ಸೋಮವಾರಪೇಟೆ, ಜ. ೧೩: ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಯಾದ ಅನ್ನಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ೫ ಕೆ.ಜಿ. ಅಕ್ಕಿಯ ಬದಲಾಗಿ ಪ್ರತಿ ಸದಸ್ಯರಿಗೆ ಡಿ.ಬಿ.ಟಿ. ಮುಖಾಂತರ ೫ ಕೆ.ಜಿ. ಅಕ್ಕಿಯ ಬಾಬ್ತು ರೂ. ೧೭೦ ಪಾವತಿಸ ಲಾಗುತ್ತಿದ್ದು, ಸದರಿ ಯೋಜನೆಯನ್ನು ಪ್ರತಿ ಫಲಾನುಭವಿಗಳಿಗೂ ತಲುಪಿಸುವುದು ಇಲಾಖೆಯ ಆದ್ಯ ಕರ್ತವ್ಯವಾಗಿದೆ.
ಈಗಾಗಲೇ ಯೋಜನೆ ಚಾಲ್ತಿಯಲ್ಲಿದ್ದು, ರೂ. ೧೭೦ ರಂತೆ ಡಿ.ಬಿ.ಟಿ. ಪಾವತಿಯಾಗದವರ ಪಟ್ಟಿಯನ್ನು ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ನೀಡಲಾಗಿದೆ. ಡಿ.ಬಿ.ಟಿ. ಪಾವತಿಯಾಗದ ಫಲಾನುಭವಿಗಳು ತಮ್ಮ ಹೆಸರು ನ್ಯಾಯ ಬೆಲೆ ಅಂಗಡಿಯವರಿಗೆ ನೀಡಿರುವ ಪಟ್ಟಿಯಲ್ಲಿ ಇದೆಯೇ ಎಂಬ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕಿದೆ.
ಈವರೆಗೆ ಡಿ.ಬಿ.ಟಿ. ಪಾವತಿ ಯಾಗದ ಪಡಿತರಚೀಟಿದಾರರು ತಾ. ೧೬ ರಂದು ತಾಲೂಕು ಕಚೇರಿಯ ಆಹಾರ ಶಾಖೆಯಲ್ಲಿ ಆಯೋಜಿಸಿರುವ ವಿಶೇಷ ಅದಾಲತ್ನಲ್ಲಿ ಪಡಿತರ ಚೀಟಿ, ಆಧಾರ್ ಕಾರ್ಡ್ನೊಂದಿಗೆ ಹಾಜರಾಗಿ ಇ.ಕೆ.ವೈ.ಸಿ. ನವೀಕರಿಸಿಕೊಳ್ಳಬೇಕೆಂದು ತಾಲೂಕು ತಹಶೀಲ್ದಾರ್ ಹಾಗೂ ಆಹಾರ ಇಲಾಖೆಯ ಪ್ರಕಟಣೆ ತಿಳಿಸಿದೆ.