ಸುಂಟಿಕೊಪ್ಪ, ಜ. ೯: ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ೨೦೨೪ನೇ ನೂತನ ಸಾಲಿನ ಅಧ್ಯಕ್ಷರಾಗಿ ನೇಮಕಗೊಂಡ ಸಂಪತ್ ಕುಮಾರ್ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾರಂಗಿ ರಸ್ತೆಯಲ್ಲಿರುವ ಅತ್ತೂರು ಗ್ರಾಮದ ಖಾಸಗಿ ಸಭಾಂಗಣದಲ್ಲಿ ನಡೆಯಿತು.
ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ೨೦೨೩ನೇ ಸಾಲಿನ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಜೆಸಿಐ ವಲಯ ೧೪ರ ಅಧ್ಯಕ್ಷೆ ಆಶಾ ಜೈನ್ ಅವರು ಸಂಸ್ಥೆಯ ಅಧ್ಯಕ್ಷ ಸಂಪತ್ಕುಮಾರ್ ಹಾಗೂ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ನಂತರ ಮಾತನಾಡಿದ ಜೆಸಿಐ ವಲಯ ಅಧ್ಯಕ್ಷೆ ಆಶಾ ಜೈನ್ ಅವರು, ಯುವ ಸಮುದಾಯದಲ್ಲಿ ಶಿಸ್ತು, ಸಮಯಪಾಲನೆ, ಸಂಯಮ, ಉತ್ತಮ ನಾಯಕತ್ವ ಗುಣ ಹಾಗೂ ವ್ಯಕ್ತಿತ್ವ ಬೆಳೆಸಲು ಸಹಕಾರಿಯಾದ ಜೆಸಿಐ ಸಂಸ್ಥೆಯು ಅಂರ್ರಾಷ್ಟಿçÃಯ ಮಟ್ಟದಲ್ಲಿ ಯುವಶಕ್ತಿಯ, ನಾಗರಿಕರ ಜಾಗತಿಕ ಸಂಸ್ಥೆಯಾಗಿದೆ. ಯುವ ಸಮುದಾಯ ದಲ್ಲಿ ಧನಾತ್ಮಕ ಬದಲಾವಣೆಯೊಂದಿಗೆ ಕ್ರಿಯಾಶೀಲ ವ್ಯಕ್ತಿತ್ವ, ನಾಯಕತ್ವ, ಉತ್ತಮ ಉದ್ಯಮಶೀಲ ಕೌಶಲ್ಯಗಳನ್ನು ಬೆಳೆಸುವುದರೊಂದಿಗೆ ದೇಶದಲ್ಲಿ ಬ್ರಾತೃತ್ವ ಬೆಳೆಸಿ ವಿಶ್ವದಾದ್ಯಂತ ಸ್ನೇಹಪರತೆ ಬೆಳೆಸುವಲ್ಲಿ ಈ ಸಂಸ್ಥೆ ಪ್ರಮುಖ ವೇದಿಕೆಯಾಗಿದೆ ಎಂದರು.
ಜೆಸಿಐ ವಲಯ ೧೪ರ ಉಪಾಧ್ಯಕ್ಷ ಶುಭಾಂಗ್ ಸಿದ್ದಾರ್ಥ, ಜೆಸಿಐ ಸಂಸ್ಥೆಯ ಹಿರಿಯ ಸದಸ್ಯರ ಸಂಘದ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಜೆಸಿಐ ಸಂಸ್ಥೆಯ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಸತೀಶ್ ಕುಮಾರ್ ಮಾತನಾಡಿದರು. ಸಂಸ್ಥೆಯ ನೂತನ ಕಾರ್ಯದರ್ಶಿ ಮಂಜುನಾಥ್, ವಲಯ ಪೂರ್ವಾಧ್ಯಕ್ಷ ದೇವಿಪ್ರಸಾದ್ ಕಾಯಾರ್ ಮಾರ್, ಖಜಾಂಚಿ ನಂದಕುಮಾರ್, ಜೆಸಿರೇಟ್ ಟಿ.ವಿ. ಶೈಲಾ, ಸಂಸ್ಥೆಯ ಸದಸ್ಯರಾದ ಡೆನಿಸ್ ಡಿಸೋಜ, ಮುರುಗೇಶ್, ಪ್ರೀತಂ ಪ್ರಭಾಕರ್, ಮನು ಅಚ್ಚಮಯ್ಯ, ಜಿ.ಬಿ. ಹರೀಶ್, ಅರುಣ್ ಕುಮಾರ್, ಫೆಲ್ಸಿ, ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಜೆಸಿಐ ಸಂಸ್ಥೆಯ ವಲಯ ಅಧ್ಯಕ್ಷೆ ಆಶಾ ಜೈನ್, ಉಪಾಧ್ಯಕ್ಷ ಶುಭಾಂಗ್ ಸಿದ್ದಾರ್ಥ, ಸಂಸ್ಥೆಯ ಹಿರಿಯ ಸದಸ್ಯರ ಸಂಘದ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಉದ್ಯಮಿ ಜಾನ್ ಪುಲಿಕಲ್ ಅವರನ್ನು ಸನ್ಮಾನಿಸಲಾಯಿತು.