ಮಡಿಕೇರಿ, ಜ. ೬: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ರಾಜ್ಯಮಟ್ಟದ ೩ನೇ ವಿಪ್ರ ಮಹಿಳಾ ಸಮ್ಮೇಳನ ಅಭಿಜಾತೆ ಬೆಂಗಳೂರಿನಲ್ಲಿ ತಾ. ೬ ಮತ್ತು ೭ ರಂದು ನಡೆಯಲಿದೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಿಳಾ ಸಮಾವೇಶದಲ್ಲಿ ಪ್ರದಾನ ಮಾಡಲಾಗುವ ಧೀಶಕ್ತಿ ಪ್ರಶಸ್ತಿಗೆ ಮಡಿಕೇರಿಯ ಸವಿತಾ ಭಟ್ ಪೂಕಳ ಆಯ್ಕೆಯಾಗಿದ್ದಾರೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಅಶೋಕ್ ಹಾರ್ನಳ್ಳಿಯವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಶಂಕರಪುರAನಲ್ಲಿರುವ ಶಂಕರ ಮಠದಲ್ಲಿ ೨ ದಿನಗಳ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ಮಡಿಕೇರಿಯ ಶೃತಿಲಯ ಭಜನಾ ತಂಡವು ಭಜನಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದೆ. ಕೊಡಗಿನ ಪ್ರೇಕ್ಷ ಭಟ್ ತಂಡ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದು, ಮಾಧ್ಯಮದಲ್ಲಿ ಮಹಿಳೆಯ ಪಾತ್ರ ವಿಚಾರ ಸಂಕಿರಣದಲ್ಲಿ ಕೊಡಗು ಜಿಲ್ಲಾ ಸಂಚಾಲಕಿ ಗೀತಾ ಸಂಪತ್ ನಿರೂಪಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.