ಮಡಿಕೇರಿ, ನ. ೧೧ : ಜನವರಿ ೬ ಮತ್ತು ೭ ರಂದು ಬೆಂಗಳೂರಿನಲ್ಲಿ ನಡೆದ ತೃತೀಯ ವಿಪ್ರ ಮಹಿಳಾ ಸಮ್ಮೇಳನದಲ್ಲಿ ಕೊಡಗಿನ ೨೦ ಮಹಿಳೆಯರು ಭಾಗಿಯಾಗಿದ್ದರು. ಈ ಸಂದರ್ಭ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಸವಿತಾ ಭಟ್ ಕೋಕಳಾ ಅವರಿಗೆ ‘ಧೀ ಶಕ್ತಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಆಯೋಜಿತ ಬೃಹತ್ ತೃತೀಯ ವಿಪ್ರ ಮಹಿಳಾ ಸಮ್ಮೇಳನವು ಬೆಂಗಳೂರಿನ ಶೃಂಗೇರಿ ಮಠದ ಆವರಣದಲ್ಲಿ ವಿಜೃಂಭಣೆಯಿAದ ಜರುಗಿತು. ಮಹಾಸಭಾದ ಅಧ್ಯಕ್ಷ ಅಶೋಕ ಹಾರನಳ್ಳಿ ಹಾಗೂ ರಾಜ್ಯ ವಿಪ್ರ ಮಹಿಳಾ ಸಂಚಾಲಕಿ ಶುಭಮಂಗಳ ಸುನಿಲ್ ಅವರ ನೇತೃತ್ವದಲ್ಲಿ ಸಮ್ಮೇಳನ ನಡೆಯಿತು. ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಮಹಿಳಾ ಸಂಚಾಲಕರು ಹಾಗೂ ಕಾರ್ಯಕರ್ತರು ಉತ್ಸಾಹದಿಂದ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದುದು ವಿಶೇಷವಾಗಿತ್ತು.
ಉಭಯ ಭಾರತೀ ವೇದಿಕೆಗಳಲ್ಲಿ ಮಾಧ್ಯಮದಲ್ಲಿ ಮಹಿಳೆಯ ಪಾತ್ರ ವಿಚಾರಗೋಷ್ಠಿಯಲ್ಲಿ ಮಾಳವಿಕ ಅವಿನಾಶ್, ಸುಧಾ ಬೆಳವಾಡಿ, ಗೀತಾ. ಬಿ. ಯು. ವಿಚಾರ ಮಂಡಿಸಿದರು. ವಿಚಾರಗೋಷ್ಠಿಗಳಲ್ಲಿ "ಧರ್ಮ -ಸಂಸ್ಕೃತಿ ಮತ್ತು ಮಹಿಳೆ"ಯ ಬಗ್ಗೆ ರಾಜಲಕ್ಷಿö್ಮಜೋಯಿಸ್, ಶತವಧಾನಿ ಗಣೇಶ್, ಅಲ್ಕಾ ಸುಧೀರ್ ಇನಂದಾರ್ ವಿಚಾರ ಮಂಡಿಸಿದರು. ಮಹಿಳೆ ಮತ್ತು ಸ್ವಾಸ್ಥ ಎಂಬ ವಿಚಾರ ಮಂಡನೆಯನ್ನು ಡಾ. ರಮ್ಯಾ ಕಾರ್ತಿಕ, ಡಾ. ಜಯಂತಿ, ಡಾ. ಕೆ. ಚಂದ್ರಿಕಾ ಮುರಳಿಧರ್ ಮಂಡಿಸಿದರು. ಮಹಿಳಾ ಸಬಲೀಕರಣ ಹಾಗೂ ಕೌಶಲ್ಯಾಭಿವೃದ್ಧಿ ವಿಚಾರದಲ್ಲಿ ಪ್ರಿಯ ಪುರಾಣಿಕ್ ಸಾಧನ ಕೋಟೆ ಮಂಡಿಸಿದರು. ಗಾರ್ಗಿ ವೇದಿಕೆಯಲ್ಲಿ ರಾಜ್ಯದ ವಿವಿಧ ಜಿಲ್ಲಾ ವಿಪ್ರ ಮಹಿಳಾ ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೊಡಗು ಜಿಲ್ಲೆಯ ಪ್ರೇಕ್ಷಾಭಟ್ ಅವರಿಂದ ಜಾನಪದ ನೃತ್ಯ ಪ್ರದರ್ಶನಗೊಂಡಿತು.
ಪರಿಮಳ ವೇದಿಕೆಯಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಡಿಕೇರಿಯ ಶೃತಿಲಯ ತಂಡದವರು ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ ಶ್ರೀ ರಾಮ ಭಜನೆ, ಹನುಮಾನ್ ಚಾಲೀಸಾ ಪಠಣವೂ ನಡೆಯಿತು. ಶೋಭಾಯಾತ್ರೆಯನ್ನು ಸಮಾಜ ಸೇವಕಿ ತೇಜಸ್ವಿನಿ ಅನಂತ್ ಕುಮಾರ್ ಉದ್ಘಾಟಿಸಿದರು. ಬಸವನಗುಡಿಯಿಂದ ಪ್ರಾರಂಭಗೊAಡ ಶೋಭಾಯಾತ್ರೆಯೂ ಶಂಕರ ಮಠದವರೆಗೂ ಮುಂದುವರಿಯಿತು.
ಸಮಾರAಭದ ಅಧ್ಯಕ್ಷತೆಯನ್ನು ಮಹಾಸಭಾದ ಅಧ್ಯಕ್ಷ ಅಶೋಕ ಹಾರನ್ನಳ್ಳಿ ವಹಿಸಿದ್ದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಅಹಲ್ಯಶರ್ಮಾ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸಾಧನೆ -ಸೇವೆಗೈದ ಮಹಿಳೆ ಯರಿಗೆ ಪುರಸ್ಕರಿಸಿದರು. ಎರಡನೇ ದಿನ ನಡೆದ ಶೋಭಾಯಾತ್ರೆಯಲ್ಲಿ ಎಲ್ಲಾ ಜಿಲ್ಲೆಗಳಿಂದ ಬಂದಿದ್ದ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು. ಬಸವನಗುಡಿ ದೊಡ್ಡಗಣಪತಿ ದೇವಾಲಯದಿಂದ ಹೊರಟು ಶಂಕರಮಠದವರೆಗೆ ಮಹಿಳೆಯರು ನೃತ್ಯ, ಭಜನೆ, ಕೋಲಾಟ, ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಶೋಭಾಯಾತ್ರೆಯನ್ನು ಸಂಪನ್ನಗೊಳಿಸಿದರು.
ಸಮಾರೋಪ ಸಮಾರಂಭದಲ್ಲಿ ರಾಜಮಾತೆ ಪ್ರಮೋದದೇವಿ ಒಡೆಯರ್ ಭಾಗವಹಿಸಿದ್ದರು. ಕೊಡಗು ಜಿಲ್ಲಾ ಸಂಚಾಲಕಿ ಗೀತಾ ಸಂಪತ್ ನಿರೂಪಣೆ ಮಾಡಿದರು.