ಮಡಿಕೇರಿ, ಜ. ೮: ಭಾರತೀಯ ಅಂಚೆ ಇಲಾಖೆಯ ವತಿಯಿಂದ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಂಚೆ ಚೀಟಿಗಳ ಹಬ್ಬ ಕಾರ್ಯಕ್ರಮದಲ್ಲಿ ಕರ್ನಾಟಕದ ಮೊದಲ ಮಹಿಳಾ ಉದ್ಯಮಿ ಕಾಫಿಪುಡಿ ಸಾಕಮ್ಮ ಅವರ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಾಯಿತು.
ಸಾಕಮ್ಮನವರ ಕುಟುಂಬಸ್ಥರಾದ ತಾರ ಮಂಜುಗೌಡ, ಅರಕಲಗೂಡು ಶಾಸಕÀ ಎ. ಮಂಜು, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ, ಪತ್ನಿ ದಿವ್ಯ ಮಂಥರ್, ಉಪಾಸಿ ಮಾಜಿ ಅಧ್ಯಕ್ಷ ವಿನೋದ್ ಶಿವಪ್ಪ, ಬೆಳೆಗಾರ ಹಾಗೂ ಉದ್ಯಮಿ ಆನಂದ ಬಸಪ್ಪ ಅವರುಗಳು ಪೋಸ್ಟಲ್
ಕವರ್ಅನ್ನು ಅನಾವರಣ ಗೊಳಿಸಿದರು.
ಸುಮಂಗಲಿ ಸೇವಾ ಆಶ್ರಮದ ಸ್ವಯಂ ಸೇವಕಿ ಡಾ. ಸುಶೀಲಮ್ಮ, ಖ್ಯಾತ ಕಲಾವಿದೆ ರಾಧಾ ಮಲ್ಲಪ್ಪ, ಭಾರತೀಯ ಅಂಚೆ ಇಲಾಖೆ ನಿರ್ದೇಶಕಿ ಪ್ರೀತಿ ಅಗರ್ವಾಲ್ ಮತ್ತಿತರ ಪ್ರಮುಖರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.
ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರ ಉಪಸ್ಥಿತಿಯಲ್ಲಿ ಸಂಜೆ ಸಮಾರೋಪ ಸಮಾರಂಭ ನಡೆಯಿತು.
ಮಹಿಳಾ ಸಬಲೀಕರಣ ಎಂಬ ವಿಷಯದಡಿಯಲ್ಲಿ ರಾಜ್ಯ ಅಂಚೆ ಚೀಟಿಗಳ ಸಂಗ್ರಹಣೆ ಮತ್ತು ಪ್ರದರ್ಶನದ ಹಬ್ಬದಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಕರ್ನಾಟಕದ ಕಾಫಿಗೆ ಅಪಾರ ಮೌಲ್ಯವನ್ನು ತಂದ ಮಹಿಳಾ ಉದ್ಯಮಿ ಸಾಕಮ್ಮ ಅವರ ಸ್ಮರಣಾರ್ಥ ಈ ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡಲಾಗಿದೆ.
ಹೆಮ್ಮೆಯ ಮಹಿಳಾ ಉದ್ಯಮಿ
ಕಾಫಿಪುಡಿ ಸಾಕಮ್ಮ ಎಂದೇ ಖ್ಯಾತರಾಗಿದ್ದ ಸಾಕಮ್ಮ ಅವರು ಕೊಡಗು ಜಿಲ್ಲೆಯ ಸೋಮವಾರಪೇಟೆಯ “ಸಾಕಮ್ಮ”ಸ್ ಕಾಫಿ ಅಂಗಡಿಯ ಹೆಮ್ಮೆಯ ಮಾಲೀಕರಾಗಿದ್ದರು. ಕೊಡಗಿನ ವಾಣಿಜ್ಯ ಬೆಳೆ ಕಾಫಿಯನ್ನು ರಾಷ್ಟç ಮತ್ತು ಅಂರ್ರಾಷ್ಟಿçÃಯ ಮಟ್ಟಕ್ಕೆ ಪರಿಚಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
೧೯೨೦ರಲ್ಲಿ ಅವರು ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿ ಕಾಫಿ ಕ್ಯೂರಿಂಗ್ ಘಟಕವನ್ನು ಸ್ಥಾಪಿಸಿದರು ಮತ್ತು ಬೆಂಗಳೂರಿಗೆ ಕಾಫಿಯ ರುಚಿಯನ್ನು ಪಸರಿಸುವಲ್ಲಿ ದೊಡ್ಡ ಕೊಡುಗೆಯನ್ನು ನೀಡಿದರು. ಸಾಕಮ್ಮ ಅವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಪ್ರದೇಶವನ್ನು ಈಗ ಸಾಕಮ್ಮ ಗಾರ್ಡನ್ ಎಂದು ಗುರುತಿಸಲಾಗಿದೆ.