ಮಡಿಕೇರಿ, ಜ. ೧೧: ಕೊಡಗು ಜಿಲ್ಲೆಯ ಟೆನ್ನಿಸ್ ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಚಾಂಪಿಯನ್ ತಂಡಕ್ಕೆ ಎರಡು ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತಿರುವ ಐಪಿಎಲ್ ಲೀಗ್ ಮಾದರಿಯ "ಕೂರ್ಗ್ ಹಿಸ್ಟಾರಿಕಲ್ ಕ್ರಿಕೆಟ್ ಟೂರ್ನಮೆಂಟ್ ಸೀಸನ್-೦೧’ ತಾ.೧೨ ರಿಂದ (ಇಂದಿನಿAದ) ತಾ.೧೫ ರವರೆಗೆ ಕುಶಾಲನಗರದ ಜಾತ್ರಾ ಮೈದಾನದಲ್ಲಿ ನಡೆಯಲಿದೆ. ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ೧,೯೯,೯೯೯ ರೂ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ೯೯,೯೯೯ ರೂ. ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆಯುವ ತಂಡಕ್ಕೆ ೪೯,೯೯೯ ರೂ. ಹಾಗೂ ಆಕರ್ಷಕ ಟ್ರೋಫಿ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ೯,೯೯೯ ರೂ. ಹಾಗೂ ಟ್ರೋಫಿ ಸಿಗಲಿದೆ.

೩ ಜಿಲ್ಲೆಗಳಿಂದ ೨೧೦ ಆಟಗಾರರು

ಕೂರ್ಗ್ ಹಿಸ್ಟಾರಿಕಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಕೊಡಗು ಜಿಲ್ಲೆ ಹಾಗೂ ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ ತಾಲೂಕು ಮತ್ತು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಆಟಗಾರರಿಗೆ ಅವಕಾಶ ನೀಡಲಾಗಿದೆ. ಒಟ್ಟು ೨೧೦ ಆಟಗಾರರು ಬಿಡ್ಡಿಂಗ್ ಮುಖಾಂತರ ೧೫ ತಂಡಗಳಿಗೆ ಬಿಕರಿಯಾಗಿದ್ದಾರೆ.

ಕೊಡಗಿನ ಗೋಣಿಕೊಪ್ಪ, ಕುಶಾಲನಗರ ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಹಾಗೂ ಹಾಸನ ಜಿಲ್ಲೆಯ ಅರಕಲಗೂಡು, ಕೊಣನೂರಿನವರು ಫ್ರಾಂಚೈಸಿಗಳನ್ನು ಖರೀದಿಸಿದ್ದಾರೆ.

ಪ್ರತೀ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆಯುವ ಆಟಗಾರನಿಗೆ ೨೦೦ ರೂ. ನಗದು ಹಾಗೂ ಟ್ರೋಫಿಯನ್ನು ನೀಡಲಾಗುತ್ತದೆ.

ಬೆಸ್ಟ್ ಬ್ಯಾಟ್ಸ್ಮ್ಯಾನ್, ಬೆಸ್ಟ್ ಬೌಲರ್ ಹಾಗೂ ಮ್ಯಾನ್ ಆಫ್ ದಿ ಸೀರೀಸ್ ಪಡೆಯುವ ಆಟಗಾರನಿಗೆ ಗೇರ್-ಬೈಸಿಕಲ್ ಪ್ರಶಸ್ತಿ ನೀಡಲಾಗುತ್ತದೆ.

ಪ್ರತಿ ತಂಡದಲ್ಲಿ ಎರಡು ಐಕಾನ್ ಆಟಗಾರ!

ಕೂರ್ಗ್ ಹಿಸ್ಟಾರಿಕಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಪ್ರತಿ ತಂಡದಲ್ಲಿ ಎರಡು ‘ಐಕಾನ್’ ಆಟಗಾರರಿಗೆ ಅವಕಾಶ ನೀಡಲಾಗಿದೆ.

ಫ್ರಾಂಚೈಸಿಗಳು ಪಿರಿಯಾಪಟ್ಟಣ, ಹುಣಸೂರು, ಅರಕಲಗೂಡು ಹಾಗೂ ಕೊಡಗು ಜಿಲ್ಲೆಗಳಿಂದ ಎರಡು ಆಟಗಾರರನ್ನು ಬಿಡ್ಡಿಂಗ್‌ಗಿAತ ಮುಂಚಿತವಾಗಿ ಆಯ್ಕೆ ಮಾಡಬಹುದಾಗಿದೆ.

ಮೂರು ಜಿಲ್ಲೆಗಳ ಅತ್ಯುತ್ತಮ ಆಲ್ ರೌಂಡರ್ ಕ್ರಿಕೆಟ್ ಆಟಗಾರರನ್ನು ಎಲ್ಲಾ ಫ್ರಾಂಚೈಸಿಗಳು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ.

ಪAದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ಆಟಗಾರರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಭಾಗವಹಿಸುತ್ತಿರುವ ಎಲ್ಲಾ ಫ್ರಾಂಚೈಸಿಗಳಿಗೆ ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ.

‘ಅಕುಲ್ ಟೂರಿಸಮ್ ಕೂರ್ಗ್ ಹಿಸ್ಟಾರಿಕಲ್ ಕ್ರಿಕೆಟ್ ಟೂರ್ನಮೆಂಟ್’ನಲ್ಲಿ ಟೀಮ್ ಮಂಜೇಶ್ ಕುಶಾಲನಗರ, ಟೀಮ್ ಬ್ರದರ್ಸ್ ಕುಶಾಲನಗರ, ಮಂತರ್ ಅಟ್ಯಾಕರ್ಸ್ ರಾಮನಾಥಪುರ, ಓಂ ಸಾಯಿ ಕ್ರಿಕೆಟರ್ಸ್ ಅರಕಲಗೂಡು, ಸುಲ್ತಾನ್ ಇಡೋಲ್ಸ್ ಕೊಣನೂರು, ಸಹಾರ ಕಿಂಗ್ಸ್ ಕುಶಾಲನಗರ, ಎಫ್.ಸಿ.ಸಿ ಪಿರಿಯಾಪಟ್ಟಣ, ತಿರುಮಲ ಕ್ರಿಕೆಟರ್ಸ್ ಪಿರಿಯಾಪಟ್ಟಣ, ಟೀಮ್ ಭೀಮ ಸೇನಾ ಕೂಡಿಗೆ, ರಾಯಲ್ ಕಿಂಗ್ಸ್ ಹಿಟ್ಟರ್ಸ್ ಆಲೂರು, ಗಿರೀಶ್ ಫ್ರೆಂಡ್ಸ್ ಕುಡ್ಲೂರು, ಕೂರ್ಗ್ ವಾಟರ್ ಪಾರ್ಕ್ ಕುಶಾಲನಗರ, ಕುಟ್ಟಿ ಬಾಯ್ಸ್ ಕುಶಾಲನಗರ, ಟೀಮ್ ಮ್ಯಾಕ್ಸ್ವೆಲ್ ಕೊಡಗು ಹಾಗೂ ಟೀಮ್ ಡಿ-ಕೋಚ್ ಕುಶಾಲನಗರ ತಂಡಗಳು ಭಾಗವಹಿಸಲಿವೆ.

-ಕೆ.ಎಂ. ಇಸ್ಮಾಯಿಲ್ ಕಂಡಕೆರೆ