ಚೆಯ್ಯಂಡಾಣೆ, ಜ. ೭: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಕುವಲೆಕ್ಕಾಡು ಗ್ರಾಮದಲ್ಲಿ ರೂ. ೨೦ ಲಕ್ಷ ವೆಚ್ಚದಲ್ಲಿ ನಿರ್ಮಾಣಕ್ಕೆ ಉದ್ದೇಶಿಸಿರುವ ನೂತನ ಅಂಗನವಾಡಿ ಕೇಂದ್ರಕ್ಕೆ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಭೂಮಿಪೂಜೆ ನೆರವೇರಿಸಿದರು.

ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರೂ. ೧೫ ಲಕ್ಷ ಹಾಗೂ ಗ್ರಾಮ ಪಂಚಾಯಿತಿಯ ನರೇಗಾ ಯೋಜನೆಯ ರೂ. ೫ ಲಕ್ಷ ಅನುದಾನದಲ್ಲಿ ಇಲ್ಲಿ ನೂತನ ಅಂಗನವಾಡಿ ಕೇಂದ್ರ ನಿರ್ಮಾಣವಾಗಲಿದೆ. ಕೇಂದ್ರ ನಿರ್ಮಿಸಲು ಸ್ಥಳವನ್ನು ದಾನವಾಗಿ ನೀಡಿದ ಕೊಳಕೇರಿ ಕುವಲೆಕ್ಕಾಡು ನಿವಾಸಿ ಸಲೀಂ ಹಾಜಿ ಅವರ ಸಹಕಾರವನ್ನು ಸ್ಮರಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾವತಿ, ಸದಸ್ಯರಾದ ಕೆ.ವೈ. ಅಶ್ರಫ್, ಅಮೀನಾ, ಕೆ.ಎ. ಇಸ್ಮಾಯಿಲ್, ಸಾಬ ತಿಮ್ಮಯ್ಯ, ಗಂಗಮ್ಮ, ಮಾಜಿ ಸದಸ್ಯ ಹ್ಯಾರಿಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಸೀತಾಲಕ್ಷಿö್ಮ, ಅಂಗನವಾಡಿ ಶಿಕ್ಷಕಿ ಸಫ್ರೀನ, ತಾಲೂಕು ಪಂಚಾಯಿತಿ ಅಭಿಯಂತರ ಪ್ರತೀಕ್, ಟಿ.ಎ. ಇಬ್ರಾಹಿಂ, ಜಾಲೆಂದ್ರ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮತ್ತಿತರರು ಹಾಜರಿದ್ದರು.