ಗೋಣಿಕೊಪ್ಪಲು, ಜ. ೬: ಹಲವು ಸಮಯದಿಂದ ದಾಳಿ ನಿಲ್ಲಿಸಿದ್ದ ಹುಲಿಯು ಇದೀಗ ದ.ಕೊಡಗಿನ ಹಲವೆಡೆ ದರ್ಶನ ನೀಡುವ ಮೂಲಕ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡುಗುಂಬ ಗ್ರಾಮದಲ್ಲಿ ಮುಂಜಾನೆ ೧೦ ಗಂಟೆಯ ವೇಳೆ ಮನೆಯ ಸಮೀಪ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದೆ.

ಗ್ರಾಮದ ಚಿನಿಯಪಂಡ ಬೋಪಣ್ಣನವರಿಗೆ ಸೇರಿದ ಹಸುವನ್ನು ಎಂದಿನAತೆ ಮನೆಯ ಸಮೀಪ ಮೇಯಲು ಬಿಟ್ಟಿದ್ದರು. ೧೦ ಗಂಟೆ ಸುಮಾರಿಗೆ ಹಸುವು ಜೋರಾಗಿ ಕಿರುಚಿಕೊಂಡ ಶಬ್ದವೂ ಕೇಳಿ ಬಂದಿದೆ. ಈ ವೇಳೆ ಮನೆಯವರು ಬಂದು ನೋಡುವಷ್ಟರಲ್ಲಿ ಹುಲಿಯು ಹಸುವನ್ನು ಕೊಂದು ತೆರಳಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮದಲ್ಲಿ ಹುಲಿ ಸಂಚಾರದ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

ಮಾಹಿತಿ ತಿಳಿದ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳಾದ ಶಂಕರ್, ದಿವಾಕರ್ ಸೇರಿದಂತೆ ಇನ್ನಿತರ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಹುಲಿ ಕಾರ್ಯಾಚರಣೆ ಬಗ್ಗೆ ಕ್ರಮಕ್ಕೆ ಮುಂದಾಗಿದ್ದಾರೆ. ಕಲ್ಲಳ್ಳ ವನ್ಯಜೀವಿ ವಿಭಾಗದ ಆರ್‌ಎಫ್‌ಒ ರಾಜಶೇಖರ್, ರವಿಕಿರಣ್, ಯೋಗೇಶ್, ಮುಜಾಮಿಲ್ಲ್, ಆರ್‌ಆರ್‌ಟಿ ತಂಡ, ಕ್ಷಿಪ್ರ ಕಾರ್ಯಾಚರಣೆ ತಂಡ ಸ್ಥಳದಲ್ಲಿ ಮೊಕ್ಕಂ ಹೂಡಿದ್ದು ಹುಲಿ ಸೆರೆಗೆ ಸಂಬAಧಿಸಿದAತೆ ಬೋನನ್ನು ಅಳವಡಿಸಿದ್ದಾರೆ. ಹುಲಿಯ ಸಂಚಾರದ ಬಗ್ಗೆ ಮಾಹಿತಿ ತಿಳಿಯಲು ಹಲವು ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಅರಣ್ಯ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು ಹುಲಿಯ ಕಾರ್ಯಾಚರಣೆ ಮುಂದುವರೆದಿದೆ.

-ಹೆಚ್.ಕೆ. ಜಗದೀಶ್