ಮಡಿಕೇರಿ, ಜ. ೧೧: ಕೊಡಗಿನ ಹಲವು ದುರಂತ ಕಥೆಗಳ ಪೈಕಿ ಇದು ಬಹುಶಃ ನಿಗೂಢತೆಯನ್ನು ಒಳಗೊಂಡ ವಿಚಾರ. ಇದೊಂದು ನದಿ.. ಹೆಸರು ಬರಪೊಳೆ. ಈ ನದಿಗೆ ಕೂಟಿಯಾಲ ಎಂಬ ಸ್ಥಳದಲ್ಲಿ ಸೇತುವೆ ನಿರ್ಮಿಸಿ ಎರಡು ಬದಿಗೆ ಬಿಟ್ಟಂಗಾಲ ಬಿರುನಾಣಿ ನಡುವೆ ಸಂಪರ್ಕ ರಸ್ತೆ ಕಲ್ಪಿಸಿದರೆ ಕೊಡಗಿನ ಗಡಿ ಪ್ರದೇಶ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಆಗಿನ ತಾಲೂಕು ಕೇಂದ್ರವಾಗಿದ್ದ ವೀರಾಜಪೇಟೆಗೆ.. ಅಲ್ಲಿಂದ ಜಿಲ್ಲಾ ಕೇಂದ್ರ ಮಡಿಕೇರಿ ತಲುಪಲು ಸುಮಾರು ೨೦ ರಿಂದ ೨೫ ಕಿ.ಮೀ.ಗಳ ಅಂತರ ಕಡಿಮೆ. ಸರಿ ಇದೊಂದು ಯೋಜನೆಯ ಚಿಂತನೆ ಮೂಡಿದ್ದು, ೧೯೯೬ರಲ್ಲಿ ಯಂ.ಸಿ. ನಾಣಯ್ಯ ಅವರ ಆಸಕ್ತಿಯ ಫಲವಾಗಿ ನಬಾರ್ಡ್ ನೆರವಿನ ರೂ. ೬೯.೬೫ ಲಕ್ಷ ವೆಚ್ಚದಲ್ಲಿ ಯೋಜನೆಗೆ ಹಸಿರು ನಿಶಾನೆ ಸಿಕ್ಕಿತ್ತು. ಸೇತುವೆ ಕೆಲಸವೂ ಆರಂಭಗೊAಡು ಬೇತ್ರಿಯಲ್ಲಿರುವ ಸೇತುವೆ, ಮಾದಾಪುರ ಹಟ್ಟಿಹೊಳೆಯ ಸೇತುವೆ ಇರುವ ರೀತಿಯಲ್ಲೇ ಬೃಹತ್ ಸೇತುವೆ ಕಟ್ಟಲಾಯಿತು. ಸೇತುವೆ ಕಾಮಗಾರಿ ಸುಮಾರು ೨೦೦೦ನೇ ಇಸವಿಯಲ್ಲೇ ಪೂರ್ಣಗೊಂಡಿದೆ. ಇದೀಗ ಈ ಯೋಜನೆಗೆ ಸರಿ ಸುಮಾರು ೨೮ರ ಹರಯ.. ಸೇತುವೆ ಸುಭದ್ರವಾಗಿದೆ. ಆದರೆ..?

ಇದು ಯಾರಿಗೂ.. ಯಾವುದಕ್ಕೂ ಇನ್ನೂ ಉಪಯೋಗಕ್ಕೆ ಮಾತ್ರ ಬಂದಿಲ್ಲ. ಕಾರಣಗಳು ಹಲವು ಇವೆ. ಸೇತುವೆಗೆ ಒಂದೆಡೆಯಿAದ ಸಂಪರ್ಕ ಕಲ್ಪಿಸಬೇಕಾಗಿದ್ದ ರಸ್ತೆಯ ಸ್ಥಳದ ಸುಮಾರು ೬೦೦ ಮೀಟರ್ ಪ್ರದೇಶ (ಮತ್ತೊಮ್ಮೆ ಗಮನಿಸಿ ಕೇವಲ ೬೦೦ ಮೀಟರ್ ಮಾತ್ರ) ರಕ್ಷಿತಾರಣ್ಯದೊಳಗೆ ಹಾದು ಹೋಗಲಿದೆ ಎಂಬುದು ಈ ಸೇತುವೆ ಈಗಲೂ ಜನತೆಗೆ ಲಭ್ಯವಾಗ ದಿರಲು ಕಾರಣ. ರಕ್ಷಿತಾರಣ್ಯದ ಕಾರಣ ವಿದ್ದರಿಂದ ಇದನ್ನು ಕೆಲವು ಪರಿಸರ ವಾದಿಗಳು ಪ್ರಶ್ನಿಸಿ ಕಾನೂನು ಬದ್ಧವಾದ ನಿಯಮ ಪಾಲಿಸಿಲ್ಲ ಎಂಬುದಾಗಿ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೂಲಕ ಪ್ರಶ್ನಿಸಲ್ಪಟ್ಟು ತಡೆಯುಂಟಾಯಿತು. ಸ್ಥಳಕ್ಕೆ ಸೆಂಟ್ರಲ್ ಎಂಪವರ್ ಕಮಿಟಿ (ಸಿ.ಇ.ಸಿ) ತಂಡವೂ ಭೇಟಿ ನೀಡಿ ಪರಿಶೀಲಿಸಿ ತೆರಳಿದ್ದೂ ಒಂದು ಇತಿಹಾಸವಷ್ಟೇ...

ರಕ್ಷಿತಾರಣ್ಯ ಕಾರಣದಿಂದಾಗಿ ಯೋಜನೆ ತಡೆಹಿಡಿಯಲ್ಪಟ್ಟಿತು. ಆದರೆ ಸೂಕ್ತ ರೀತಿಯಲ್ಲಿ ನಿಯಮ ಪಾಲಿಸಿದ್ದಲ್ಲಿ ಅದೆಷ್ಟೋ ವರ್ಷದ ಹಿಂದೆ ಈ ಸೇತುವೆ-ರಸ್ತೆ ಜನೋಪಯೋಗಕ್ಕೆ ಬರುತ್ತಿತ್ತು ಎಂಬುದು ಜನಾಭಿಪ್ರಾಯ. ಆದರೆ ಇಚ್ಚಾಶಕ್ತಿಯ ಕೊರತೆ- ನಿರ್ಲಕ್ಷö್ಯ ಧೋರಣೆ ಇಲ್ಲಿ ಮೇಳೈಸಿ ದ್ದರಿಂದ ೧೯೯೬ರ ಯೋಜನೆ ೨೦೨೪ನೇ ಇಸವಿ ಬಂದರೂ ಪ್ರಯೋಜನಕ್ಕೆ ಬಂದಿಲ್ಲ.

ಸೇತುವೆ-ರಸ್ತೆ ಜನೋಪಯೋಗಕ್ಕೆ ಬರುತ್ತಿತ್ತು ಎಂಬುದು ಜನಾಭಿಪ್ರಾಯ. ಆದರೆ ಇಚ್ಚಾಶಕ್ತಿಯ ಕೊರತೆ- ನಿರ್ಲಕ್ಷö್ಯ ಧೋರಣೆ ಇಲ್ಲಿ ಮೇಳೈಸಿ ದ್ದರಿಂದ ೧೯೯೬ರ ಯೋಜನೆ ೨೦೨೪ನೇ ಇಸವಿ ಬಂದರೂ ಪ್ರಯೋಜನಕ್ಕೆ ಬಂದಿಲ್ಲ.