ಸಿದ್ದಾಪುರ, ಜ. ೮: ಸಿದ್ದಾಪುರದ ಶ್ರೀ ದುರ್ಗಾ ಭಗವತಿ ದೇವಾಲಯದಲ್ಲಿ ತಿರು ಮಹೋತ್ಸವ ಕಾರ್ಯಕ್ರಮಗಳು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ನಾಲ್ಕು ದಿನಗಳು ವಿಜೃಂಭಣೆಯಿAದ ನಡೆದವು.
ಕೇರಳ ರಾಜ್ಯದ ತಳಿಪರಂಬ್ ರಾಜರಾಜೇಶ್ವರಿ ದೇವಾಲಯದ ಬ್ರಹ್ಮಶ್ರೀ ಈಡವಲತ್ ಪುಡಯೂಋ ಮನ ಕುಬೇರನ್ ನಂಬೂದರಿ ಪಾಡ್ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದುರ್ಗಾ ಭಗವತಿ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. ಪುಣ್ಯಾಹ, ಪ್ರಾಸಶುದ್ಧಿ, ವಾಸ್ತುಬಲಿ, ದೀಪಾರಾಧನೆ, ತಿಕೊಡಿಯೇಟಂ, ಅತ್ತಾಯಪೂಜೆ, ಮಹಾಪೂಜೆ, ಮಹಾಗಣಪತಿ ಹೋಮ, ಉಷಾ ಪೂಜೆ, ಮಹಾ ಸುದರ್ಶನ ಹೋಮ, ಮಹಾ ಮೃತ್ಯುಂಜಯ ಹೋಮ, ನವಗಂ, ಪಂಚಗವ್ಯA ಕಲಶಾಭಿಷೇಕ ಹಾಗೂ ಭಗವತಿ ಸೇವೆ, ಸಹಸ್ತದೀಪಾ, ಉಷಾಪೂಜೆ, ಗುಳಿಗ, ನಾಗದೇವರಿಗೆ ಪೂಜೆಗಳು ನೆರವೇರಿದವು. ದೇವಿಗೆ ಪೊಂಗಾಲ, ಮಹಾಪೂಜೆ ತಡಂಬ್ ನೃತ್ಯ ನಡೆದವು.
ಪೂಜಾ ಕಾರ್ಯಗಳ ಕೊನೆಯ ದಿನದಂದು ಬಲಿಬಿಂಬದ ಮೆರವಣಿಗೆಯು ಶ್ರೀ ದುರ್ಗಾ ಭಗವತಿ ದೇವಾಲಯದಿಂದ ಚಂಡೆಯೊAದಿಗೆ ಸಿದ್ದಾಪುರದ ಬಸ್ಸು ನಿಲ್ದಾಣದವರೆಗೆ ತೆರಳಿ ಹಿಂತಿರುಗಿ ದೇವಾಲಯಕ್ಕೆ ಆಗಮಿಸಿತು. ಮೆರವಣಿಗೆಯ ಉದ್ದಕ್ಕೂ ವಿವಿಧ ದೇವತೆಗಳ ಕಲಾಕೃತಿಗಳು ಶೋಭಯಾತ್ರೆಯಲ್ಲಿ ಸಾಗಿದವು. ಮೆರವಣಿಗೆಯಲ್ಲಿ ಐದು ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ದೇವಾಲಯದ ವತಿಯಿಂದ ನಾಲ್ಕು ದಿನಗಳ ಕಾಲ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಭಗವತಿ ದೇವಾಲಯದ ಪ್ರಮುಖ ರಾದ ರಸಿತಾ ಹಾಗೂ ಇನ್ನಿತರರು ಹಾಜರಿದ್ದರು. ದೇವಾಲಯವು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು.