ಮಡಿಕೇರಿ, ಜ. ೧೧: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪರಿಶಿಷ್ಟ ಜಾತಿಯ ಯುವಕರಿಗೆ ಸ್ವಯಂ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ತರಬೇತಿ ಶಿಬಿರ ಏರ್ಪಡಿಸಲಾಗಿದೆ.
ತಾ. ೨೪ ರಿಂದ ಫೆಬ್ರವರಿ ೭ ರವರೆಗೆ ಜಿಮ್-ಫಿಟ್ನೆಸ್ ತರಬೇತಿ ಶಿಬಿರ (೧೫ ದಿನಗಳು), ವಿದ್ಯಾರ್ಹತೆ ದ್ವಿತೀಯ ಪಿಯುಸಿ, ೧೬ ರಿಂದ ೩೦ ವರ್ಷದೊಳಗಿರಬೇಕು. ತರಬೇತಿಯು ಬೆಂಗಳೂರು ವಿದ್ಯಾನಗರ-ಶ್ರೀ ಕಂಠೀರವ ಶ್ರೀ ಜಯಪ್ರಕಾಶ ನಾರಾಯಣ ರಾಷ್ಟಿçÃಯ ಯುವ ತರಬೇತಿ ಕೇಂದ್ರದಲ್ಲಿ ನಡೆಯಲಿದೆ.
ತಾ. ೨೬ ರಿಂದ ಫೆಬ್ರವರಿ ೭ ರವರೆಗೆ ಬ್ಯೂಟೀಷಿಯನ್ ತರಬೇತಿ ಶಿಬಿರ ನಡೆಯಲಿದೆ. ಎಸ್ಎಸ್ಎಲ್ಸಿ (ಪಾಸ್-ಫೇಲ್). ೧೫ ರಿಂದ ೨೯ ವರ್ಷದೊಳಗಿರಬೇಕು. ತರಬೇತಿಯು ಬೆಂಗಳೂರು ಕುಂಬಳಗೋಡು ತರಬೇತಿ ಕೇಂದ್ರದಲ್ಲಿ ನಡೆಯಲಿದೆ.
ತಾ. ೨೭ ರಿಂದ ಫೆಬ್ರವರಿ ೭ ರವರೆಗೆ ವೀಡಿಯೋಗ್ರಫಿ ತರಬೇತಿ ಶಿಬಿರ ನಡೆಯಲಿದೆ. ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ೧೫ ರಿಂದ ೨೯ ವರ್ಷದೊಳಗಿರಬೇಕು. ತರಬೇತಿಯು ಬೆಂಗಳೂರು ಕುಂಬಳಗೋಡು ತರಬೇತಿ ಕೇಂದ್ರದಲ್ಲಿ ನಡೆಯಲಿದೆ.
ತಾ. ೩೧ ರಿಂದ ಫೆಬ್ರವರಿ ೭ ರವರೆಗೆ ನಿರೂಪಣಾ ಮತ್ತು ವಾರ್ತಾ ವಾಚಕರ ತರಬೇತಿ ಶಿಬಿರ ನಡೆಯಲಿದೆ. ಪದವಿ ಹಾಗೂ ಪತ್ರಿಕೋದ್ಯಮಗೆ ಪ್ರಾಮುಖ್ಯತೆ. ೧೫ ರಿಂದ ೨೯ ವರ್ಷದೊಳಗಿರಬೇಕು. ತರಬೇತಿಯು ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ನಡೆಯಲಿದೆ.
ತರಬೇತಿ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಲಘು ಉಪಹಾರ ಒದಗಿಸಲಾಗುವುದು. ಹೊರ ಜಿಲ್ಲೆಗಳಿಂದ ಭಾಗವಹಿಸುವ ಶಿಬಿರಾರ್ಥಿಗಳಿಗೆ ಸಾಮಾನ್ಯ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.
ಪರಿಶಿಷ್ಟ ಜಾತಿಯ ಯುವಜನ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ನಮೂನೆಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಮಡಿಕೇರಿಯಲ್ಲಿ ಪಡೆದು ಭರ್ತಿ ಮಾಡಿ ತಾ. ೧೭ ರೊಳಗೆ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ. ೦೮೨೭೨-೨೨೦೯೮೬/ ೯೪೮೦೦೩೨೭೧೨ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.