ಮಡಿಕೇರಿ, ಜ. ೧೧: ಆಹಾರ ಪದಾರ್ಥಗಳ ತಯಾರಕರು, ವ್ಯಾಪಾರ, ವಹಿವಾಟುದಾರರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ (ಎಫ್‌ಎಸ್‌ಎಸ್‌ಎ) ವತಿಯಿಂದ ಆಹಾರ ನೋಂದಣಿ/ ಪರವಾನಗಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಆಹಾರ ಸುರಕ್ಷತೆ ಅಂಕಿತಾಧಿಕಾರಿ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯು ಪ್ರವಾಸೋದ್ಯಮಕ್ಕೆ ಹೆಸರಾಗಿದ್ದು, ಪ್ರವಾಸಿಗರ ಹಿತದೃಷ್ಟಿ ಗಮನದಲ್ಲಿರಿಸಿಕೊಂಡು ಉತ್ತಮ ಗುಣಮಟ್ಟದ ಹಾಗೂ ಶುಚಿಯಾದ ಆಹಾರ ಪದಾರ್ಥಗಳನ್ನು ನೀಡುವ ಸಲುವಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ವತಿಯಿಂದ ಎಲ್ಲಾ ಹೋಮ್‌ಸ್ಟೇ ನಡೆಸುತ್ತಿರುವವರು ಕಡ್ಡಾಯವಾಗಿ ಆಹಾರ ನೋಂದಣಿ-ಪರವಾನಗಿಯನ್ನು ಪಡೆದುಕೊಳ್ಳುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತಾಧಿಕಾರಿ ಡಾ. ಅನಿಲ್ ಧಾವನ್ ಇ. ತಿಳಿಸಿದ್ದಾರೆ.