ಕೂಡಿಗೆ, ಜ. ೮: ಗುಮ್ಮನಕೊಲ್ಲಿ ಶ್ರೀ ಬಸವೇಶ್ವರ ಯುವಕ ಸಂಘದ ನಡೆಯಿತು. ಪಂದ್ಯಾವಳಿಯ ಉದ್ಘಾಟನೆಯನ್ನು ಶಾಲಾ ಮುಖ್ಯ ಶಿಕ್ಷಕಿ ಸಾಕಮ್ಮ, ನೆರವೇರಿಸಿ ಮಾತನಾಡಿದರು. ಕ್ರೀಡಾಕೂಟದ ಲೀಗ್ ಪಂದ್ಯದಲ್ಲಿ, ಟೀಮ್ ಕನ್ನಂಬಾಡಮ್ಮ, ಎಸ್.ಆರ್. ಫ್ರೆಂಡ್ಸ್, ಆರ್.ಸಿ.ಜಿ, ಟೀಮ್ ಪ್ರಣೀತ್, ಹೆಚ್.ಎಂ. ಬ್ರದರ್, ಜೈ ಫ್ರೆಂಡ್ಸ್ ತಂಡಗಳು ಭಾಗವಹಿಸಿದ್ದವು.

ಈ ಸಂದರ್ಭ ಶ್ರೀ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಮಣಿ ಕುಮಾರ್, ಇಂಜಿನಿಯರ್ ಶೈಜನ್ ಕೆ. ಪೀಟರ್, ರವಿಕುಮಾರ್, ಸೈನಿಕ ಮಹೇಂದ್ರ ಸೋಮಪ್ಪ, ಅವಿನಾಶ್ ಸೇರಿದಂತೆ ಸಮಿತಿಯ ನಿರ್ದೇಶಕರು, ಸದಸ್ಯರು ಮತ್ತು ಶಾಲಾ ಶಿಕ್ಷಕರು ಭಾಗವಹಿಸಿದ್ದರು.