ಸಿದ್ದಾಪುರ, ಜ. ೬: ನೆಲ್ಲಿಹುದಿಕೇರಿಯಲ್ಲಿ ನಿವೃತ್ತ ಯೋಧ ಸುಬೇದಾರ್ ಮೋಹನ್ ಟಿ.ಕೆ. ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್ಎನ್ಡಿಪಿ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಭಾರತೀಯ ಸೇನೆಯು ಭಾರತ ದೇಶದ ಸೇವೆಗೆ ಮಾತ್ರ ಸೀಮಿತವಾಗದೇ ವಿಶ್ವದ ಸಂಕಷ್ಟಗಳಿಗೂ ನೆರವಾಗುತ್ತಿದೆ ಎಂದರು. ಗ್ರಾಮಸ್ಥರಾದ ಪಿ.ಆರ್. ಭರತ್ ಮಾತನಾಡಿ ಜೀವನದ ಅಮೂಲ್ಯ ಸಮಯವನ್ನು ದೇಶ ಸೇವೆಗೆ ಮುಡಿಪಾಗಿಟ್ಟ ಸೈನಿಕರಿಗೆ ನಿವೃತ್ತಿಯ ನಂತರವೂ ಮೂಲಭೂತ ಸೌಲಭ್ಯಗಳು ಶೀಘ್ರ ಸಿಗುವಂತಾಗಬೇಕೆAದರು.
ಈ ಸಂದÀರ್ಭ ೨೮ ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸುಬೇದಾರ್ ಟಿ.ಕೆ. ಮೋಹನ್ ಅವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಗ್ರಾಮದ ನಿವೃತ್ತ ಯೋಧರಾದ ವಿ.ಕೆ. ಪ್ರಕಾಶ್, ಕೆ.ಕೆ. ಅಶೋಕ, ರಾಮಕೃಷ್ಣ, ಯೋಗೇಶ, ಬೆನ್ನಿ, ಕೃಷ್ಣ ಇವರು ಗಳನ್ನು ಕೂಡ ಸನ್ಮಾನಿಸಲಾಯಿತು.
ಗ್ರಾ.ಪಂ. ಉಪಾಧ್ಯಕ್ಷೆ ಪ್ರಮಿಳಾ, ಸದಸ್ಯರಾದ ಎ.ಕೆ.ಹಕೀಂ, ಪ್ರಮುಖರಾದ ರಾಜನ್, ಭಾನುಪ್ರಕಾಶ್, ವಿಶ್ವನಾಥ್, ಮಧು, ನಾರಾಯಣ, ವಾಣಿ, ವೀಣಾ ಇನ್ನಿತರರು ಹಾಜರಿದ್ದರು.