ಸೋಮವಾರಪೇಟೆ, ಜ. ೭: ಇಲ್ಲಿನ ಎಪಿಸಿಎಂಎಸ್‌ನ ನೂತನ ಅಧ್ಯಕ್ಷರಾಗಿ ಮಹೇಶ್ ತಿಮ್ಮಯ್ಯ ಅವರು ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಆಯ್ಕೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಮಹೇಶ್ ತಿಮ್ಮಯ್ಯ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಜಿಲ್ಲಾ ನೋಂದಾವಣಾಧಿಕಾರಿ ಕಚೇರಿಯ ವಿಜಯೇಂದ್ರ ಅವರು ಕಾರ್ಯನಿರ್ವಹಿಸಿದರು. ಈ ಸಂದರ್ಭ ಉಪಾಧ್ಯಕ್ಷ ಟಿ.ಕೆ. ರಮೇಶ್, ಸದಸ್ಯ ರಾದ ಜಿ.ಬಿ. ಸೋಮಯ್ಯ, ಬಿ.ಎಂ. ರಾಮ್‌ಪ್ರಸಾದ್, ಎಸ್.ಎ. ಪ್ರತಾಪ್, ಡಿ.ಹೆಚ್. ಉಮೇಶ್ ರಾಜ್ ಅರಸ್, ಎಂ.ಸಿ. ರಾಘವ, ಯು.ಎಂ. ಬಸವರಾಜು, ಬಿ.ಎಸ್. ಸುಶೀಲ, ಹೆಚ್.ವಿ. ಸುಜಾತ ಹಾಗೂ ಕೆ.ಯು. ಶ್ಯಾಮಲ ಇದ್ದರು.