ಮಡಿಕೇರಿ, ಜ. ೧೨: ನಂ. ೨೭೬೮ನೇ ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ನಾಪಂಡ ರ್ಯಾಲಿ ಮಾದಯ್ಯ ಮತ್ತು ಉಪಾಧ್ಯಕ್ಷರಾಗಿ ಕೊಪ್ಪಡ ರಾಜ ತಿಮ್ಮಯ್ಯ ನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ಕುಂಜಿಲನ ಎಸ್. ಪ್ರಕಾಶ್, ಪೊಡನೋಳಂಡ ಮಧು ಪೂವಣ್ಣ, ತೋರೆರ ಯು. ಸತೀಶ್, ಕೊಡಗನ ಪ್ರತಾಪ್, ಪೈತಡಿಯಂಡ ಧರ್ಮರಾಜ್, ಬೊಳ್ಳಾರ್ಪಂಡ ಮಾದಪ್ಪ, ಕೀತಿಯಂಡ ಪ್ರತಾಪ್ ಕಾರ್ಯಪ್ಪ, ಅಯ್ಯಂಗಡೇರ ಜಾನಕಿ, ಕುಂಚೆಟ್ಟೀರ ಶಿಲ್ಪಾ ತಂಗಮ್ಮ, ಹೆಚ್.ಎಸ್. ಕೃಷ್ಣ, ಕೆ.ಡಿ. ಗೌರಮ್ಮ ಆಯ್ಕೆಯಾಗಿದ್ದಾರೆ.