ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ

ಮಡಿಕೇರಿ, ಜ. ೧೧: ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಬೇಕೆಂದು ಒತ್ತಾಯಿಸಿ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ರಾಜ್ಯ ಪಿಂಚಣಿ ಯೋಜನೆ ಎಂ.ಪಿ.ಎಸ್. ಸಂಬAಧಿತ ಸಂಘಟನೆಗಳ ಸಭೆಯಲ್ಲಿ ಪಾಲ್ಗೊಂಡ ಅವರು ಪಿಂಚಣಿ ಯೋಜನೆಯ ಸಾಧಕ ಬಾಧಕಗಳ ಕುರಿತು ವಿವರಿಸಿದರು.

ಹಳೆಯ ಪಿಂಚಣಿ ಯೋಜನೆಯನ್ನು ೨೦೦೬ ಏ. ೧ ರಂದು ಅಂದಿನ ಜೆ.ಡಿ.ಎಸ್. ಮತ್ತು ಬಿ.ಜೆ.ಪಿ. ಸಮ್ಮಿಶ್ರ ಸರ್ಕಾರ ರದ್ದು ಮಾಡಿತು. ೨೦೦೬ ಮಾ. ೩೧ ಕ್ಕಿಂತ ಮೊದಲು ನೇಮಕಾತಿಯಾದ ಖಾಸಗಿ ಅನುದಾನಿತ ಶಿಕ್ಷಕರಿಗೆ ಹಳೆಯ ಪಿಂಚಣಿ ಯೋಜನೆ ಈಗಲೂ ಅನ್ವಯವಾಗುತ್ತಿದೆ. ಆದರೆ ೨೦೦೬ ಏ. ೧ ರ ನಂತರ ಅನುಮೋದನೆ ಪಡೆದವರಿಗೆ ಹಳೆಯ ಪಿಂಚಣಿ ಯೋಜನೆ ರದ್ದಾಗಿದ್ದು, ಹೊಸ ಪಿಂಚಣಿ ಯೋಜನೆ ಕೂಡ ಅನ್ವಯವಾಗದೇ ಇರುವುದು ದೊಡ್ಡ ದುರಂತ ಎಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮಂಜುನಾಥ್ ಕುಮಾರ್ ಅಭಿಪ್ರಾಯ ಹಂಚಿಕೊAಡರು.

ಸರ್ಕಾರಿ ಎಂ.ಪಿ.ಎಸ್. ನೌಕರರ ಭತ್ಯೆ ಶೇ. ೧೦, ಸರ್ಕಾರದ ವಂತಿಗೆ ಶೇ. ೧೪ ರಷ್ಟು ಮತ್ತು ಶೇ. ೨೪ ಮೊತ್ತವನ್ನು ಪ್ರತಿ ತಿಂಗಳು ಕೇಂದ್ರ ಸರ್ಕಾರದಿಂದ ಶೇರು ಮಾರುಕಟ್ಟೆಗೆ ಹಾಕಲಾಗುತ್ತದೆ. ಅದರಲ್ಲಿ ಎಸ್.ಬಿ.ಐ. ಶೇ. ೪೦ ರಷ್ಟು, ಯು.ಟಿ.ಐ. ಶೇ. ೧೭, ಎಲ್.ಐ.ಸಿ.ಗೆ ಶೇ. ೪೬ ರಷ್ಟು ಹಣವನ್ನು ವಿನಿಯೋಗಿಸಿದ್ದು, ಕೇಂದ್ರ ಸರ್ಕಾರ ಆ ಹಣವನ್ನು ಮರುಪಾವತಿಸಬೇಕು ಮತ್ತು ಎಂ.ಎಸ್. ಪದ್ಧತಿ ರದ್ದು ಮಾಡಬೇಕು ಎಂದು ಮನವಿ ಮಾಡಿದರು.