ಸೋಮವಾರಪೇಟೆ, ಜ. ೬: ಇಲ್ಲಿಗೆ ಸಮೀಪದ ಚೌಡ್ಲು ಗ್ರಾಮದ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಪೋಷಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಶಾಲಾ ಮೈದಾನದಲ್ಲಿ ನಡೆಯಿತು.
ಪುರುಷರಿಗೆ ವಾಲಿಬಾಲ್, ಗೋಣಿಚೀಲದ ಓಟ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವುದು ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಿತು. ಮಹಿಳೆಯರಿಗೆ ನಿಂಬೆ ಹಣ್ಣು ಮತ್ತು ಚಮಚ ಓಟ, ಸಂಗೀತ ಕುರ್ಚಿ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ರಜಿತ್ ಗಾಂಧಿ, ವ್ಯವಸ್ಥಾಪಕ ರಾಮ್ಪ್ರಸಾದ್, ಶಾಲಾ ಶಿಕ್ಷಕರು ಇದ್ದರು. ಸ್ಪರ್ಧೆಯಲ್ಲಿ ಹಲವು ಪೋಷಕರು ಪಾಲ್ಗೊಂಡಿದ್ದರು.