ಕೂಡಿಗೆ, ಜ. ೧೩: ಇಲ್ಲಿಗೆ ಸಮೀಪದ ಗುಮ್ಮನಕೊಲ್ಲಿ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಗುಮ್ಮನಕೊಲ್ಲಿ ಪ್ರೀಮಿಯರ್ ಲೀಗ್ ಸೀಸನ್ಸ್-೭, ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯು ಗುಮ್ಮನಕೊಲ್ಲಿ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದು ಅದರಲ್ಲಿ ಆರ್.ಸಿ.ಜಿ. ತಂಡ ಪ್ರಥಮ ಸ್ಥಾನ ಪಡೆದು ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.

ದ್ವಿತೀಯ ಸ್ಥಾನವನ್ನು ಜೈ ಫ್ರೆಂಡ್ಸ್ ತಂಡ, ತೃತೀಯ ಸ್ಥಾನ ಎಸ್.ಆರ್. ಫ್ರೆಂಡ್ಸ್ ತಂಡ, ನಾಲ್ಕನೇ ಸ್ಥಾನವನ್ನು ಟೀಮ್ ಪ್ರಣೀತ್ ತಂಡ ಪಡೆದುಕೊಂಡಿತು. ವಿಜೇತ ತಂಡಗಳಿಗೆ ನಗದು ಹಾಗೂ ಟ್ರೋಫಿಗಳನ್ನು ವಿತರಣೆ ಮಾಡಲಾಯಿತು

ಪಂದ್ಯಾವಳಿಗಳು ಲೀಗ್ ಮಾದರಿಯಲ್ಲಿ ನಡೆದವು. ಲೀಗ್ ಪಂದ್ಯದಲ್ಲಿ ಟೀಮ್ ಕನ್ನಂಬಾಡಮ್ಮ, ಎಸ್.ಆರ್. ಫ್ರೆಂಡ್ಸ್, ಆರ್.ಸಿ.ಜಿ, ಟೀಮ್ ಪ್ರಣೀತ್, ಹೆಚ್.ಎಂ. ಬ್ರದರ್, ಜೈ ಫ್ರೆಂಡ್ಸ್ ತಂಡಗಳು ಭಾಗವಹಿಸಿದ್ದವು.

ಬಹುಮಾನ ವಿತರಣೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ನೆರವೇರಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟಗಳು ನಡೆಯುವುದರಿಂದ ಗ್ರಾಮದ ಯುವಕರಲ್ಲಿ ಸಂಘಟನಾತ್ಮಾಕ ಮನೋಭಾವ ಬೆಳೆಯಬಹುದು ಅಲ್ಲದೆ ಯುವಕರು ಒಗ್ಗೂಡುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗುವುದು ಎಂದರು.

ಈ ಸಂದರ್ಭದಲ್ಲಿ ಉದ್ಯಮಿ ಮಂಜೇಶ್, ಗುತ್ತಿಗೆದಾದ ರವಿಕುಮಾರ್, ಜಯರಾಜ್, ಇಂಜಿನಿಯರ್ ಕೆ. ಪೀಟರ್, ಕುಶಾಲನಗರ ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ, ಖಾಲಿಮುಲ್, ಸರಸ್ವತಿ ರವಿ, ಮಣಿಕುಮಾರ್, ಸಿ.ಎಂ. ಆಸಿಫ್, ಶ್ರೀ ಬಸವೇಶ್ವರ ಯುವಕದ ಅಧ್ಯಕ್ಷ ಮಣಿ ಕುಮಾರ್, ಕಾರ್ಯದರ್ಶಿ ವಸಂತ, ಖಂಜಾಚಿ ಅಬ್ದುಲ್ ಖಾದರ್, ಅವಿನಾಶ್, ಸೇರಿದಂತೆ ಸಮಿತಿಯ ಸದಸ್ಯರು, ಕ್ರೀಡಾಕೂಟದಕ್ಕೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ದಾನಿಗಳು ಹಾಜರಿದ್ದರು.