ವೀರಾಜಪೇಟೆ, ಜ. ೬: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಡಿ. ಗ್ರೂಪ್ ಮತ್ತು ಸ್ವಚ್ಛತಾ ಸಿಬ್ಬಂದಿಗಳಿಗೆ ಮೂರು ತಿಂಗಳಿAದ ವೇತನ ದೊರಕದೆ ಕಂಗಾಲಾಗಿದ್ದಾರೆ. ವೇತನಕ್ಕಾಗಿ ಮೀಸಲಿಟ್ಟಿದ್ದ ರೂ. ೧೦ ಲಕ್ಷ ಹಣವನ್ನು ಇತರ ಸಾಧನ ಸಲಕರಣೆಗಳ ಖರೀದಿ ಮಾಡಿ ದುರ್ಬಳಕೆ ಮಾಡಿಕೊಂಡಿರುವದು ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಎಂದು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಸ್ವಚ್ಛತಾ ಮತ್ತು ಇತರ ಕಾರ್ಮಿಕರ ಸಂಘದ ಅಧ್ಯಕ್ಷ ಪಿ.ಆರ್. ಭರತ್ ಆಗ್ರಹಿಸಿದ್ದಾರೆ.
ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ. ಗ್ರೂಪ್ ೧೬ ಸಿಬ್ಬಂದಿಗಳು ಮತ್ತು ಸ್ವಚ್ಛತಾ ವಿಭಾಗದಲ್ಲಿ ೧೨ ಮಂದಿ ನೌಕಕರು ಒಟ್ಟು ೨೬ ಮಂದಿ ಸಿಬ್ಬಂದಿಗಳು ನಿಯೋಜಿತರಾಗಿದ್ದಾರೆ. ಸಿಬ್ಬಂದಿಗಳಿಗೆ ಮೂರು ತಿಂಗಳಿAದ ವೇತನ ದೊರಕಿರುವುದಿಲ್ಲ. ವೇತನ ದೊರಕದೆ ಕಾರ್ಮಿಕರ ಸ್ಥಿತಿ ಅತಂತ್ರಗೊAಡಿದೆ. ಕುಟುಂಬ ನಿರ್ವಹಣೆಯು ಸಂಕಷ್ಟಕ್ಕೆ ಸಿಲುಕಿದೆ. ಓಷಿಯನ್ ಸೆಕ್ಯೂರಿಟಿ ಸರ್ವಿಸಸ್ ಮತ್ತು ಅಯೋಧ್ಯ ಅಸೋಸಿಯೆಟ್ಸ್ ಸಂಸ್ಥೆ ಗಳಿಗೆ ಸಿಬ್ಬಂದಿಗಳಿಗೆ ವೇತನ ನೀಡುವ ಜವಬ್ದಾರಿಯನ್ನು ನೀಡಲಾಗಿತ್ತು. ಆಸ್ಪತ್ರೆಯ ಮೇಲ್ವಿಚಾರಕರು ಮತ್ತು ಗುತ್ತಿಗೆ ಪಡೆದ ಸಂಸ್ಥೆಗಳೊAದಿಗೆ ವೇತನ ಬಗ್ಗೆ ಮಾಹಿತಿ ಬಯಸಿದಾಗ ಸುಮಾರು ಐದು ತಿಂಗಳುಗಳಿAದ ಯಾವುದೇ ಬಿಲ್ ಸರ್ಕಾರದಿಂದ ಪಾವತಿಯಾಗಿರುವುದಿಲ್ಲ, ಮುಂದೆ ಬಿಲ್ ಬರುವ ನಂಬಿಕೆಯಿAದ ಹಲವು ಭಾರಿ ಸಂಸ್ಥೆಯೇ ವೇತನವನ್ನು ನೀಡಿದೆ. ವೇತನ ಬಿಲ್ ಪಾವತಿಯಾದ ನಂತರ ಸಿಬ್ಬಂದಿಗಳ ಖಾತೆಗೆ ಹಣ ಭರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಹಣ ದುರ್ಬಳಕೆ
ಸಿಬ್ಬಂದಿಗಳ ವೇತನಕ್ಕಾಗಿ ಆಸ್ಪತ್ರೆಯಲ್ಲಿ ರೂ.೧೦ಲಕ್ಷ ಹಣ ಮೀಸಲಿಡಲಾಗುತ್ತದೆ. ಈ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿಗಳಲ್ಲಿ ಮಾಹಿತಿ ಬಯಸಿದ ಸಂದರ್ಭ ದಿನಾಂಕ ೨೪-೦೬-೨೦೨೨ ರಲ್ಲಿ ೪,೯೯,೫೯೦ ರೂ ಮತ್ತು ತಾ. ೨೬-೦೬-೨೦೨೨ ರಲ್ಲಿ ೪,೯೯,೬೦೦ ರೂಗಳ ಮೊತ್ತದ ಹಣ ಸಿಬ್ಬಂದಿಗಳ ವೇತನ ನೀಡಲು ಆಡಳಿತಾಧಿಕಾರಿಗಳ ಖಾತೆಯಲ್ಲಿ ಜಮಾಗೊಂಡಿದೆ. ಅಂದಿನ ಆಸ್ಪತ್ರೆಯ ಆಡಳಿತಾಧಿಕಾರಿಗಳಾಗಿದ್ದ ಡಾ. ಶ್ರೀನಿವಾಸ್ ಎಂಬುವವರು ಸಿಬ್ಬಂದಿ ವೇತನ ಹಣವನ್ನು ಕೊರೊನಾದ ನೆಪವೊಡ್ಡಿ ಆಸ್ಪತ್ರೆಗೆ ಹಾಸಿಗೆ, ತಲೆ ದಿಂಬು ಕವರ್, ಹೊದಿಕೆ, ಟರ್ಕಿ ಟವೆಲ್ ಖರೀದಿಗಾಗಿ ವಿನಿಯೋಗಿಸಿದ್ದಾರೆ. ಸಿಬ್ಬಂದಿಗಳ ವೇತನದ ಹಣವನ್ನು ಇತರ ಸಾಧನ ಖರೀದಿಗೆ ವೆಚ್ಚ ಮಾಡಿರುತ್ತಾರೆ. ಆದರೆ ಆಸ್ಪತ್ರೆಯಲ್ಲಿರುವ ಹಾಸಿಗೆಗಳು ಮುರುಕಲಾಗಿದೆ. ಹೊಸ ಹೊದಿಕೆಗಳು ಕಾಣದಾಗಿದೆ. ಹೊಸತು ಎಂಬುದು ಯಾವುದು ಇಲ್ಲ. ಅಂದರೆ ಇಲ್ಲಿ ಹಣದ ಅವ್ಯವಹಾರವಾಗಿದೆ ಎಂದು ಮೆಲ್ನೋಟಕ್ಕೆ ಕಂಡುಬAದಿದೆ ಎಂದು ಆರೋಪಿಸಿದರು.
ತನಿಖೆಯಾಗಬೇಕು
ಸಂಕಷ್ಟದಲ್ಲಿರುವ ಸಿಬ್ಬಂದಿಗಳು ಕಾರ್ಮಿಕ ಸಂಘಟನೆಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತಿಳಿದು ಬಂದಿದೆ. ಅತಂತ್ರದಲ್ಲಿರುವ ಸಿಬ್ಬಂದಿಗಳಿಗೆ ತಕ್ಷಣವೇ ಜಾರಿಗೆ ಬರುವಂತೆ ಶೀಘ್ರವಾಗಿ ವೇತನ ನೀಡುವಂತಾಗ ಬೇಕು. ಅಲ್ಲದೆ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಶ್ರೀನಿವಾಸ್ ಅವರ ಕರ್ತವ್ಯ ವೇಳೆಯಲ್ಲಿ ಸುಮಾರು ೧೦ ಲಕ್ಷ ರೂ ಹಣ ವಿನಿಯೋಗ ಮಾಡಿರುವ ಬಗ್ಗೆ ಸಮಗ್ರ ತನಿಖೆಯಾಗಬೇಕು. ೧೦ ದಿನಗಳ ಒಳಗಡೆ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಸಂಘಟನೆಯಿAದ ಆಸ್ಪತ್ರೆಯ ಮುಂದೆ ಧರಣಿ ಮತ್ತು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.