ಐಗೂರು, ಜ. ೮: ಸೋಮವಾರಪೇಟೆ ತಾಲೂಕಿ ನಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ವರ್ಷಗಳು ಉರುಳುತ್ತಿದ್ದಂತೆ ಮಕ್ಕಳ ಹಾಜರಾತಿ ಸಂಖ್ಯೆಯು ಗಣನೀಯ ವಾಗಿ ಇಳಿಮುಖವಾಗುತ್ತಿದೆ. ಒಂದೊAದಾಗಿ ಸರ್ಕಾರಿ ಶಾಲೆಗಳ ಬಾಗಿಲುಗಳು ಮುಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಕಟ್ಟಡಗಳು ಮತ್ತು ಮೈದಾನಗಳು ಮಾತ್ರ ಉಳಿಯುವ ಲಕ್ಷಣಗಳು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿವೆ. ಆದರೆ ಐಗೂರು ಗ್ರಾ.ಪಂ. ವ್ಯಾಪ್ತಿಯ ಯಡವನಾಡಿನ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆಯು ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಹೆಚ್ಚಿನ ಹಾಜರಾತಿ ಕಂಡು ಬರುತ್ತಿದೆ.

೧೯೭೯ರಲ್ಲಿ ಕೊಡಗು ಜಿಲ್ಲಾ ಪಂಚಾಯಿತಿಯ ಅನುದಾನದಿಂದ ಸ್ಥಾಪನೆಯಾಗಿ ಪ್ರಸ್ತುತ ಈಗ ಒಂದರಿAದ ಏಳನೇ ತರಗತಿವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸರ್ಕಾರದ ಮಂಜೂರಾತಿ ಮಕ್ಕಳ ಒಟ್ಟು ಸಂಖ್ಯೆ ೧೨೫ ಆಗಿದೆ. ಈಗ ಶಾಲೆಯಲ್ಲಿ ೧೪೭ ಸಂಖ್ಯೆಯ ದಾಖಲೆಯ ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದು, ಮಂಜೂರಾತಿ ಸಂಖ್ಯೆಗಿAತ ೨೨ ಮಕ್ಕಳು ಹೆಚ್ಚಿಗೆ ವ್ಯಾಸಂಗ ಮಾಡುತ್ತಿದ್ದಾರೆ. ಮುಖ್ಯೋಪಾ ಧ್ಯಾಯರು ಸೇರಿ ಎಂಟು ಜನ ಅಧ್ಯಾಪಕರಿದ್ದು, ಹೊರ ಜಿಲ್ಲೆಗಳಾದ ಶಿವಮೊಗ್ಗದಿಂದ ಎರಡು ಜನ, ಹಾಸನದಿಂದ ಮೂರು ಜನ, ಚಾಮರಾಜನಗರದಿಂದ ಎರಡು, ಜಿಲ್ಲೆಯ ವಿವಿಧ ಭಾಗಗಳಿಂದ ೧೮ ಜನ ಮಕ್ಕಳು, ಮತ್ತು ಸ್ಥಳೀಯ ೧೧೦ ಮಕ್ಕಳು ಸೇರಿ ಒಟ್ಟು ೧೪೭ ಸಂಖ್ಯೆಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಆಹಾರ, ಜೊತೆಗೆ ಹಾಲು, ಮೊಟ್ಟೆ, ಚಿಕನ್ ಮತ್ತು ಮುದ್ದೆ ಊಟದ ವ್ಯವಸ್ಥೆ ಇದ್ದು, ಸರ್ಕಾರದಿಂದ ಸ್ಮಾರ್ಟ್ ಬೋರ್ಡ್ ಬಿಡುಗಡೆ ಯಾಗಿದ್ದು, ಕಂಪ್ಯೂಟರ್ ಬ್ಲಾಕ್, ಟಿ.ವಿ. ಸೌಲಭ್ಯ ಇದ್ದರೂ, ನೆಟ್ವರ್ಕ್ ಸಮಸ್ಯೆಯಿದೆ. ಸ್ನಾನಕ್ಕೆ ಸೋಲಾರ್ ವ್ಯವಸ್ಥೆ, ಬಟ್ಟೆ ಒಗೆಯಲು ವಾಷಿಂಗ್ ಮಿಷನ್ ಸೌಲಭ್ಯವಿದ್ದು ಎಲ್ಲಾ ಸೌಲಭ್ಯಗಳ ಪ್ರಯೋಜನದಿಂದಾಗಿ ಈ ಶಾಲೆಗೆ ಹೆಚ್ಚಿನ ಪೋಷಕರು ಮಕ್ಕಳನ್ನು ದಾಖಲಿಸಿದ್ದಾರೆ. ಆದರೆ ಈ ಶಾಲೆಯ ಮುಖ್ಯೋಪಾಧ್ಯಾ ಯರಾದ ರಜನಿಕಾಂತ್ ಅವರನ್ನು ‘ಶಕ್ತಿ’ಯ ಪರವಾಗಿ ಶಾಲೆಯಲ್ಲಿ ಸಂದರ್ಶಿಸಿದಾಗ, ಈ ಶಾಲೆಯಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಗಳಿದ್ದರೂ ಮಕ್ಕಳಿಗೆ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಸುಮಾರು ೪೪ ವರ್ಷದಿಂದ ಆಟದ ಮೈದಾನ ಇಲ್ಲದೆ ತಾಲೂಕಿನಲ್ಲಿ ನಡೆಯುವ ಎಲ್ಲಾ ಕ್ರೀಡಾಕೂಟದಿಂದ ವಂಚಿತರಾಗಿದ್ದಾರೆ. ಜಿಲ್ಲಾಮಟ್ಟದಲ್ಲಿ ರಾಜ್ಯಮಟ್ಟದಲ್ಲಿ ಎಷ್ಟೋ ಕ್ರೀಡಾಕೂಟ ಗಳಲ್ಲಿ ಭಾಗವಹಿಸಿ ಬೆಳಗಬೇಕಾದ ಎಷ್ಟೋ ಕ್ರೀಡಾಪ್ರತಿಭೆಗಳು ಅವಕಾಶ ವಂಚಿತರಾಗಿದ್ದಾರೆ. ಜೊತೆಗೆ ಮಕ್ಕಳು ಪಾಠ ಪ್ರವಚನಗಳನ್ನು ಮುಗಿಸಿದ ನಂತರ ನಿದ್ರಿಸಲು ಇರುವ ವಸತಿ ನಿಲಯವು ಹಳೆಯ ಹಂಚಿನ ಮೇಲ್ಚಾವಣಿಯ ಮನೆಯ ಕಟ್ಟಡವಾಗಿದ್ದು, ಮೇಲ್ಚಾವಣಿಗೆ ಅಳವಡಿಸಿರುವ ಮರಗಳು ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಗೋಡೆಗಳು ಶಿಥಿಲಾವಸ್ಥೆಗೆ ತಲುಪಿದೆ. ವಸತಿಗೃಹಕ್ಕೆ ಯೋಗ್ಯವಾಗಿರುವುದಿಲ್ಲ. ಸರ್ಕಾರ ಮತ್ತು ಇಲಾಖಾಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ, ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿರುವ ಈ ಸಂದರ್ಭದಲ್ಲಿ ಗಣನೀಯವಾಗಿ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಮುಂದಿರುವ ಈ ಶಾಲೆಗೆ ಕಳೆದ ೪೪ ವರ್ಷಗಳಿಂದ ಕೈಗೂಡದ ಆಟದ ಮೈದಾನ ಜೊತೆಗೆ ಉತ್ತಮ ವಿದ್ಯಾರ್ಥಿ ನಿಲಯ ಒದಗಿಸಿಕೊಟ್ಟರೆ ಮುಂದಿನ ದಿನಗಳಲ್ಲಿ ಈ ಶಾಲೆ ಆಂಗ್ಲ ಮಾಧ್ಯ ಮದ ಬೇಡಿಕೆ ಇರುವ ಶಾಲೆಯಾಗಿ ಮಾರ್ಪಾಡಾ ಗುವುದರಲ್ಲಿ ಸಂಶಯವಿಲ್ಲ ಎಂಬುದಾಗಿ ಪೋಷಕರು, ಅಧ್ಯಾಪಕ ವೃಂದದವರು ಮತ್ತು ಗ್ರಾಮ ಸ್ಥರು ತಮ್ಮ ಅಳಲನ್ನು ತೋಡಿ ಕೊಂಡಿದ್ದಾರೆ. - ಸುಕುಮಾರ