜನ ಮದ್ಯ, ಮಾಂಸ ಖರೀದಿಗೆ ಮುಂದಾಗುತ್ತಿಲ್ಲವAತೆ.
ಪ್ರಸ್ತುತ ಸಾವಿರಾರು ಜನ ಬರುತ್ತಿರುವುದು ಮತ್ತು ಮುಂದಿನ ವಾರದಿಂದ ಲಕ್ಷಾಂತರ ಮಂದಿ ಅಯೋಧ್ಯೆಗೆ ಬರಲಿರುವುದರಿಂದಾಗಿ ಸ್ಥಳೀಯ ಆಡಳಿತ ಹೆಚ್ಚುವರಿಯಾಗಿ ೬೦೦ ಪೌರಕಾರ್ಮಿಕರನ್ನು ಸ್ವಚ್ಛತೆ ಕಾರ್ಯಕ್ಕೆ ನಿಯೋಜಿಸಿದೆ. ಹೀಗಾಗಿ ಅಯೋಧ್ಯೆಯಲ್ಲಿ ಎಲ್ಲಿಯೂ ಕಸಕಡ್ಡಿ, ಮಾಲಿನ್ಯ ಕಂಡು ಬರುತ್ತಿಲ್ಲ.
ಜನವರಿ ೨೨ - ಅಯೋಧ್ಯೆಯ ಪಾಲಿಗೆ ಇದು ಚರಿತ್ರೆ ಸೃಷ್ಟಿಸುವ ದಿನ. ಭಾರತೀಯರ ಪಾಲಿಗೆ ಇದೇ ದಿನ ೫೦೦ ವರ್ಷಗಳ ಕನಸು ನನಸಾಗುವ ಮಹೋನ್ನತ ದಿನ. ಇಂಥ ಅವಿಸ್ಮರಣೀಯ ದಿನವನ್ನು ಅಯೋಧ್ಯಾ ವಾಸಿಗಳು ಸಂಭ್ರಮದಿAದ ಕಾಯುತ್ತಿದ್ದಾರೆ, ಈಗಾಗಲೇ ಅಯೋಧ್ಯೆಯ ಮನೆ ಮನೆಗಳಲ್ಲಿ ಹಬ್ಬದ ಸಡಗರ ಕಂಡು ಬರುತ್ತಿದ್ದು ಬಹುತೇಕ ಮನೆಗಳು, ಅಂಗಡಿಗಳು ಹೊಸದಾಗಿ ಸುಣ್ಣ ಬಣ್ಣ ಬಳಿದುಕೊಂಡು ಸುಂದರವಾಗಿ ಕಂಗೊಳಿಸುತ್ತಿದೆ.
ವಿಶ್ವದ ಹಿಂದೂಗಳ ಪಾಲಿಗೆ ರಾಮ ಹೇಗೆ ಆದರ್ಶಪ್ರಾಯನೋ ಹಾಗೇ ಶ್ರೀರಾಮ ಮಂದಿರ ಲೋಕಾರ್ಪಣೆ ಮತ್ತು ತನ್ನೂರಿಗೆ ಮರಳಿ ಬಂದು ಪಟ್ಟಾಭಿಷೇಕ ಪಡೆದುಕೊಳ್ಳಲಿರುವ ರಘುರಾಮನ ಉತ್ಸವವನ್ನೂ ಮಾದರಿಯಾಗಿ ಆದರ್ಶಮಯವಾಗಿ ಮಾಡಲು ಅಯೋಧ್ಯೆಯ ಜನ ಸಂಕಲ್ಪ ತೊಟ್ಟಂತಿದೆ. ಇಂಥ ಸಂಭ್ರಮ ಅಯೋಧ್ಯೆಯ ಎಲ್ಲೆಲ್ಲೂ ಕಂಡುಬAದಿದೆ.
(ಚಿತ್ರಗಳು : ರೀನಾ ಅನಿಲ್)