ವೀರಾಜಪೇಟೆ, ಜ. ೯: ಮೈ ನವಿರೇಳಿಸುವ ಆಕರ್ಷಕ ವಿದ್ಯಾರ್ಥಿಗಳ ಪಥಸಂಚಲನ, ಪಾಂಚಜನ್ಯ ಬ್ಯಾಂಡ್, ಎಲ್ಲೆಲ್ಲೂ ಮೇಳೈಸಿದ ಕಲಾ ತಂಡಗಳ ವೈಭವ. ಕಣ್ಣಿಗೆ ಹಬ್ಬ ನೀಡುತ್ತಿರುವ ವೇಷ ಭೂಷಣ ತೊಟ್ಟ ಕಲಾವಿದರು, ನೃತ್ಯವನ್ನೂ ನೋಡುತ್ತ ಸಂಭ್ರಮಿಸುತ್ತಿರುವ ಕಲಾ ಪ್ರೇಮಿಗಳು.
ಮುದ್ದುಮಕ್ಕಳ ಕಲಾವೈಭವ. ಜಾನಪದ ಲೋಕವೇ ಇಳಿದು ಬಂದಿತ್ತು. ಆಕರ್ಷಿಸಿದ ಭರತನಾಟ್ಯ, ಕಥಕ್, ಕೂಚಿಪುಡಿ, ಮಣಿಪುರಿ, ಓಡಿಸ್ಸಿ ನೃತ್ಯಗಳು. ಶಾಸ್ತಿçÃಯ ಸಂಗೀತ, ಹಿಂದೂಸ್ತಾನಿ ಸಂಗೀತ, ಸಿತಾರ್, ತಬಲ, ಕೊಳಲು, ವೀಣೆ, ಮೃದಂಗ ವಾದನಗಳ ಇಂಪಾದ ಸಂಗೀತ ನೋಡುಗರ, ಕೇಳುಗರ ಮನಸ್ಸಿಗೆ ಮುದ ನೀಡಿತು...!
ಇಷ್ಟೆಲ್ಲ ಸಾಂಸ್ಕöÈತಿಕ ಕಲಾಲೋಕ ಅನಾವರಣಗೊಂಡಿದ್ದು, ವೀರಾಜಪೇಟೆಯ ಅರಮೇರಿಯಲ್ಲಿರುವ ಎಸ್.ಎಂ.ಎಸ್ ಅಕಾಡೆಮಿಯಲ್ಲಿ ‘ಏಕ ಭಾರತ ಶ್ರೇಷ್ಠ ಭಾರತ' ಎಂಬ ಧ್ಯೇಯವಾಕ್ಯದಡಿ ನಡೆದ ಸಾಂಸ್ಕöÈತಿಕ ಕಾರ್ಯಕ್ರಮದಲ್ಲಿ. ಶಾಲಾ-ಕಾಲೇಜುಗಳ ವಿದ್ಯಾರ್ಥಿ ಯುವ ಪ್ರತಿಭೆಗಳು ಭಾಗವಹಿಸಿ ತಮ್ಮಲ್ಲಿ ಅಡಗಿದ್ದ ಪ್ರತಿಭೆಯನ್ನು ವೇದಿಕೆಯಲ್ಲಿ ಸಾದರಪಡಿಸಿದರು.
ನಾನಾ ಕಲಾ ತಂಡಗಳು ಪ್ರದರ್ಶನ ನೀಡಿದ ಜಾನಪದ ನೃತ್ಯಗಳಾದ ಸಿ.ಬಿ.ಎಸ್.ಇ.ಯ ವಿವಿಧ ವಲಯಗಳಿಗೆ ಒಳಪಟ್ಟ ಡೋಗ್ರಿ, ಭಾಂಗ್ಡ, ಹರಿಯಾಣ, ಲೆಪ್ಚ, ನಾಗ, ಚೆರಾವು, ಥೌಗೋಲ್ ಜಗೋಯಿ, ದುನೋಚಿ, ಉತ್ತರಖಂಡ್ ಪಹಾಡಿ, ಗರ್ಭಾ, ಕರ್ನಾಟಕ ತಮಿಳುನಾಡು ಕೇರಳ ಜನಪದ ನೃತ್ಯಗಳು, ಕೋಲಾಟ, ಕಂಸಾಳೆ, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ವೀರಭದ್ರ ಕುಣಿತ, ನಂದಿ ಧ್ವಜದ ಕುಣಿತ ಆವರಣದಲ್ಲಿ ಹೊಸದೊಂದು ಜಾನಪದ ಲೋಕವನ್ನೇ ಸೃಷ್ಟಿಸಿತು. ನಿರ್ದಿಷ್ಟ ಕಥಾ ವಸ್ತುಗಳನ್ನಾಧರಿಸಿದ ನೃತ್ಯ ಪ್ರಕಾರಗಳು ವೇದಿಕೆ ಮೇಲೆ ಅಚ್ಚುಕಟ್ಟಾಗಿ ಮೂಡಿಬಂದವು.
ಎಸ್.ಎA.ಎಸ್ ಅಕಾಡೆಮಿಯ ಪುಟ್ಟ÷ಮಕ್ಕಳಾದಿಯಾಗಿ ೯೦೦ ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ತಂಡೋಪತAಡವಾಗಿ ಸಾಂಸ್ಕöÈತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಕೇರಳ ಶೈಲಿಯ ಮೋಹಿನಿಯಾಟ್ಟಂ, ಶಿವತಾಂಡವ ನೃತ್ಯ, ಗುಜರಾತಿನ ಗರ್ಬಾ ದಾಂಡ್ಯ, ಕಥಕ್ ಹೀಗೆ ವಿವಿಧ ರೀತಿಯ ಭಕ್ತಿ ಭಾವ ಸ್ಫುರಿಸುವ ನೃತ್ಯಗಳು ಕಲಾರಾಧಕರ ಮನಸೆಳೆದವು.
ಸತತ ೩ ಗಂಟೆ ಕಾಲ ನಡೆದ ನೃತ್ಯ ಪ್ರದರ್ಶನದಲ್ಲಿ ಕಾಂತಾರ ಖ್ಯಾತಿಯ ದೃಶ್ಯ ಕಲಾ ವೈಭವ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಕೇವಲ ಟಿ.ವಿಗಳಲ್ಲಷ್ಟೇ ನೋಡುತ್ತಿದ್ದ ಅಪರೂಪದ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದ ಕಾಫಿನಾಡಿಗರಿಗೆ, ಎಸ್ಎಂ.ಎಸ್ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕöÈತಿಕ ವೈಭವ ಗತವೈಭವವನ್ನು ಮೇಳೈಸುವಂತೆ ಮಾಡಿತ್ತು. ಸಭಾಂಗಣದಲ್ಲಿ ಪೋಷಕರು ಕಿಕ್ಕಿರಿದು ತುಂಬಿದ್ದರು.
ಇದೇ ಮೊದಲ ಬಾರಿ ನಾನಾ ಪ್ರಕಾರಗಳ ನೃತ್ಯಗಳನ್ನು ಕಣ್ಣಾರೆ ಕಂಡ ಪ್ರೇಕ್ಷಕರು ಕೆಲ ಕಾಲ ಹೊಸತೊಂದು ಲೋಕದಲ್ಲಿ ಸ್ವಚ್ಛಂಧವಾಗಿ ವಿಹರಿಸಿದರು. ಒಟ್ಟಿನಲ್ಲಿ ಕಾಫಿನಾಡಲ್ಲಿ ನಡೆದ ಸಾಂಸ್ಕöÈತಿಕ ವೈಭವ ಕಾಫಿನಾಡಿಗರಿಗೆ ವಿಶೇಷ ಅನುಭವವನ್ನು ಉಣಬಡಿಸಿದ್ದು ಮಾತ್ರ ಸುಳ್ಳಲ್ಲ.
-ಈಶಾನ್ವಿ ಕಿರಣ್