ನಾಪೋಕ್ಲು, ಜ. ೧೧: ಕೊಡಗಿನ ಮಹಿಳೆಯೊಬ್ಬರು ರಾಮನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಕುಶಾಲನಗರದ ನಿವಾಸಿ ಬಿ.ಎಂ. ಸುಬ್ಬಯ್ಯ ಎಂಬವರು ಅವರ ಕಾರಿನಲ್ಲಿ ಪತ್ನಿ ನೇತ್ರಾವತಿ, ಪುತ್ರ ದಿವಿತ್ ಹಾಗೂ ಅಕ್ಕ ಮೂರ್ನಾಡು ನಿವಾಸಿ ಜಯಂತಿಯೊAದಿಗೆ ಒಟ್ಟಿಗೆ ಬೆಂಗಳೂರಿನಿAದ ಕುಶಾಲನಗರಕ್ಕೆ ಬರುವ ಸಂದರ್ಭ ರಾಮನಗರದಲ್ಲಿ ಕಾರು ಮತ್ತು ಜೀಪಿನ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸುಬ್ಬಯ್ಯ ಅವರ ಪತ್ನಿ ನೇತ್ರಾವತಿ (೨೯) ತೀವ್ರತರದ ಗಾಯದಿಂದಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುಬ್ಬಯ್ಯ (೩೮), ಮಗ ಮೂರೂವರೆ ವರ್ಷದ ದಿವಿತ್ ಮತ್ತು ಸುಬ್ಬಯ್ಯ ಅವರ ಅಕ್ಕ ಜಯಂತಿ (೪೦) ಅವರುಗಳಿಗೆ ಗಾಯಗಳಾಗಿದ್ದು, ಕೆಂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
(ಮೊದಲ ಪುಟದಿಂದ) ಈ ಬಗ್ಗೆ ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ವಾಹನಗಳೆರಡು ಜಖಂಗೊAಡಿದ್ದು, ಮೃತರಾಗಿರುವ ನೇತ್ರಾವತಿ (೨೯) ಅವರ ಅಂತ್ಯಕ್ರಿಯೆ ಬುಧವಾರ ಸುಬ್ಬಯ್ಯ ಅವರ ತೋಟದ ಮನೆ ಮಾಯಮುಡಿಯಲ್ಲಿ ನೆರವೇರಿತು.
- ದುಗ್ಗಳ ಸದಾನಂದ.