ಗೋಣಿಕೊಪ್ಪಲು, ಜ. ೧೦: ಸುಂದರ ಪರಿಸರದ ನಡುವೆ ನೆಲೆ ನಿಂತಿರುವ, ಬೆಳ್ಳಿ ಮಹೋತ್ಸವವನ್ನು ಆಚರಿಸಿ ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಯುವಜನೋತ್ಸವ ಅಂಗವಾಗಿ ‘ಯುವಝೇಂಕಾರ’ ಕಾರ್ಯಕ್ರಮವು ತಾ.೧೮ರಿಂದ ೨೦ರವರೆಗೆ ೩ ದಿನಗಳ ಕಾಲ ನಡೆಯಲಿದೆ. ೯ನೇ ಅಂತರ ಮಹಾ ವಿದ್ಯಾಲಯಗಳ ಯುವಜನೋತ್ಸವವು ಅತ್ಯಂತ ಯಶಸ್ವಿಯಾಗಿ ಜರುಗಲು ಕಾಲೇಜಿನ ಡೀನ್ ಡಾ.ಜಿ.ಎಂ.ದೇವಗಿರಿ ಮುಂದಾಳ ತ್ವದಲ್ಲಿ ಸಕಲ ವ್ಯವಸ್ಥೆಗಳು ನಡೆಯುತ್ತಿವೆ.
೫ ವರ್ಷಗಳಿಗೊಮ್ಮೆ ನಡೆಯುವ ಈ ವಿನೂತನ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ೬ ಮಹಾವಿದ್ಯಾಲಯಗಳ ಐನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ದ.ಕೊಡಗಿನ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯಕ್ಕೆ ಆಗಮಿಸಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಮುಂಜಾನೆಯಿAದ ಸಂಜೆಯವರೆಗೂ ನಡೆಯಲಿವೆ.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಸಹಯೋಗದಲ್ಲಿ ೩ ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಲಘುಸಂಗೀತ, ದೇಶಭಕ್ತಿಗೀತೆ, ಜಾನಪದ ಸಮೂಹ ಗಾಯನ, ಸ್ಥಳದಲ್ಲಿಯೇ ಚಿತ್ರ ಬಿಡಿಸುವಿಕೆ, ವ್ಯಂಗ್ಯ ಚಿತ್ರ ರಚನೆ, ಏಕಾಂಕ ನಾಟಕ ಸೇರಿ ದಂತೆ ಎಲುಕ್ಯೂಷನ್, ಆಶುಭಾಷಣ ಸ್ಪರ್ಧೆ, ಚರ್ಚಾಸ್ಪರ್ಧೆ, ಏಕಪಾತ್ರಾಭಿನಯ, ಬಿತ್ತಿ ಚಿತ್ರದ ರಚನೆ, ಲಘು ಪ್ರಹಸನ, ಜಾನಪದ ಸಮೂಹ ನೃತ್ಯ, ರಂಗೋಲಿ ಸ್ಪರ್ಧೆ, ಮಣ್ಣಿನಾಕೃತಿ ರಚನೆ, ತುಣುಕು
(ಮೊದಲ ಪುಟದಿಂದ) ಚಿತ್ರ ರಚನೆ ಹಾಗೂ ಮೂಕ ಪಾತ್ರಾಭಿನಯಗಳು ವಿದ್ಯಾರ್ಥಿಗಳಿಂದ ಮೂಡಿ ಬರಲಿದೆ.
ತಾ.೧೮ರಂದು ಬೆಳಿಗ್ಗೆ ೮.೩೦ ಗಂಟೆಗೆ ಸಾಂಸ್ಕೃತಿಕ ಮೆರವಣಿಗೆಯು ಪೊನ್ನಂಪೇಟೆ ನಗರದಿಂದ ಆರಂಭಗೊಳ್ಳಲಿದೆ. ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿಗಳಾದ ಪರಹಿತಾನಂದ ಸ್ವಾಮೀಜಿ, ಪ್ರಖ್ಯಾತ ಚುಟುಕು ಸಾಹಿತಿ ಹೆಚ್. ದುಂಡಿರಾಜ್ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದ್ದು ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಕುಲಪತಿಗಳಾದ ಡಾ. ಆರ್.ಸಿ. ಜಗದೀಶ್, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಿರಿಜಾ ವೆಂಕಟೇಶ್ ಪಾಲ್ಗೊಳ್ಳಲಿದ್ದಾರೆ.
ಸಮಾರೋಪ ಸಮಾರಂಭವು ತಾ.೨೦ರಂದು ಮಧ್ಯಾಹ್ನ ೧೨ ಗಂಟೆಗೆ ಜರುಗಲಿದ್ದು ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಗೌರವ ವೈದ್ಯಕೀಯ ಸಲಹೆಗಾರರು, ಮಾಜಿ ಲೋಕಸೇವಾ ಆಯೋಗದ ಸದಸ್ಯರಾದ ಡಾ. ಹೆಚ್. ರವಿಕುಮಾರ್, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಕುಲಪತಿಗಳಾದ ಡಾ. ಆರ್.ಸಿ. ಜಗದೀಶ್, ಶಿವಮೊಗ್ಗದ ವಿದ್ಯಾರ್ಥಿ ಕಲ್ಯಾಣ ಡೀನ್ ಡಾ.ಎನ್. ಶಿವಶಂಕರ್ ಭಾಗವಹಿಸಲಿದ್ದಾರೆ.
ನಮ್ಮ ಅರಣ್ಯ ಮಹಾವಿದ್ಯಾಲಯ ಸೇರಿದಂತೆ ರಾಜ್ಯದ ಇತರೆಡೆ ಇರುವ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಪಠ್ಯದ ಜೊತೆಗೆ ಹಾಗೂ ಪಠ್ಯೇತರ ಚಟುವಟಿಕೆಯನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಈಗಾಗಲೇ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ರೈತಮುಖಿ, ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದೇವೆ. ಡಿಸಂಬರ್ ತಿಂಗಳಿನಲ್ಲಿ ಅಂತರರಾಷ್ಟಿçÃಯ ಸಮ್ಮೇಳನ ಜೊತೆಗೆ ಜೇನುಕೃಷಿ, ನರ್ಸರಿ, ಅರಣ್ಯ ಕಿರು ಉತ್ಪನ್ನಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿ ಯಶಸ್ವಿಯಾಗಿದ್ದೇವೆ.
ಇದರೊಂದಿಗೆ ಈ ಬಾರಿ ಯುವಜನೋತ್ಸವ ಅಂಗವಾಗಿ ‘ಯುವಝೇಂಕಾರ’ ಕಾರ್ಯಕ್ರಮ ಮೂಡಿ ಬರಲಿದೆ ಎಂದು ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು. ಮಕ್ಕಳಲ್ಲಿರುವ ಕಲಾ ಪ್ರತಿಭೆಗಳನ್ನು ಹೊರಹೊಮ್ಮಿಸಲು ಇಂತಹ ವೇದಿಕೆಯನ್ನು ಕಲ್ಪಿಸಿದ್ದೇವೆ.
ರಾಜ್ಯದ ಬೇರೆ ಬೇರೆ ಭಾಗಗಳಿಂದ ವಿಶ್ವವಿದ್ಯಾನಿಲಯಗಳ ಡೀನ್ಗಳು ಆಗಮಿಸಲಿದ್ದಾರೆ. ಪಠ್ಯದೊಂದಿಗೆ ಪಠ್ಯೇತರ ಹಾಗೂ ಕ್ರೀಡೆಯ ಪ್ರತಿಭೆಗಳನ್ನು ಬೆಳೆಸುವ ಉದ್ದೇಶವಾಗಿದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳನ್ನು ವಿಭಾಗೀಯ ಮಟ್ಟಕ್ಕೆ ಕಳುಹಿಸಿಕೊಡಲಿದ್ದೇವೆ. ಅಲ್ಲದೆ ರಾಷ್ಟçಮಟ್ಟಕ್ಕೂ ವಿದ್ಯಾರ್ಥಿಗಳು ಆಯ್ಕೆಯಾಗಲಿದ್ದಾರೆ. ಯುವಜನೋತ್ಸವದಲ್ಲಿ ಕಲೆ, ಸಂಸ್ಕೃತಿಗೆ ಒತ್ತು ನೀಡಲಾಗುತ್ತಿದೆ. ೫ ವರ್ಷಕ್ಕೊಮ್ಮೆ ಅವಕಾಶ ಲಭಿಸಲಿದೆ. ಇದನ್ನು ಮೂರು ದಿನಗಳ ಸಾಂಸ್ಕೃತಿಕ ಹಬ್ಬವಾಗಿ ಆಚರಣೆ ಮಾಡಲಿದ್ದೇವೆ.
ಸಾಂಸ್ಕೃತಿಕ ಹಬ್ಬದ ಶೀರ್ಷಿಕೆಯನ್ನು ಯುವ ಝೇಂಕಾರ ಎಂದು ಇಡಲಾಗಿದೆ. ನಮ್ಮ ದೇಶವು ವಿವಿಧ ಕಲೆ, ಸಂಸ್ಕೃತಿ, ವಿವಿಧ ಭಾಷೆಯನ್ನು ಒಳಗೊಂಡ ದೇಶವಾಗಿದೆ. ಕಲೆ, ನಾಟಕಗಳಲ್ಲಿ ಪರಿಣಿತಿ ಹೊಂದಿದವರು ವಿದ್ಯಾರ್ಥಿಗಳಿಗೆ ಹೆಚ್ಚಿನ ತರಬೇತಿ ನೀಡಲಿದ್ದಾರೆ. ಕಲೆಯಲ್ಲಿ ಗುರುತಿಸಿಕೊಂಡಿರುವ ಹಾಗೂ ಪರಿಣಿತಿಯನ್ನು ಹೊಂದಿರುವವರು ರಾಜ್ಯದ ಬೇರೆ ಬೇರೆ ಭಾಗದಿಂದ ಆಗಮಿಸಲಿದ್ದಾರೆ ಎಂದು ವಿವರಣೆ ನೀಡಿದರು. ಈ ವೇಳೆ ಅರಣ್ಯ ಮಹಾವಿದ್ಯಾಲಯದ ಅರಣ್ಯ, ಕೃಷಿಶಾಸ್ತç ಮುಖ್ಯಸ್ಥರಾದ ಡಾ. ರಾಮಕೃಷ್ಣ ಹೆಗಡೆ, ಮುಖ್ಯಸ್ಥರಾದ ಡಾ.ಕೆಂಚರೆಡ್ಡಿ, ಎಡಿಎಸ್ಡಬ್ಲೂö್ಯ ಡಾ.ಸತೀಶ್, ಡಾ.ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಕರ್ನಾಟಕ ಸರ್ಕಾರದ ಕಾರ್ಯದರ್ಶಿಗಳಾದ ವಿ.ಅನ್ಬುಕುಮಾರ್, ತೋಟಗಾರಿಕೆ ಇಲಾಖೆ ಕರ್ನಾಟಕ ಸರ್ಕಾರದ ಕಾರ್ಯದರ್ಶಿಗಳಾದ ಡಾ.ಶಮ್ಲಾ ಇಕ್ಬಾಲ್, ಆರ್ಥಿಕ ಇಲಾಖೆ ಕರ್ನಾಟಕ ಸರ್ಕಾರದ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್, ಸಹಾಯಕ ಮಹಾ ನಿರ್ದೇಶಕರಾದ ಡಾ.ಸಂಜಯ್ ಕುಮಾರ್ ಸಿಂಗ್, ಶಾಸಕರಾದ ಜಿ.ಹೆಚ್. ಶ್ರೀನಿವಾಸ್, ಪ್ರಗತಿಪರ ರೈತರುಗಳಾದ ದೊಡ್ಡಗೌಡ ಸಿ.ಪಾಟೀಲ್, ಕೆ.ನಾಗರಾಜ್, ವೀರಭದ್ರಪ್ಪ ಪೂಜಾರಿ, ಶಿಕ್ಷಣ ತಜ್ಞರಾದ ಡಾ.ಪಿ.ಕೆ. ಬಸವರಾಜ, ಕೃಷಿ ಉದ್ದಿಮೆದಾರರಾದ ಡಾ.ಬಿ.ಕೆ. ಕುಮಾರಸ್ವಾಮಿ, ಶಿಕ್ಷಣ ನಿರ್ದೇಶಕರಾದ ಡಾ.ಹೇಮ್ಲಾನಾಯ್ಕ, ಕುಲಸಚಿವರು ಮತ್ತು ವಿಶೇಷಾಧಿಕಾರಿಗಳಾದ ಡಾ.ಕೆ.ಸಿ. ಶಶಿಧರ್, ಸಂಶೋಧನಾ ನಿರ್ದೇಶಕರಾದ ಡಾ.ಬಿ.ಎಂ. ದುಶ್ಯಂತ್ ಕುಮಾರ್, ವಿಸ್ತರಣಾ ನಿರ್ದೇಶಕರಾದ ಡಾ.ಕೆ.ಟಿ. ಗುರುಮೂರ್ತಿ, ಡೀನ್ ಸ್ನಾತಕೋತ್ತರರಾದ ಡಾ.ಎಂ. ದಿನೇಶ್ ಕುಮಾರ್, ಡೀನ್ ಡಾ.ಗಣೇಶ್ ನಾಯಕ್, ಡೀನ್ ಡಾ.ನಾರಾಯಣ್ ಎಸ್.ಮಾರ್ಕರ್, ಡೀನ್ ಡಾ.ಕೆ.ಮಂಜಪ್ಪ, ಗ್ರಂಥಪಾಲಕರಾದ ಡಾ.ಡಿ. ತಿಪ್ಪೇಶ, ಹಣಕಾಸು ನಿಯಂತ್ರಣಾಧಿಕಾರಿಗಳಾದ ಸರೋಜಬಾಯಿ, ಆಡಳಿತಾಧಿಕಾರಿಗಳಾದ ಡಾ.ಎಂ.ಎಸ್. ನಾಗರಾಜ್, ಆಸ್ತಿ ಅಧಿಕಾರಿಗಳಾದ ಮಹಮ್ಮದ್ ಆರಿಫ್ ಖಾನ್ ಪಾಲ್ಗೊಳ್ಳಲಿದ್ದಾರೆ. -ಹೆಚ್.ಕೆ. ಜಗದೀಶ್