ಮಡಿಕೇರಿ, ಜ. ೯: ಪ್ರಸಕ್ತ ಸಾಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ(ಸಾಯಿ) ತರಬೇತಿ ಕೇಂದ್ರದ ವತಿಯಿಂದ ಮಡಿಕೇರಿ ಬಾಲಕಿಯರ ಕ್ರೀಡಾ ನಿಲಯಕ್ಕೆ ಪ್ರತಿಭಾವಂತ ಹಾಕಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯು ತಾ. ೧೮ ಮತ್ತು ೧೯ ರಂದು ಆಯಾಯ ದಿನಗಳಂದು ಬೆಳಿಗ್ಗೆ ೯ ಗಂಟೆಗೆ ನಗರದ ಸಾಯಿ ಹಾಕಿ ಟರ್ಫ್ ಮೈದಾನದಲ್ಲಿ ನಡೆಯಲಿದೆ.

೧೨ ರಿಂದ ೧೮ ವರ್ಷದೊಳಗಿನ ಬಾಲಕಿಯರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಭಾಗವಹಿಸುವ ಕ್ರೀಡಾಪಟುಗಳು ತಮ್ಮ ವೈಯಕ್ತಿಕ ಕ್ರೀಡಾ ಸಾಮಾಗ್ರಿಗಳನ್ನು ತರಬೇಕು.

ವೈದ್ಯಕೀಯ ಅರ್ಹತಾ ಪತ್ರ, ಕ್ರೀಡಾ ಸಾಧನೆಯ ಪ್ರಮಾಣ ಪತ್ರ(ಜಿಲ್ಲಾ ವಿಭಾಗ, ರಾಜ್ಯ ಹಾಗೂ ಅದಕ್ಕಿಂತ ಮೇಲ್ಪಟ್ಟ ೩ ವರ್ಷದ ಹಿಂದಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು), ಜನ್ಮ ದಿನಾಂಕ ಪ್ರಮಾಣ ಪತ್ರ (ಜನನ ಮರಣ ನೋಂದಣಿ ಅಧಿಕಾರಿಗಳಿಂದ), ಇತ್ತೀಚಿನ ೫ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ವಿಳಾಸ ದೃಢೀಕರಣಗೊಳಿಸಲು ಆಧಾರ್ ಕಾರ್ಡ್ ಮೂಲ ಪ್ರತಿಯೊಂದಿಗೆ ಒಂದು ಜೊತೆ ಜೆರಾಕ್ಸ್ ಪ್ರತಿಯನ್ನು ತರಬೇಕು.

ಈ ಆಯ್ಕೆ ಪ್ರಕ್ರಿಯೆಯನ್ನು ಹಿಂದಿನ ೩ ವರ್ಷದ ಹಾಕಿ ಕ್ರೀಡಾ ಸಾಧನೆಯ ಪ್ರಮಾಣ ಪತ್ರ ಹಾಗೂ ಕೆಲವೊಂದು ಸಾಯಿ ನಿಗದಿತ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ತುಟ್ಟಿ ಭತ್ಯೆ ಮತ್ತು ಪ್ರಯಾಣ ದರವನ್ನು ನೀಡಲಾಗುವುದಿಲ್ಲ. ಆಯ್ಕೆಯಾದ ಕ್ರೀಡಾಪಟುಗಳಿಗೆ ವಸತಿ, ಊಟ, ಕ್ರೀಡಾ ಸಾಮಾಗ್ರಿ, ವೈದ್ಯಕೀಯ ಖರ್ಚು, ಶೈಕ್ಷಣಿಕ ಸೌಲಭ್ಯವನ್ನು ಸಾಯಿ ತರಬೇತಿ ಕೇಂದ್ರದಿAದ ಕೊಡಲಾಗುತ್ತದೆ. ಮೊ.ನಂ.೯೫೬೨೪೫೨೪೫೧, ೯೫೯೧೮೦೩೪೩೨ ನ್ನು ಸಂಪರ್ಕಿಸಬಹುದು ಎಂದು ಸಾಯಿ ತರಬೇತಿ ಕೇಂದ್ರದ ಆಡಳಿತಾಧಿಕಾರಿ ಮಿನಿ ಉಣ್ಣಿರಾಜ್ ಅವರು ತಿಳಿಸಿದ್ದಾರೆ.