ಮಡಿಕೇರಿ, ಜ. ೯: ಮಡಿಕೇರಿ ಮುತ್ತಪ್ಪ ದೇವಾಲಯ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ೩೪ನೇ ವರ್ಷದ ಮಕರ ಸಂಕ್ರಾAತಿ ಆಚರಣೆ ಪ್ರಯುಕ್ತ ತಾ.೧೪ ಹಾಗೂ ತಾ.೧೫ ರಂದು ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ತಾ.೧೪ ರಂದು ಬೆಳಿಗ್ಗೆ ೮ ಗಂಟೆ ನಂತರ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ ಇತ್ಯಾದಿ ಸೇವೆಗಳು ನಡೆಯಲಿವೆ.
ತಾ.೧೫ ರಂದು ಬೆಳಿಗ್ಗೆ ೬:೩೦ಕ್ಕೆ ನಿರ್ಮಾಲ್ಯ ವಿಸರ್ಜನೆ, ಉಷಾ ಪೂಜೆ, ಬೆಳಿಗ್ಗೆ ೭ ಗಂಟೆಗೆ ಶ್ರೀ ಮುತ್ತಪ್ಪ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರ ಪೂಜೆಗಳು ನಡೆಯಲಿವೆ. ೭:೩೦ ರಿಂದ ಪಂಚಾಮೃತಾಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರಾಭಿಷೇಕ, ಪುಷ್ಪಾರ್ಚನೆ ನಡೆಯಲಿದೆ. ಬೆ ೮:೩೦ಕ್ಕೆ ಕುಟ್ಟಿಚಾತನ್ ದೇವರ ವೆಳ್ಳಾಟಂ, ೯ ಕ್ಕೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ೧೦ ಗಂಟೆಗೆ ಗುಳಿಗ ದೇವರ ವೆಳ್ಳಾಟಂ, ೧೦:೩೦ಕ್ಕೆ ಅಯ್ಯಪ್ಪ ದೇವರ ಅಲಂಕಾರ ಪೂಜೆ, ೧೧ ಗಂಟೆಗೆ ಅಯ್ಯಪ್ಪ ದೇವರ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ೬ ಗಂಟೆಗೆ ಭಜನೆ, ೭ ರಿಂದ ಅಲಂಕಾರ ಪೂಜೆ, ಪಡಿಪೂಜೆ ಹಾಗೂ ೮ ಗಂಟೆಗೆ ದೀಪಾರಾಧನೆ ಬಳಿಕ ಪ್ರಸಾದ ವಿತರಣೆ ಜರುಗಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.