ಸಿದ್ದಾಪುರ, ಜ. ೮: ಕಾಡಾನೆ ದಾಳಿ ನಡೆಸಿ ಕುಡಿಯುವ ನೀರಿನ ಟ್ಯಾಂಕನ್ನು ಹಾನಿಗೊಳಿಸಿರುವ ಘಟನೆ ಕರಡಿ ಗೋಡು ಗ್ರಾಮದ ಶಿಲ್ಪಿ ಕಾಫಿ ತೋಟದಲ್ಲಿ ನಡೆ ದಿದೆ. ತೋಟದ ಕಾರ್ಮಿಕ ಶರವಣ ಎಂಬವರ ಮನೆಯ ಬಳಿ ಇಟ್ಟಿದ್ದ ಕುಡಿಯುವ ನೀರು ತುಂಬಿಸುವ ಪ್ಲಾಸ್ಟಿಕ್ ಟ್ಯಾಂಕ್ ಮೇಲೆ ಕಾಡಾನೆ ದಾಳಿ ನಡೆಸಿ ಹಾನಿಗೊಳಿಸಿದೆ.
ಈ ಭಾಗದಲ್ಲಿ ಕಾಡಾನೆಗಳು ಬೀಡು ಬಿಟ್ಟು ದಾಂಧಲೆ ನಡೆಸುತ್ತಿವೆ. ಕಾರ್ಮಿಕರು ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳಲು ಹಿಂದೇಟು ಹಾಕುವ ಸನ್ನಿವೇಶ ಸೃಷ್ಟಿಯಾಗಿದೆ.