*ಗೋಣಿಕೊಪ್ಪ, ಜ. ೬: ಹಾತೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಉಪಯೋಗಕ್ಕೆ ಗೋಣಿಕೊಪ್ಪಲು ರೋಟರಿ ಸಂಸ್ಥೆ ವತಿಯಿಂದ ಪೀಠೋಪಕರಣಗಳನ್ನು ವಿತರಿಸಲಾಯಿತು. ನಲಿ ಕಲಿ ಮಕ್ಕಳಿಗೆ ಉಪಯೋಗವಾಗುವಂತೆ ೩೦ ಕುರ್ಚಿಗಳನ್ನು ಮತ್ತು ರೌಂಡ್ ಟೇಬಲ್‌ಗಳನ್ನು ಸಂಸ್ಥೆ ವತಿಯಿಂದ ನೀಡಲಾಯಿತು.

ತಂದೆ ತಾಯಿಗಳ, ಗುರು ಹಿರಿಯರ ತ್ಯಾಗದ ಮನೋಭಾವವನ್ನು ಅರಿತುಕೊಂಡಾಗ ತಮ್ಮೊಳಗಿನ ವ್ಯಕ್ತಿತ್ವವನ್ನು ಬೆಳಗಿಸಿಕೊಳ್ಳಲು ಸಾಧ್ಯವಾಗಬಲ್ಲದು ಎಂದು ಡಾಕ್ಟರ್ ಚಂದ್ರಶೇಖರ್ ಈ ಸಂದರ್ಭ ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನಾಡಿದರು.

ಗೋಣಿಕೊಪ್ಪ ರೋಟರಿ ಸಂಸ್ಥೆಯ ಅಧ್ಯಕ್ಷ ಅರುಣ್ ತಮ್ಮಯ್ಯ, ಕಾರ್ಯದರ್ಶಿ ಮೋಹನ್, ಸದಸ್ಯರುಗಳಾದ ಕೊಡಂದೇರ ಮುದ್ದಪ್ಪ, ಶೋಭಾ ಮುದ್ದಪ್ಪ, ನವೀನ್, ಡೀನ, ಮುಖ್ಯ ಶಿಕ್ಷಕಿ ಮಾಲಿನಿ, ಸಹ ಶಿಕ್ಷಕರುಗಳಾದ ಬಿ.ಕೆ ದಮಯಂತಿ, ಬಿ.ಸಿ ಸುರೇಶ್ ಇದ್ದರು.