ಸಿದ್ದಾಪುರ, ಜ. ೧೩: ಹಾಡಹಗಲೇ ಕಾಫಿ ತೋಟದೊಳಗೆ ಎರಡು ಭಾರೀ ಗಾತ್ರದ ಹುಲಿಗಳು ಕಾರ್ಮಿಕನೋರ್ವನ ಎದುರಿನಲ್ಲಿ ಪ್ರತ್ಯಕ್ಷವಾಗಿದ್ದು, ಕೂದಲೆಳೆಯ ಅಂತರದಿAದ ಪ್ರಾಣಾಪಾಯದಿಂದ ಪಾರಾದ ಘಟನೆ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.

ಕರಡಿಗೋಡು ಗ್ರಾಮದ ಕಂಬೀರAಡ ನಂದಾ ಗಣಪತಿ ಎಂಬವರ ಕಾಫಿ ತೋಟದಲ್ಲಿ ಕಾರ್ಮಿಕನಾಗಿರುವ ಆನಂದ ಕಾಫಿ ಹಣ್ಣುಗಳನ್ನು ತಿನ್ನುತ್ತಿದ್ದ ಕೋತಿಗಳನ್ನು ಮಧ್ಯಾಹ್ನ ೧೨ ಗಂಟೆಯ ಸಮಯಕ್ಕೆ ಓಡಿಸಿಕೊಂಡು ಪಟಾಕಿ ಸಿಡಿಸುತ್ತಾ ಬರುತ್ತಿದ್ದ ಸಂದರ್ಭದಲ್ಲಿ ದಿಢೀರನೆ ಎರಡು ಹುಲಿಗಳು ಕಾಫಿ ತೋಟದೊಳಗಿನಿಂದ ಪ್ರತ್ಯಕ್ಷಗೊಂಡಿವೆ. ೨೦ ಅಡಿಗಳಷ್ಟು ದೂರದಲ್ಲಿದ್ದ ಎರಡು ಹುಲಿಗಳನ್ನು ಕಂಡು ಕಾರ್ಮಿಕ ಜೋರಾಗಿ ಕಿರುಚಿ ಓಡಿದಾಗ ಹುಲಿಯು ಅಲ್ಲಿಂದ ಮರೆಯಾಗಿದೆ. ಈ ಬಗ್ಗೆ ತೋಟದ ಮಾಲೀಕ ಗಣಪತಿ ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೂಂಬಿAಗ್ ನಡೆಸಿದರು. ಹುಲಿಯನ್ನು ಕಂಡ ವಿಚಾರ ತಿಳಿದು ತೋಟದಲ್ಲಿ ಕಾಫಿ ಕೊಯ್ಲು ಮಾಡುತ್ತಿದ್ದ ಕಾರ್ಮಿಕರು ಮಧ್ಯಾಹ್ನದ ನಂತರ ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿದರು.

ವಾಸು ಎ.ಎನ್.