‘ಸAಕ್ರಾAತಿ’ ಎಂದರೆ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು, ಕಬ್ಬಿನ ತುಂಡು, ಬಾಳೆಹಣ್ಣು ಹಂಚುವುದು. ಹೌದು... ನಾವು ಸಂಭ್ರಮದಿAದ ಈ ಹಬ್ಬವನ್ನು ಆಚರಿಸುತ್ತೇವೆ. ಆದರೆ ಇದರ ಮಹತ್ವ ಬಹು ಅದ್ಭುತ, ‘ಮಕರ ಸಂಕ್ರಾAತಿ’ ಹಬ್ಬವು ಎಲ್ಲರೂ ಹಿಗ್ಗಿ ಮಾಡುವ ಸುಗ್ಗಿ ಹಬ್ಬ. ಈ ಹಬ್ಬವನ್ನು ದೇಶಾದ್ಯಂತ ವಿವಿಧ ಹೆಸರಿನೊಂದಿಗೆ ಆಚರಿಸುತ್ತಾರೆ. ಜನವರಿ ೧೫ ರಂದು ಸೂರ್ಯ ದೇವನು ಮಕರ ರಾಶಿಗೆ ಚಲಿಸುತ್ತಾನೆ. ಆದ್ದರಿಂದ ಜನರು ತಮ್ಮ ಪ್ರಾರ್ಥನೆಗಳನ್ನು ಸೂರ್ಯ ದೇವರಿಗೆ ಸಲ್ಲಿಸುತ್ತಾರೆ. ಒಟ್ಟಿನಲ್ಲಿ ಸಂಕ್ರಾAತಿ ಎಂದರೆ ದಿಕ್ಕು ಬದಲಾವಣೆ. ಕರ್ನಾಟಕದಲ್ಲಿ ಎಳ್ಳು, ಬೆಲ್ಲ ವಿಶೇಷ. ಸಂಜೆಯ ವೇಳೆ ಹೆಣ್ಣುಮಕ್ಕಳು ಅಲಂಕಾರ ಮಾಡಿಕೊಂಡು, ನೆರೆಹೊರೆಯ ಮನೆಗಳಿಗೆ ಎಳ್ಳು, ಬೆಲ್ಲ ಹಂಚಿ ಸಂಭ್ರಮಿಸುವರು. ಎಲ್ಲಾ ಹಬ್ಬಗಳಂತೆ ಮನೆಗಳು ಹಸಿರು ಮಾವಿನ ತೋರಣದಿಂದ ಕಂಗೊಳಿಸುತ್ತವೆ. ಮನೆಯ ಮುಂದೆ ಬಣ್ಣಬಣ್ಣದ ರಂಗೋಲಿ ನಗುತ್ತಿರುತ್ತವೆ. ಹಿಂದೆ ಮನೆಯಲ್ಲೇ ತಯಾರಿಸಿದ ಹುರಿದ ಎಳ್ಳು, ಕಡಲೆಕಾಯಿ, ಬೆಲ್ಲ, ಕೊಬ್ಬರಿ... ಹೀಗೆ ಹುರಿದ ಮಿಶ್ರಣ ಮಾಡುತ್ತಿದ್ದರು. ಆದರೀಗ ಮಹಿಳೆಯರ ದುಡಿಮೆ ಹಾಗೂ ಕೆಲಸದ ಒತ್ತಡದಿಂದ ಅಂಗಡಿಯಿAದಲೇ ಸಿದ್ಧಪಡಿಸಿದ ಎಳ್ಳು, ಬೆಲ್ಲ ತಂದು ಪೂಜೆ ಮಾಡಿ ಹಂಚುತ್ತಾರೆ. ಕನ್ನಡದಲ್ಲಿ ಎಳ್ಳು ಬೆಲ್ಲದ ಒಂದು ಜನಪ್ರಿಯ ಗಾದೆ - ‘ಎಳ್ಳು ಬೆಲ್ಲ ತಿಂದು ಒಳ್ಳೇದು ಮಾತಾಡೋಣ’ ಎಂಥ ಚಂದದ ಮಾತಿದು.

ಈ ಹಬ್ಬದ ವಿಶೇಷತೆ ಗಾಳಿಪಟ ಹಾರಿಸುವುದು. ಹಿಂದಿನವರು ಈ ಹಬ್ಬದಂದು ಗಾಳಿಪಟ ಹಾರಿಸಲು ಮೊದಲೇ ತಯಾರಿ ನಡೆಸಿಕೊಳ್ಳುತ್ತಿದ್ದರು. ಇದಕ್ಕಾಗಿ ಸ್ಪರ್ಧೆಗಳನ್ನೂ ಮಾಡುತ್ತಿದ್ದರು. ಮಕ್ಕಳು, ಹಿರಿಯರು ಸೇರಿಕೊಂಡು ವಿವಿಧ ರೀತಿಯ ವರ್ಣರಂಜಿತ ಗಾಳಿಪಟಗಳನ್ನು ಆಕಾಶಕ್ಕೆ ಏರಿಸುತ್ತಿದ್ದರು. ಇದೊಂದು ಆನಂದದಾಯಕ ಚಟುವಟಿಕೆ. ಯಾರು ಆಕಾಶದ ಎತ್ತರಕ್ಕೆ ಹಾರಿಸುತ್ತಾರೋ, ಅವರ ಗಾಳಿಪಟ ಸ್ವರ್ಗವನ್ನು ಕಂಡAತೆ ಕುಣಿಯುತ್ತಿದ್ದರು. ಇದರ ನಡುವೆ ಒಂದಕ್ಕೊAದು ಗಾಳಿಪಟ ಸೇರಿಕೊಂಡು ಮರಕ್ಕೋ ಅಥವಾ ವಿದ್ಯುತ್ ತಂತಿಗೋ ಸಿಕ್ಕಿಹಾಕಿಕೊಂಡರೆ ಅವರಿಗೆ ನಿರಾಸೆಯಾಗುತ್ತಿತ್ತು. ಹೀಗೆ ಈ ದಿನದಂದು ಎಲ್ಲರೂ ಒಟ್ಟುಸೇರಿ ಸಂಭ್ರಮಿಸುತ್ತಿದ್ದರು.

ಇನ್ನೂ ನಮ್ಮ ಕರ್ನಾಟಕದಲ್ಲಿ ಈ ಹಬ್ಬವನ್ನು‘ರೈತರ ಹಬ್ಬ’ ಎಂದೂ ಕರೆಯುತ್ತಾರೆ. ಅಂದು ಸಮೃದ್ಧ ಫಸಲು ನೀಡಿದ ದೇವರಿಗೆ ಕೃತಜ್ಞತೆ ಅರ್ಪಿಸುತ್ತಾರೆ. ಹಸುಗಳನ್ನು ಅಲಂಕರಿಸಿ ಮೆರವಣಿಗೆ ಮಾಡುತ್ತಾರೆ. ಇದರೊಂದಿಗೆ ಕಬ್ಬು ಬೆಳೆದ ರೈತರು ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಬ್ಬಿನ ಜಲ್ಲೆಗಳನ್ನು ಹಾಕಿ ಸಂಕ್ರಾAತಿ ಹಬ್ಬದ ಆಗಮನಕ್ಕೆ ನಾಂದಿ ಹಾಡುತ್ತಾರೆ.

ಇದೇ ಹಬ್ಬವನ್ನು ಭಾರತದೆಲ್ಲೆಡೆ ಆಚರಣೆ ಮಾಡುತ್ತಾರೆ. ತಮಿಳುನಾಡಿನಲ್ಲಿ ನಾಲ್ಕು ದಿನಗಳ ಕಾಲ ಈ ಹಬ್ಬದ ಆಚರಣೆ ಇರುತ್ತದೆ. ಇದನ್ನು ಪೊಂಗಲ್ ಎಂದು ಕರೆಯುತ್ತಾರೆ. ಪೊಂಗಲ್ ಎಂದರೆ ಈ ಹಬ್ಬದ ಸಮಯದಲ್ಲಿ ಹೊಸದಾಗಿ ಕೊಯ್ಲು ಮಾಡಿದ ಅಕ್ಕಿಯೊಂದಿಗೆ ಮಾಡುವ ಸಾಂಪ್ರದಾಯಿಕ ಆಹಾರ. ಕರ್ನಾಟಕದಲ್ಲೂ ಪೊಂಗಲ್ ಆಹಾರವನ್ನು ವಿಶೇಷವಾಗಿ ಮಾಡುತ್ತಾರೆ. ಆಂಧ್ರಪ್ರದೇಶದಲ್ಲೂ ಕೂಡ ಇದು ನಾಲ್ಕು ದಿನಗಳ ಹಬ್ಬ. ಪಂಜಾಬ್‌ನಲ್ಲಿ ಇದನ್ನು ಲೋಹ್ರಿ ಎಂದು ಆಚರಿಸುತ್ತಾರೆ.

ಮಧ್ಯಪ್ರದೇಶದಲ್ಲಿ ಹಬ್ಬದ ದಿನದಂದು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿ, ಸಂತೋಷ ವ್ಯಕ್ತಪಡಿಸುತ್ತಾ ಸಿಹಿ ತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ಒಡಿಶಾದಲ್ಲಿ ಹೊರಗೆ ಬೆಂಕಿ ಹಂಚಿಕೊAಡು ಒಟ್ಟಿಗೆ ಊಟ ಮಾಡುವ ಪದ್ಧತಿಯನ್ನು ಅನುಸರಿಸುತ್ತಾರೆ. ಅಸ್ಸಾಂನಲ್ಲಿ ಈ ಹಬ್ಬವನ್ನು ಭೋಗಾಲಿ ಬಿಹು ಎಂದು ಆಚರಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಇದನ್ನು ಮೂರು ದಿನಗಳ ಕಾಲ ಆಚರಣೆ ಮಾಡುತ್ತಾರೆ.

ಇನ್ನೂ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಇದರ ವೈಶಿಷ್ಟö್ಯತೆ ಹೆಚ್ಚಾಗಿರುತ್ತದೆ. ಈ ಹಬ್ಬ ಚಳಿಗಾಲದಲ್ಲಿ ಆಚರಿಸುವುದರಿಂದ ಎಳ್ಳು ಮತ್ತು ಬೆಲ್ಲ ದೇಹದ ಉಷ್ಣತೆ ಕಾಪಾಡುತ್ತದೆ ಹಾಗೂ ದೇಹಕ್ಕೂ ಒಳ್ಳೆಯದು.

- ಸರಳಾ ಸುಬ್ರಮಣ್ಯ, ಕುಶಾಲನಗರ.