ಸೋಮವಾರಪೇಟೆ, ಜ. ೧೨: ತಾಲೂಕಿನ ಎಡದಂಟೆ ಸಮೀಪದ ಗೊದ್ದು ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಹಾಗೂ ದೊಡ್ಡಯ್ಯನ ದೇವಸ್ಥಾನದ ೩೫೩ನೇ ಜಾತ್ರಾ ಮಹೋತ್ಸವ ತಾ. ೧೫ ಮತ್ತು ೧೬ರಂದು ನಡೆಯಲಿದೆ.

ತಾ. ೧೫ರಂದು ಶ್ರೀ ಕುಮಾರಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ತಾ. ೧೬ರಂದು ದೊಡ್ಡಯ್ಯನ ಜಾತ್ರೆ ಬೆಳಿಗ್ಗೆ ೬ರಿಂದ ಸಂಜೆ ೬ರ ವರೆಗೆ ನಡೆಯಲಿದೆ. ಜಾತ್ರಾ ಮಹೋತ್ಸವದಲ್ಲಿ ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿಯ ಗ್ರಾಮಗಳೊಂದಿಗೆ ಸಕಲೇಶಪುರ ತಾಲೂಕಿನ ಗೊದ್ದು, ತಂಬೈಲು, ಹುಡ್ರಮನೆ, ಕೊಂಗಳ್ಳಿ, ತಿಪ್ಪಳ್ಳಿ, ದೊಡ್ಡಗದ್ದೆ, ಮಟ್ಟದ ಗದ್ದೆ, ಹೆಬ್ಬಯಿಲು, ಕೆರೆಹಳ್ಳಿ, ಬ್ಯಾಗಡಹಳ್ಳಿ, ವಣಗೂರು, ಕೂಡುರಸ್ತೆ ಸೇರಿದಂತೆ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಲಿದ್ದಾರೆ.

ಹೆಗ್ಗಡಳ್ಳಿ ಮಠದ ಶ್ರೀ ಷಡ್ಭಾವರಹಿತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಾಸನದ ಶ್ರೀ ಶಂಭುನಾಥ ಸ್ವಾಮೀಜಿ ಹಾಗೂ ಹೆಗ್ಗಡಳ್ಳಿ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಇಂದೂಶೇಖರ್ ತಿಳಿಸಿದ್ದಾರೆ.