ಶ್ರೀಮಂಗಲ, ಜ. ೭: ಗೋಣಿಕೊಪ್ಪಲು ಲೋಪಾಮುದ್ರ ಕಣ್ಣಿನ ಆಸ್ಪತ್ರೆ ಮತ್ತು ಪೊನ್ನಂಪೇಟೆ ಬಾರ್ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ಪೊನ್ನಂಪೇಟೆ ನ್ಯಾಯಾಲಯದ ಆವರಣದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ನ್ಯಾಯಾಧೀಶರಾದ ಆಶಾ ಹಾಗೂ ಮಂಜುನಾಥ್ ಅವರು ಭಾಗವಹಿಸಿ ಮಾತನಾಡಿ, ಉಚಿತ ಕಣ್ಣಿನ ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು. ವಕೀಲರು, ನ್ಯಾಯಾಲಯಕ್ಕೆ ಆಗಮಿಸಿದ ಕಕ್ಷಿದಾರರು ತಮ್ಮ ಕಣ್ಣುಗಳನ್ನು ಪರೀಕ್ಷಿಸಿ ಶಿಬಿರದ ಉಪಯೋಗವನ್ನು ಪಡೆದುಕೊಂಡರು.
ಈ ಸಂದರ್ಭ ಪೊನ್ನಂಪೇಟೆ ಬಾರ್ ಅಸೋಸಿಯೇಷನ್ ಅಧ್ಯಕ್ಷ ಕೆ.ಡಿ. ಮುತ್ತಪ್ಪ, ಕಾರ್ಯದರ್ಶಿ ಅಜ್ಜಮಾಡ ಮೋನಿ ಕಾಳಪ್ಪ, ಲೋಪಮುದ್ರ ಕಣ್ಣಿನ ಆಸ್ಪತ್ರೆಯ ತಾಂತ್ರಿಕ ಸಿಬ್ಬಂದಿಗಳು ಸೇರಿದಂತೆ ವಕೀಲರ ಸಂಘದ ಪ್ರಮುಖರು ಭಾಗವಹಿಸಿದ್ದರು.