ಮಡಿಕೇರಿ, ಜ. ೧೩: ಮಡಿಕೇರಿ ನಗರದ ಕಾವೇರಿ ಬಡಾವಣೆ, ವಿಜಯನಗರ ಬಡಾವಣೆ, ಡೈರಿ ಫಾರಂ, ಕನ್ನಿಕಾ ಬಡಾವಣೆ, ಟಿ.ಜಾನ್ ಬಡಾವಣೆ, ಪ್ರಕೃತಿ ಬಡಾವಣೆಗಳನ್ನೊಳಗೊಂಡ ಶ್ರೀ ವಿಜಯ ವಿನಾಯಕ ಗೌಡ ಒಕ್ಕೂಟದ ೯ನೇ ವರ್ಷದ ಸಂತೋಷ ಕೂಟ ತಾ.೧೫ರಂದು ನಡೆಯಲಿದೆ.
ಕೊಡಗು ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಕೂಟದ ಅಧ್ಯಕ್ಷ ಕುರಿಕಡ ಆನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಉದ್ಘಾಟನೆ ಮಾಡುವರು. ಮುಖ್ಯ ಅತಿಥಿಗಳಾಗಿ ಸೋಮವಾರಪೇಟೆ ತಾಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಕುದುಕುಳಿ ಮಿಲನ ಭರತ್ ಪಾಲ್ಗೊಳ್ಳುವರು. ಒಕ್ಕೂಟದ ಸದಸ್ಯರು ಹಾಗೂ ಮಕ್ಕಳಿಗೆ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಕಾರ್ಯದರ್ಶಿ ಕಾನೆಹಿತ್ಲು ಮೊಣ್ಣಪ್ಪ ತಿಳಿಸಿದ್ದಾರೆ.