ಶನಿವಾರಸAತೆ, ಜ. ೮ : ಅಯೋಧ್ಯೆ ಶ್ರೀರಾಮ ಮಂದಿರ ಹಾಗೂ ದತ್ತಪೀಠದ ಹೋರಾಟದಲ್ಲಿ ಪಾಲ್ಗೊಂಡಿದ್ದ ಕರಸೇವಕರು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ೩೦ಕ್ಕೂ ಅಧಿಕ ವರ್ಷದ ಬಳಿಕ ಪ್ರಕರಣ ದಾಖಲಿಸುವ ಮೂಲಕ ಹಿಂದೂ ವಿರೋಧಿ ನೀತಿಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿರುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಶನಿವಾರಸಂತೆಯ ವಿಶ್ವ ಹಿಂದೂ ಪರಿಷತ್ - ಭಜರಂಗದಳÀ ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ನಾಡ ಕಚೇರಿ ಕಂದಾಯ ನಿರೀಕ್ಷಕ ಹೇಮಂತ್ ಅವರ ಮೂಲಕ ಮನವಿ ಸಲ್ಲಿಸಿತು.ಸರ್ಕಾರ ಡಿಜೆಹಳ್ಳಿ, ಕೆಜೆಹಳ್ಳಿ ಮೊಕದ್ದಮೆಗಳನ್ನು ಹೇಗೆ ವಜಾ ಮಾಡಿದೆಯೋ ಅದೇ ರೀತಿಯಲ್ಲಿ ಹಿಂದೂ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ವಜಾ ಮಾಡಬೇಕು ಎಂದು ಮನವಿಯಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಧನಂಜಯ್, ಮುಖಂಡ ಗುಡುಗಳಲೆ ದಿಲೀಪ್, ಭಜರಂಗದಳ ಮುಖಂಡ ರಾದ ತನ್ಮಯ್, ಹೇಮಂತ್, ದಯಾ, ಶನಿವಾರಸಂತೆ ಪಟ್ಟಣ ಭಜರಂಗದಳ ಕಾರ್ಯ ಕರ್ತರು ಆಗ್ರಹಿಸಿದರು.