ಕುಶಾಲನಗರ, ಜ. ೧೪: ಸರಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಬಿದ್ದು ಸಿಕ್ಕಿದ ಸಾವಿರಾರು ರೂಪಾಯಿ ನಗದು ಇದ್ದ ಪರ್ಸ್ನ್ನು ಇಬ್ಬರು ಯುವತಿಯರು ಸಂಬAಧಿಸಿದವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಕುಶಾಲನಗರ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮೈಸೂರಿನಿಂದ ಕುಶಾಲನಗರಕ್ಕೆ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ ಪ್ರತಿಮಾ ಮತ್ತು ಲಕ್ಷಿತಾ ಎಂಬವರಿಗೆ ಕುಶಾಲನಗರದಲ್ಲಿ ಬಸ್‌ನಲ್ಲಿ ಪರ್ಸೊಂದು ಬಿದ್ದು ಸಿಕ್ಕಿದೆ.

ಅದನ್ನು ತೆಗೆದು ನೋಡಿದಾಗ ಅದರಲ್ಲಿ ೩೦ ಸಾವಿರ ರೂಪಾಯಿ ನಗದು ಕಂಡು ಬಂದಿದ್ದು, ಲಕ್ಷಿತಾ ಕುಶಾಲನಗರ ಬಸ್ ನಿಲ್ದಾಣದಿಂದ ತನ್ನ ತಂದೆ ಪತ್ರಕರ್ತರಾದ ನಂಜುAಡಸ್ವಾಮಿ ಅವರನ್ನು ಸಂಪರ್ಕಿಸಿ ಬಸ್ಸು ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದಾರೆ. ಬಳಿಕ ಕುಶಾಲನಗರ ಬಸ್ ನಿಲ್ದಾಣದಲ್ಲಿ ಬಸ್ಸೊಂದರಲ್ಲಿ ಹಣ ಕಳೆದುಕೊಂಡು ಹುಡುಕಾಡುತ್ತಿದ್ದ ಟಿಬೇಟಿಯನ್ ವ್ಯಕ್ತಿಯನ್ನು ಪತ್ತೆ ಹಚ್ಚಿ, ಪರ್ಸನ್ನು ಹಿಂತಿರುಗಿಸಿದ್ದಾರೆ.

ಪ್ರತಿಮಾ ಸೋಮವಾರಪೇಟೆಯ ತಾಕೇರಿ ನಿವಾಸಿ ಗುತ್ತಿಗೆದಾರ ಅರುಣ್ ಅವರ ಪತ್ನಿಯಾಗಿದ್ದು, ಮೈಸೂರಿನ ರೇಡಿಯಂಟ್ ಆಸ್ಪತ್ರೆಯಲ್ಲಿ ಶುಶ್ರೂಷಕಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಕ್ಷಿತಾ ಮೈಸೂರಿನ ವಿದ್ಯಾವರ್ಧಕ ಕಾಲೇಜಿನ ಕಾನೂನು ವಿದ್ಯಾರ್ಥಿನಿಯಾಗಿದ್ದು ನಂಜುAಡಸ್ವಾಮಿ ಮತ್ತು ಪುರಸಭೆ ಸದಸ್ಯೆ ಜಯಲಕ್ಷö್ಮಮ್ಮ ದಂಪತಿ ಪುತ್ರಿಯಾಗಿದ್ದಾರೆ. - ಸಿಂಚು