ವೀರಾಜಪೇಟೆ, ಜ. ೧೩: ಅಪ್ಪಾರಂಡ ಸುಗು ಸುಬ್ರಮಣಿ ಜ್ಞಾಪಕಾರ್ಥ ಅಪ್ಪಾರಂಡ ಮುತ್ತಣ್ಣ ಕುಟುಂಬಸ್ಥರ ಪ್ರಯೋಜಕತ್ವದಲ್ಲಿ ಕೊಡಗು ಬಾಸ್ಕೆಟ್ಬಾಲ್ ಲೀಗ್ ಸೀಜನ್-೧ ವೀರಾಜಪೇಟೆ ಪ್ರಗತಿ ಶಾಲೆಯ ಬಾಸ್ಕೆಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯಿತು. ಬ್ಲಾಕ್ ಕೋಬ್ರಾಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿ ರೂ.೫೦,೦೦೦ ನಗದು ಹಾಗೂ ಟ್ರೋಫಿ ಪಡೆದುಕೊಂಡರೆ, ದ್ವಿತೀಯ ಸ್ಥಾನ ಗಳಿಸಿದ ಟೀಗಲ್ ಹೋಪ್ಸ್ಟರ್ಸ್ ತಂಡ ರೂ.೨೫,೦೦೦ ಹಾಗೂ ನಗದು ತನ್ನದಾಗಿಸಿ ಕೊಂಡಿತು. ಒಟ್ಟು ೬ ತಂಡಗಳಾದ ಮೇಡನ್ಸ್ ಮಡಿಕೇರಿ, ವೀರಾಜಪೇಟೆ ತಂಡಗಳಾದ ಬ್ಲಾಕ್ ಕೋಬ್ರಾಸ್, ಎವೇಂರ್ಸ್ ಮತ್ತು ರಾಯಲ್ ರಜಥಾದ್ರೀಸ್, ಕಾವೇರಿಯನ್ಸ್ ಗೋಣಿ ಕೊಪ್ಪಲು, ಟೀಗಲ್ ಹೋಪ್ಸ್ಟರ್ಸ್ ಪೊನ್ನಂಪೇಟೆ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.
ಮೊದಲನೇ ಸೆಮಿಫೈನಲ್ ಕಾವೇರಿಯನ್ಸ್ ಗೋಣಿಕೊಪ್ಪಲು ಮತ್ತು ಬ್ಲಾಕ್ ಕೋಬ್ರಾಸ್ ತಂಡಗಳ ಮಧ್ಯೆ ನಡೆಯಿತು. ಬ್ಲಾಕ್ ಕೋಬ್ರಾಸ್ ತಂಡವು ಕಾವೇರಿಯನ್ಸ್ ತಂಡವನ್ನು ಮಣಿಸಿ ಫೈನಲ್ಗೆ ಅರ್ಹತೆ ಪಡೆಯಿತು. ದ್ವಿತೀಯ ಸೆಮಿಫೈನಲ್ ರಾಯಲ್ ರಜಥಾದ್ರೀಸ್ ಮತ್ತು ಟೀಗಲ್ ಹೋಪ್ಸ್ಟರ್ಸ್ ಪೊನ್ನಂಪೇಟೆ ತಂಡಗಳ ಮಧ್ಯೆ ನಡೆದು ಟೀಗಲ್ ಹೋಪ್ಸ್ಟರ್ಸ್ ಪೊನ್ನಂಪೇಟೆ ಫೈನಲ್ಗೆ ಪ್ರವೇಶ ಪಡೆಯಿತು. ಅಂತರರಾಷ್ಟಿçÃಯ ಮಾಜಿ ಬಾಸ್ಕೆಟ್ಬಾಲ್ ಆಟಗಾರ್ತಿ ಪುಷ್ಪ ಕುಟ್ಟಯ್ಯ ಮತ್ತು ಅತಿಥಿ ಗಣ್ಯರು ಕ್ರೀಡಾಪಟುಗಳಿಗೆ ಶುಭಹಾರೈಸಿ ಫೈನಲ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಫೈನಲ್ನಲ್ಲಿ ಪೂರ್ಣ ಅವಧಿಯ ಪಂದ್ಯಾಟ ಮುಗಿದು ೫೫ ಅಂಕಗಳೊAದಿಗೆ ಉಭಯ ತಂಡಗಳು ಸಮಬಲ ಸಾಧಿಸಿದವು. ೦೫ ನಿಮಿಷಗಳ ಅಧಿಕ ಪಂದ್ಯಾಟದಲ್ಲಿ ಬ್ಲಾಕ್ ಕೋಬ್ರಾಸ್ ತಂಡವು ೦೬ ಅಂಕಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಮೈಸೂರಿನ ಶಮಂತ್, ಸಂಜಯ್, ಮಂಗಳೂರಿನ ಮೋಹನ್ ಮತ್ತು ರಾಜೇಶ್ ಪಂದ್ಯಾಟದ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಟೀಗಲ್ ಹೋಪ್ಸ್ಟರ್ಸ್ ಪೊನ್ನಂಪೇಟೆ ತಂಡದ ಅರ್ಪಣ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಬ್ಲಾಕ್ ಕೋಬ್ರಾಸ್ ವೀರಾಜಪೇಟೆ ತಂಡದ ಪ್ರತೀಕ್ ಪೂವಣ್ಣ ಅವರು ಉತ್ತಮ ಡಿಫೆಂಡರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಸಮಾರೋಪ ಸಮಾರಂಭ
ಕ್ರೀಡೆಗಳು ಸಾಮರಸ್ಯ ಬೆಸೆಯುವ ವೇದಿಕೆಯಂತೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಜಾತಿ ಧರ್ಮಗಳ ಮಧ್ಯೆ ಒಡಕುಗಳು ಮಾಯವಾಗುತ್ತವೆ. ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಮೈಸೂರಿನ ಉದ್ಯಮಿ ಕುಂಡಚ್ಚೀರ ನಿತಿನ್ ಅವರು ಹೇಳಿದರು.
ಪಂದ್ಯಾಟಗಳ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ದೇಶದ ವಿವಿಧೆಡೆಗಳಲ್ಲಿ ಕೋಮು ಗಲಭೆ, ಧರ್ಮಗಳ ಮಧ್ಯೆ ಒಳ ಜಗಳಗಳು, ಮಾದಕ ದ್ರವ್ಯಗಳ ಉಪಯೋಗಗಳಂತಹ ಸಮಾಜ ವಿರೋಧಿ ಕಾರ್ಯಗಳ ಬಗ್ಗೆ ಪತ್ರಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಷಯಗಳ ಬಗ್ಗೆ ಎಲ್ಲರಿಗೂ ಅರಿವಿದೆ. ಇವೆಲ್ಲವನ್ನೂ ಮೆಟ್ಟಿನಿಂತು ಸಾಮರಸ್ಯ ಬರೆಯಲು ಕ್ರೀಡೆಗೆ ಮಾತ್ರ ಸಾಧ್ಯ. ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿ, ಭಾಗವಹಿಸಿ ಧರ್ಮಗಳನ್ನು ಜೋಡಣೆ ಮಾಡುವ ಪರಿಕಲ್ಪನೆ ನಮ್ಮದಾಗಬೇಕು ಎಂದು ಹೇಳಿದರು.
ಅಂರ್ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ಪಿ. ತಿಮ್ಮಯ್ಯ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಇತರ ಎಲ್ಲಾ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವಂತೆ ಬಾಸ್ಕೆಟ್ಬಾಲ್ ಕ್ರೀಡೆಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಾಸ್ಕೆಟ್ಬಾಲ್ ಲೀಗ್ ಆರಂಭಿಸಲಾಗಿದೆ. ದಾನಿಗಳು ಮತ್ತು ಕ್ರೀಡಾ ಪ್ರೇಮಿಗಳು ಹಾಗೂ ಪಂದ್ಯಾಟದಲ್ಲಿ ಭಾಗವಹಿಸಿದ ಆರು ತಂಡಗಳ ಮಾಲೀಕರು ಮತ್ತು ಕ್ರೀಡಾಪಟುಗಳ ಸಹಕಾರದಿಂದ ಪಂದ್ಯಾಟಗಳು ಉತ್ತಮವಾಗಿ ಮೂಡಿ ಬಂದವು ಎಂಬುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪುರಸಭೆಯ ಸದಸ್ಯರಾದ ಮೊಹಮ್ಮದ್ ರಾಫಿ, ಹೆಚ್.ಎಸ್. ಮತೀನ್, ಉದ್ಯಮಿ ಮತ್ತು ಸಮಾಜ ಸೇವಕರಾದ ಶರೀಫ್ ಎಂ.ಇ. ಎಜಾಜ್ ಅಹಮ್ಮದ್ ಅವರುಗಳು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಅಂರ್ರಾಷ್ಟಿçÃಯ ಮಾಜಿ ಬಾಸ್ಕೆಟ್ ಬಾಲ್ ಆಟಗಾರ್ತಿ ಪುಷ್ಪ ಕುಟ್ಟಯ್ಯ, ಪಂದ್ಯಾಟದ ಆಯೋಜಕರಾದ ಇರ್ಷಾದ್ (ಇಚ್ಚು) ನೌಶೀಬ್, ಉದ್ಯಮಿ ನವಾಸ್, ಪಂದ್ಯಾಟದ ದಾನಿಗಳಾದ ಅಪ್ಪಾರಂಡ ಕುಟುಂಬಸ್ಥರು, ಉದ್ಯಮಿ ಶಾನ್, ಉದ್ಯಮಿ ಅತೀಫ್ ಮುಂತಾದವರು ಉಪಸ್ಥಿತರಿದ್ದರು.