ನಾಪೋಕ್ಲು, ಜ. ೭: ಎಸ್.ವೈ.ಎಸ್. ಕೊಡಗು ಜಿಲ್ಲಾ ಸಮಿತಿಯ ವತಿ ಯಿಂದ ಆಯೋಜಿಸಿದ್ದ ಜಿಲ್ಲಾ ಕಹ್ಫುಲ್ ವರಾ ಮಜ್ಲಿಸುನ್ನೂರ್ ಬೃಹತ್ ಅಧ್ಯಾತ್ಮಿಕ ಸಂಗಮ ಕಾರ್ಯಕ್ರಮ ಶುಕ್ರವಾರ ಸಂಜೆ ಸ್ಥಳೀಯ ಮಾರುಕಟ್ಟೆ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಉಪ ಖಾಝಿಗಳಾದ ಅಬ್ದುಲ್ಲಾ ಉಸ್ತಾದ್ ಮಾತನಾಡಿ, ಆಧ್ಯಾತ್ಮಿಕ ಉಲಮಾ ಒಕ್ಕೂಟದ ಯುವಜನ ಘಟಕವಾದ ಸುನ್ನಿ ಯುವಜನ ಸಂಘ ಕಳೆದ ೭೦ ವರ್ಷಗಳಿಂದ ಧಾರ್ಮಿಕ ಮತ್ತು ಶೈಕ್ಷಣಿಕ ಹಾಗೂ ಜನಪರ ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಸಂಘಟನೆಯಾಗಿದೆ. ಶಾಂತಿ ಹಾಗೂ ಸಮಾಧಾನ ಮತ್ತು ಸಹಬಾಳ್ವೆಯನ್ನು ಸಾರುವ ಧರ್ಮದ ವಿಶ್ವಾಸ ವಿಚಾರಗಳನ್ನು ಸಮಾಜಕ್ಕೆ ಸಮರ್ಪಿಸಿದ ಸಮಸ್ತ ಸಂಘಟನೆ ಎಂದು ತನ್ನ ಅನುಭವ ಹಾಗೂ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮಜ್ಲಿಸುನ್ನೂರ್ ನೇತೃತ್ವ ವಹಿಸಿದ ಪಾಣಕ್ಕಾಡ್ ಮುಈನ್ ಅಲಿ ಶಿಹಾಬ್ ತಂಙಳ್ ನೆರೆದ ಜನರನ್ನು ಉದ್ದೇಶಿಸಿ ಮಾತನಾಡಿ, ಅಧ್ಯಾತ್ಮಿಕತೆಯಿಂದ ಜನ ಮನಸ್ಸುಗಳನ್ನು ಸಕಾರಾತ್ಮಕವಾಗಿ ಬದಲಾಯಿಸಿ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದರು. ಚೆರಿಯಪರಂಬು ದರ್ಗಾ ಝಿಯಾರತ್ ಹಿರಿಯ ವಿದ್ವಾಂಸರಾದ ಹುಸೈನ್ ಮುಸ್ಲಿಯಾರ್ ಕುಂಜಿಲ ಉಸ್ತಾದರು ವಹಿಸಿದ್ದರು. ಮಹ್ ಮೂನ್ ಹುದವಿ ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮದ ಮೊದಲಿಗೆ ಸ್ವಾಗತ ಸಮಿತಿ ಜನರಲ್ ಕನ್ವೀನರ್ ಹಮೀದ್ ಹಾಜಿ ಬೆಟ್ಟಗೇರಿ ಧ್ವಜಾರೋಹಣ ಮಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ವೈ. ಎಸ್. ಕೊಡಗು ಜಿಲ್ಲಾ ಅಧ್ಯಕ್ಷ ಸಿ.ಪಿ.ಎಂ. ಬಶೀರ್ ಹಾಜಿ ವಹಿಸಿದ್ದರು. ಪ್ರಾಸ್ತಾವಿಕ ಭಾಷಣವನ್ನು ಎಸ್.ವೈ.ಎಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ನಿರ್ವಹಿಸಿದರು. ಈ ಸಂದರ್ಭ ಮಾಜಿ ಎಂಎಲ್ಎ ಇಬ್ರಾಹಿಂ ಮಾಸ್ಟರ್, ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಿ.ಎಂ. ಖಾಸಿಂ, ನಾಪೋಕ್ಲು ಪಟ್ಟಣ ಜುಮ್ಮಾ ಮಸೀದಿ ಅಧ್ಯಕ್ಷ ಎಂ.ಹೆಚ್ ಅಬ್ದುಲ್ ರೆಹಮಾನ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಯಾಕುಬ್, ನಾಪೋಕ್ಲು ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಮಹಮ್ಮದ್ ಹಾಜಿ, ನಾಪೋಕ್ಲು ಜಮಾ ಮಸೀದಿಯ ಮಾಜಿ ಅಧ್ಯಕ್ಷ ಪಿ.ಎಂ. ಅಬ್ದುಲ್ ಅಝೀಜ್, ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಮೊಹಮ್ಮದ್ ಟಿ.ಎ, ನಾಪೋಕ್ಲು ಪಂಚಾಯಿತಿ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಕೆ.ಎ, ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಮೈದು ಕೊಟ್ಟಮುಡಿ, ನಾಪೋಕ್ಲು ಪಂಚಾಯಿತಿ ಸದಸ್ಯ ಕುರೇಶಿ, ಉದ್ಯಮಿ ಮನ್ಸೂರ್ ಆಲಿ ಎಂ.ಎ, ಸಂಘಟಕ ಪಿ.ಎಂ. ರಶೀದ್ ಸೇರಿದಂತೆ ಧರ್ಮ ಗುರುಗಳು ಹಾಗೂ ಇತರ ಸಂಘ-ಸAಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮುದಾಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.