ಕೂಡಿಗೆ, ಜ. ೧೧: ಕೂಡಿಗೆಯ ಕೃಷಿ ಕ್ಷೇತ್ರದಲ್ಲಿ ಕೃಷಿಗೆ ಸಂಬAಧಿಸಿ ದಂತೆ ಎಂಟು ಇಲಾಖೆಗಳು ಇವೆ. ಇವು ರಾಜ್ಯ ಸರ್ಕಾರದ ಮತ್ತು ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಹೆಸರುವಾಸಿಯಾಗಿದ್ದ ಕೂಡಿಗೆ ಕೃಷಿ ಕ್ಷೇತ್ರವು ೧೯೪೨ ರಲ್ಲಿ ಪ್ರಾರಂಭವಾಗಿದ್ದು, ಅಂದಿನ ಕೊಡಗು ಸರ್ಕಾರದಲ್ಲಿ ತನ್ನದೇ ಆದ ಯೋಜನೆಗಳ ಅಡಿಯಲ್ಲಿ ಪ್ರಗತಿ ಹೊಂದಿ ಜಿಲ್ಲೆಯ ಹಾಗೂ ರಾಜ್ಯ ಮತ್ತು ಅಂತರರಾಜ್ಯ ರೈತರಿಗೆ ತರಬೇತಿಯನ್ನು ಕೂಡ ಇಲಾಖೆ ಮೂಲಕ ನೀಡಲಾಗುತ್ತಿತ್ತು.

ಆದರೆ ಇದೀಗ ಈ ೩೦೪೦ ಎಕರೆ ವಿಸ್ತೀರ್ಣದಲ್ಲಿನ ಕೃಷಿ ಕ್ಷೇತ್ರವು ಬೇರೆ ಬೇರೆ ಇಲಾಖೆಗಳಿಗೆ ಹಾಗೂ ವಿವಿಧ ಹೊಸ ವಿದ್ಯಾಸಂಸ್ಥೆಗಳಿಗೆ ಜಾಗವನ್ನು ನೀಡುತ್ತಾ ಇಲಾಖೆಯ ಜಾಗವು ಹಂಚಿಹೋಗಿದೆ.

ಇದರ ಜೊತೆಗೆ ಬಾಕಿ ಇದ್ದ ೧೬೦ ಎಕರೆಗಳಷ್ಟು ಪ್ರದೇಶದಲ್ಲಿ ಮಿನಿ ವಿಮಾನ ನಿಲ್ದಾಣದ ಯೋಜನೆಯು ಪ್ರಗತಿಯಲ್ಲಿದೆ. ಅನೇಕ ಬಾರಿ ಸಂಬAಧಿಸಿದ ವಿಮಾನಯಾನ ಸಂಸ್ಥೆಗಳ ಉನ್ನತ ಮಟ್ಟದ ಅಧಿಕಾರಿ ತಂಡದವರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಆಗಿದ್ದ ಕೊಡಗಿನ ಕುಶಾಲನ ಗರದ ದಿವಂಗತ ಆರ್. ಗುಂಡೂರಾವ್ ಅವರ ನೇತೃತ್ವದಲ್ಲಿ ಪ್ರಥಮ ಬಾರಿಗೆ ರಾಜ್ಯದಲ್ಲಿ ಕ್ರೀಡಾ ಶಾಲೆಯನ್ನು ತೆರೆಯಲು ಕೃಷಿ ಇಲಾಖೆಯ ೩೦ ಎಕರೆಗಳಷ್ಟು ಪ್ರದೇಶವನ್ನು ಉಪಯೋಗಿಸಿ ಕೊಳ್ಳಲಾಗಿತ್ತು. ಇದರ ಜೊತೆಯಲ್ಲಿ ರೈತರಿಗೆ ಉಪಯುಕ್ತವಾಗುವಂತಹ ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ, ರಾಜ್ಯದಲ್ಲಿ ಪ್ರಥಮವಾಗಿ ಪ್ರಾರಂಭಗೊAಡ ಕೂಡಿಗೆ ಡೈರಿ, ರೈತ ಸಂಪರ್ಕ ತರಬೇತಿ ಕೇಂದ್ರ, ಗ್ರಾಮ ಸೇವಕರ ತರಬೇತಿ ಕೇಂದ್ರ ಹಾಗೂ ವಿವಿಧ ವಿದ್ಯಾಸಂಸ್ಥೆಗಳ ವಸತಿ ನಿಲಯಗಳು ಸೇರಿದಂತೆ ಮಣ್ಣು ಪರೀಕ್ಷಾ ಕೇಂದ್ರ, ಮತ್ತು ಮಳೆ ನೀರಿನ ಮಾಹಿತಿ ಕೇಂದ್ರಗಳು ಈ ಕ್ಷೇತ್ರದಲ್ಲಿ ಆರಂಭಗೊAಡವು.

ಕಳೆದ ೧೨ ವರ್ಷಗಳಿಂದ ಕೃಷಿ ಇಲಾಖೆಯು ೩,೦೪೦ ಎಕರೆಗಳಷ್ಟು ಪ್ರದೇಶದಲ್ಲಿ ವಿವಿಧ ಇಲಾಖೆಗಳಿಗೆ ಮತ್ತು ವಿದ್ಯಾಸಂಸ್ಥೆಗಳಿಗೆ ಜಾಗವನ್ನು ನೀಡಿ ಇದೀಗ ೫೦೦ ಎಕರೆ ಪ್ರದೇಶದಲ್ಲಿ ಆಡಳಿತ ಕಚೇರಿ, ಅಧಿಕಾರಿಗಳ ವಸತಿ ಗೃಹಗಳು, ರೈತರಿಗೆ ತರಬೇತಿ ನೀಡುವ ಕೇಂದ್ರ, ರೈತರ ವಸತಿ ನಿಲಯ, ಮಹಿಳಾ ರೈತರ ತರಬೇತಿ, ವಸತಿ ನಿಲಯ, ಕೋಳಿ ಸಾಕಾಣಿಕೆ ಕೇಂದ್ರ, ಹಂದಿ ಸಾಕಾಣಿಕೆ ಕೇಂದ್ರ, ಪಶು ಸಂವರ್ಧನ ಕೇಂದ್ರ, ಮಣ್ಣು ಪರೀಕ್ಷೆ ವಿಜ್ಞಾನ ವಿಭಾಗದ ಕೇಂದ್ರಗಳನ್ನು ಒಳಗೊಂಡಿದೆ.

ಇದಿಷ್ಟು ಜಾಗವಿದ್ದರೂ ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಿದ್ದ ಕೂಡಿಗೆ ಕೃಷಿ ಕ್ಷೇತ್ರ, ರಾಜ್ಯಕ್ಕೆ ಬೇಕಾಗುವ ಭತ್ತದ ಬಿತ್ತನೆ ಬೀಜಗಳನ್ನು ನೀಡುತ್ತಿದ್ದ ಈ ಕೇಂದ್ರ ಇದೀಗ ಅಧಿಕಾರಿಗಳ ಕೊರತೆಯಿಂದಾಗಿ ಬಳಲುತ್ತಿದೆ. ಸರಕಾರವು ಇದ್ದ ಕೃಷಿ ಜಾಗವನ್ನು ವಿವಿಧ ಇಲಾಖೆಗಳಿಗೆ ಹಂಚುತ್ತಿದ್ದು, ಕೃಷಿ ಇಲಾಖೆ ಮುಚ್ಚು ವಂತಹ ಹಂತವನ್ನು ತಲುಪುತ್ತಿದೆ.

ರಾಜ್ಯ ಸರಕಾರಗಳು ಕೃಷಿಗೆ ಲಕ್ಷಗಟ್ಟಲೆ ಹಣವನ್ನು ವಿನಿಯೋಗಿಸುತ್ತಿವೆ ಎಂದು ತಮ್ಮ ತಮ್ಮ ಅಧಿಕಾರದ ಅವಧಿಯಲ್ಲಿ ಹೇಳುತ್ತಾ ಬಂದಿವೆಯಾದರೂ ಕೊಡಗು ಜಿಲ್ಲೆಯಲ್ಲಿ ಕೃಷಿ ಇಲಾಖೆಗೆ ಸೇರಿದ ಭೂಮಿಯನ್ನು ಉಳಿಸುವುದರಲ್ಲಿ ಗಮನಹರಿಸದೇ ಇರುವುದು ಎದ್ದು ಕಾಣುತ್ತಿದೆ. ಜಿಲ್ಲೆಯ ರೈತರಿಗೆ ತರಬೇತಿ ನೀಡಲು ವ್ಯವಸ್ಥಿತವಾದ ಕಟ್ಟಡ ಇದ್ದರೂ ಸಹ ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆ ನೀಡಲು ಕೃಷಿ ಭೂಮಿಯೇ ಇಲ್ಲದಂತಾಗಿದೆ. ರೈತರಿಗೆ ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ, ಗುಡಿ ಕೈಗಾರಿಕೆ ಸೇರಿದಂತೆ ಅನೇಕ ತರಬೇತಿಗಳನ್ನು ನೀಡುತ್ತಿದ್ದರೂ ಇವರುಗಳನ್ನು ಬೇರೆಡೆಗೆ ಕರೆದುಕೊಂಡು ಹೋಗಿ ಮಾಹಿತಿಯನ್ನು ನೀಡುವಂತಹ ಪರಿಸ್ಥಿತಿ ಬಂದಿದೆ.

ಹೆಸರಿಗೆ ಮಾತ್ರ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಎಂಬ ನಾಮಫಲಕ ಅಳವಡಿಸಲಾಗಿದ್ದು ಇರಬೇಕಾದ ಸೌಕರ್ಯಗಳು ಇಲ್ಲದಾಗಿವೆ. ಕೃಷಿ ಕ್ಷೇತ್ರದ ಆವರಣದಲ್ಲಿರುವ ತೋಟಗಾರಿಕೆ, ರೇಷ್ಮೆ ಇಲಾಖೆಯ ಕೇಂದ್ರಗಳು ಮುಚ್ಚುವ ಹಂತವನ್ನು ತಲುಪಿವೆ. ಈ ಕೇಂದ್ರಗಳಿಗೆ ನಿಗದಿಪಡಿಸಿದ ಜಾಗವನ್ನು ಅವರವರ ಸುಪರ್ದಿಗೆ ಇಟ್ಟುಕೊಳ್ಳದೆ ಬೇಕಾಗುವಂತಹ ಅಧಿಕಾರಿ ವರ್ಗದವರನ್ನು ನೇಮಕ ಮಾಡದೆ ಬೇರೆ ಬೇರೆ ಇಲಾಖೆಗಳಿಗೆ ಜಾಗವನ್ನು ನೀಡಲಾಗಿದೆ.

ರೈತರಿಗೆ ತರಬೇತಿ ನೀಡಲು ಕಟ್ಟಡಗಳು ಇವೆ. ಆದರೆ ತರಬೇತಿಯನ್ನು ನೀಡಲು ಬೇಕಾಗುವ ಅಧಿಕಾರಿ ನೇಮಕ ಮಾತ್ರ ಇಲ್ಲದಾಗಿದೆ. ಇದ್ದರೂ ಒಂದೊAದು ಇಲಾಖೆಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆಯು ಭರ್ತಿಯಾಗದೆ ಒಬ್ಬರೇ ಎರಡೂ-ಮೂರು ಸಹಾಯಕ ಹುದ್ದೆಗಳ ಜವಾಬ್ದಾರಿ ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚು ರೈತರು ಇದ್ದು, ಐದು ತಾಲೂಕುಗಳ ರೈತರಿಗೆ ಸೌಕರ್ಯ ನೀಡಬೇಕಾದ ಈ ಕೇಂದ್ರ ಅವನತಿಯ ಹಾದಿಯಲ್ಲಿದೆ. ರೈತರಿಗೆ ಯಾವುದೇ ರೀತಿಯಲ್ಲಿಯೂ ಉಪಯೋಗವಾಗದಂತಹ ಸ್ಥಿತಿಯನ್ನು ತಲುಪಿದೆ. ಇಲ್ಲಿನ ಕಟ್ಟಡಗಳು ನಿರ್ವಹಣೆ ಇಲ್ಲದೆ ಬೀಳುವ ಹಂತದಲ್ಲಿವೆ.

ಈಗಿನ ೫೦೦ ಎಕರೆಗಳಷ್ಟು ಪ್ರದೇಶದ ಜಾಗದಲ್ಲಿ ಕೊಡಗು ಸೈನಿಕ ಶಾಲೆಗೆ ೧೫೦ ಎಕರೆಗಳಷ್ಟು ಜಾಗವನ್ನು ನೀಡಲಾಗಿದೆ. ಉಳಿದ ಜಾಗದಲ್ಲಿ ಮಿನಿ ವಿಮಾನ ನಿಲ್ದಾಣವನ್ನು ಪ್ರಾರಂಭ ಮಾಡಿದರೆ ಕೃಷಿ ಇಲಾಖೆಯು ಸಂಪೂರ್ಣವಾಗಿ ಮುಚ್ಚುವ ಮೂಲಕ ಜಿಲ್ಲೆಯ ರೈತರಿಗೆ ಕೃಷಿ ತರಬೇತಿಯೇ ಇಲ್ಲದಂತಾಗುತ್ತದೆ.

ಕೃಷಿ ಕ್ಷೇತ್ರವನ್ನು ಸರ್ಕಾರ ನಿರ್ಲಕ್ಷಿಸದೆ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಈ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಿ ರೈತರಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಮುಂದಾಗ ಬೇಕು. ಅಧಿಕಾರಿ ವರ್ಗದವರನ್ನು ನೇಮಕ ಮಾಡಿ ಇಲಾಖೆಯಿಂದ ಜಿಲ್ಲೆಯ ರೈತರಿಗೆ ಉಪಯುಕ್ತ ವಾಗುವಂತೆ ಕ್ರಮ ಕೈಗೊಳ್ಳ ಬೇಕಿದೆ.

- ಕೆ.ಕೆ. ನಾಗರಾಜಶೆಟ್ಟಿ.