ಮಡಿಕೇರಿ, ಜ. ೬: ಪುಣೆಯಲ್ಲಿ ಜರುಗುತ್ತಿರುವ ಬಿ.ಎಂ.ಪಿ.ಡಬ್ಲುö್ಯ.ಎ. ಮಾಸ್ಟರ್ಸ್ ಬ್ಯಾಡ್ ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಜಿಲ್ಲೆಯ ತಾತಪಂಡ ಜ್ಯೋತಿ ಸೋಮಯ್ಯ ಅವರು ಚಿನ್ನದ ಪದಕ ಗಳಿಸಿದ್ದಾರೆ. ೫೫+ ವಿಭಾಗದಲ್ಲಿ ಜ್ಯೋತಿ ಉತ್ತಮ ಆಟದ ಪ್ರದರ್ಶನ ನೀಡಿದ್ದು, ಸಿಂಗಲ್ಸ್ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನ ಹಾಗೂ ಡಬಲ್ಸ್ ನಲ್ಲಿಯೂ ಸಹವರ್ತಿ ಶ್ರುತಾ ಕೀರ್ತಿಯೊಂದಿಗೆ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.