ಮುಳ್ಳೂರು, ಜ. ೧೨: ಕೊಡ್ಲಿಪೇಟೆ ಸಮೀಪದ ಹ್ಯಾಂಡ್‌ಪೋಸ್ಟ್ನಲ್ಲಿರುವ ಮಜ್ಲಿಸುನ್ನೂರ್ ೧೦ನೇ ವರ್ಷದ ವಾರ್ಷಿಕೋತ್ಸವ ಹಾಗೂ ಏಕದಿನ ಧಾರ್ಮಿಕ ಪ್ರವಚನ ಕಾರ್ಯಕ್ರಮ ತಾ. ೧೪ ಮತ್ತು ೧೫ ರಂದು ಮಸ್ಜಿದುನ್ನೂರ್ ಶಂಸುಲ್ ಉಲಮಾ ಮೈದಾನದಲ್ಲಿ ನಡೆಯಲಿದೆ ಎಂದು ಕೊಡ್ಲಿಪೇಟೆ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆ ಅಧ್ಯಕ್ಷ ಝಹೀರ್ ನಿಝಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಾ. ೧೪ ರಂದು ಸಂಜೆ ೭-೩೦ಕ್ಕೆ ಪ್ರಥಮ ದಿನದ ಕಾರ್ಯಕ್ರಮ ನಡೆಯಲಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖನಾ ಎಂ.ಎA. ಅಬ್ದುಲ್ಲಾ ಫೈಝಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಕೊಡಗು ಜಿಲ್ಲಾ ಖಾಝಿಗಳಾದ ಸಯ್ಯಿದ್ ಮಹಮ್ಮದ್ ಕೋಯ ಜಮುಲುಲೈಲಿ ತಂಙಳ್ ಉಪಸ್ಥಿತರಿದ್ದು ಕೊಡ್ಲಿಪೇಟೆ ಎಸ್‌ವೈಎಸ್ ಶಾಖಾಧ್ಯಕ್ಷ ಕೆ.ಎ. ಇಬ್ರಾಹಿಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ತಾ.೧೫ ರಂದು ನಡೆಯಲಿರುವ ಸಮಾರೋಪ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಹ್ಯಾಂಡ್ ಪೋಸ್ಟ್ನಲ್ಲಿರುವ ಮಸ್ಜಿದುನ್ನೂರ್ ಖತೀಬರಾದ ಉಸ್ತಾದ್ ಹಾರಿಸ್ ಬಾಖವಿ ಉದ್ಘಾಟಿಸಲಿದ್ದಾರೆ.

ಕೇರಳದ ಪತ್ತನಾಪುರಂನ ಉಸ್ತಾದ್ ಹಾಫಿಲ್ ಸಿರಾಜುದ್ದೀನ್ ಅಲ್ ಖಾಸಿಮಿ ಧಾರ್ಮಿಕ ಪ್ರವಚನ ನೀಡುತ್ತಾರೆ ಎಂದರು. ಧಾರ್ಮಿಕ ಕಾರ್ಯ ಕ್ರಮದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಮತ್ತು ಎಸ್‌ವೈಎಸ್ ಜಿಲ್ಲಾ ನಾಯಕರು, ಸಮಾಜ ಸೇವಕರು, ಧಾರ್ಮಿಕ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಎಸ್‌ಕೆಎಸ್‌ಎಸ್‌ಎಫ್ ಗೌರವಾಧ್ಯಕ್ಷ ಅಬೂಬಕ್ಕರ್ ಸಿದ್ದೀಖ್ ಹಾಜಿ, ಖಜಾಂಚಿ ಜಿ.ಎ. ಅಬ್ದುಲ್ ರಹಮಾನ್, ಎಸ್‌ಕೆಎಸ್‌ಎಸ್‌ಎಫ್ ಕಾರ್ಯಕಾರಿ ಕಾರ್ಯದರ್ಶಿ ಹೆಚ್.ಎಸ್. ತಫೀಕ್, ಜಂಟಿ ಕಾರ್ಯದರ್ಶಿ ವಿ.ಎಂ. ಅಶ್ಫಾಕ್ ಹಾಜರಿದ್ದರು.