ಗುಡ್ಡೆಹೊಸೂರು, ಜ. ೬: ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆ ಎಲೆಕ್ಟಾçನಿಕ್ ಮತಯಂತ್ರ ಬಳಸಿ ಮತ ಚಲಾವಣೆ ಮಾಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿತ್ತು.
ಈ ವ್ಯಾಪ್ತಿಯ ಮಾದಾಪಟ್ಟಣ, ಅತ್ತೂರು, ಬಸವನಹಳ್ಳಿ, ರಸಲ್ಪುರ ಗ್ರಾಮದ ಒಟ್ಟು ೮ ಬೂತ್ಗಳ ವ್ಯಾಪ್ತಿಗಳಲ್ಲಿ ಪ್ರತ್ಯೇಕವಾದ ಕಾರ್ಯಕ್ರಮ ನಡೆಯಿತು. ಸೆಕ್ಟರ್ ಅಧಿಕಾರಿಯಾಗಿ ಸ್ವಾತಿ ಎನ್. ಸ್ವಾಮಿ ಕಾರ್ಯನಿರ್ವಹಿಸಿದರು.
ಈ ಸಂದರ್ಭ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ಸುರೇಶ್ ಪಿ.ವಿ. ಮತ್ತು ಈ ವಿಭಾಗದ ಎಲ್ಲಾ ಬಿ.ಎಲ್.ಓ.ಗಳು ಜನರಿಗೆ ಮಾಹಿತಿ ನೀಡಿದರು. ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಎಂ.ಆರ್. ಮಾದಪ್ಪ ಮತ್ತು ಸದಸ್ಯರು ಹಾಜರಿದ್ದರು.